- ಬೆಳಗು...ನಿರಂತರ,ನಿರುತ್ತರ ಪ್ರಶ್ನೆಗಳ ನಿರ್ವಾತ ಬೆಳಗು
ಮಾಸಿಹೋಗುವ ನಡುಹಗಲಿನ ಕೊರಗು
ಅವರ್ಣನಿಯ ಶಾಂತಿಯ ಸಂಜೆಯ ಬೆರಗು
ನಾಳೆಗಳ ನಿಶೆಯಲ್ಲಿ ನಿದ್ರಿಸುವ ಕತ್ತಲಿಗೆ ಮೆರಗು.
ಮರಳಿ,ಮರಳಿ ಘಟಿಸುವ ದಿನನಿತ್ಯದ ಸೊಬಗು
ಬದುಕು...ಕೊರಗು? ಹಾಸಿದೆ ಸೆರಗು.
ಜೀವನೋತ್ಸಾಹ ಬತ್ತದಿರುವ ಸೋಜಿಗ.....-----------------------------------------ಮನೆ..ಅಲ್ಲಿದೆ ನಮ್ಮನೆ, ಇಲ್ಲಿಗೆ ಬರಲಿಲ್ಲ ಸುಮ್ಮನೆ
ಕಟ್ಟುವೆ ಇಲ್ಲೇ...ಇನ್ನೊಂದು ನನ್ನದೇ ಮನೆ..
ಗುಹೆಯೇ ಮನೆಯಾದ ಕಾಲ ಒಂದಿತ್ತು
ಕಾಡೇ ಗುಡಿಯಾದ ನೋಟ ಚಿಗುರಿತ್ತು
ಮರದ ಪೊಟರೆಯನು ಮರೆಯಬಾರದಿತ್ತು
ಹೊಳೆಯೇಇಲ್ಲ ಮಣ್ಣ ಹಂಗಿನ ಕೀಮತ್ತು
ಮರಗಳೆಲ್ಲ ನನಗಾಗಿ ಬೀಳಬಾರದಿತ್ತು...
ಕಾಡ್ಗಿಚ್ಚು ಕಿಡಿ ಹಾರಿ ಕುಲುಮೆ ಕಾದಿತ್ತು
ಭೂಬಸಿರ ಚಿವುಟಿದ ಬಲವಂತದ ಆ ತಾಕತ್ತು
ಹಸಿರ ಉಸಿರಿಗೇ ಇಂದು ಕಾಡಿದೆ ಆಪತ್ತು--------------------------------------A day in the summer.What a horrible hyper-thermal morning?
but let us not take it as time for brooding
after all it is life, and should keep moving
till the final whistle is blown for a new beginning.-------------------------------------------As usual.Nothing....
should I say when always you ask me what is going on...
what can be going on for ever when in fact nothing is on?
yes..., somewhere, someone, for some reason unknown
must have gone to the moon might not return very soon.....
That is something for today "face book" should be shown
for god sake....at least today is a day you should not mourn..
Valentines day it is! Today.....yes... indeed love is reborn.....
hearts are full, time to speak out your emotion...
You think that I am too old a person to air my concern?
so let me bring it to your attention about my intention
may not be as young as you, but my spirit is not worn
like a blind man for whom everything seems to be unseen...------------------------------------------------------------------------------
ಕಾಗೆ....
ಕಾಗೆ ನಾನು ಶಾ ಲೆ ಗೆ ಎಲ್ಲರಗಿಂತ ಮುಂಚೆ ಎಂಟು ವರೆಗೆ ತಲುಪಿದೆ. ಯಾರು ಬಂದಿರಲಿಲ್ಲ. ಬರುವುದು ಇಲ್ಲ. ಕಾರಣ ಅಕ್ಟೋಬರ್ ರಜೆ, ಇನ್ನು ನಮ್ಮ ಆಫೀಸ್ ನ ಸಹೋದ್ಯೋಗಿಗಳು ಬರುವುದಕ್ಕೆ ಕನಿಷ್ಠ ಇನ್ನೊಂದುಗಂಟೆಯಾದರೂ ಬೇಕು. ಮೇಷ್ಟ್ರುಗಳು ಹಾಗು ಹುಡುಗರು ಬರುವ ಪ್ರಶ್ನೆ ಇಲ್ಲ. ಹಿಂದಿನ ರಾತ್ರಿ ಮಳೆಜೋರಾಗಿ ಬಂದುದರಿಂದ ಚಾವಣಿಯಿಂದ ಇನ್ನು ನೀರು ಹನಿ ಹನಿ ಯಾಗಿ ತೊಟ್ಟಿಕ್ಕುತ್ತಿತ್ತು. ಪಕ್ಕದ ಹಾಲ್ ನಲ್ಲಿ ಮರಿಯಪ್ಪನವರು ತಮ್ಮ ಕಾಲೇಜ್ ಹುಡುಗರಿಗೆ ಕಾಮರ್ಸ್ ಟ್ಯುಶನ್ ಮಾಡುತ್ತಿದ್ದರು. ರೈನ್ ಕೊಟ್ ಬಿಚ್ಚಿ ಕುರ್ಚಿಗೆ ನೇತುಹಾಕಿ ಕುಳಿತು, ನನ್ನ ಪ್ರತಿನಿತ್ಯದ ಅಭ್ಯಾಸದಂತೆ ಸಾಮಾನ್ಯವಾಗಿ ಕಳಿಸುವ ಸ್ನೇಹಿತರಿಗೆಲ್ಲಾಮೆಸೇಜ್ ಕಳಿಸಿ, ಬೇರೇನೂ ಕೆಲಸ ತೋಚದೆ, ಟ್ಯೂಬ್ ಲೈಟ್ ಆನ್ ಮಾಡಿ, ಹತ್ತನೆಯ ತರಗತಿಯ ಜೀವವಿಜ್ಞಾನದ ಪುಸ್ತಕ ತಿರುವಿಹಾಕಲು ಶುರು ಮಾಡಿದೆ. ಯಾವುದು ಹೊಸ ವಿಷಯ ಇಲ್ಲ, ಕ್ಲಾಸ್ ಗೆ ತಯಾರಿ ಮಾಡಿಕೊಳ್ಳುವಷ್ಟು ಅಗತ್ಯವೂ ಇರಲಿಲ್ಲ. ಏನುತೋಚದೆ ಸ್ಟಾಫ್ ರೆಜಿಸ್ಟರ್ ತೆಗೆದು ಸಹಿ ಹಾಕಿದೆ. ಹೊರಗಡೆ ಮೋಡ ಕವಿದ ವಾತಾವರಣ. ಇವೊತ್ತು ಸಹಾ ಮಳೆ ಬರಬಹುದುಎನಿಸಿತು. ಮೂರನೇ ಮಹಡಿಯಿಂದ ಮಬ್ಬಾದ ಎದುರಿಗಿನ ಆಕಾಶ ನೋಡುವುದು ಒಂದು ಅನುಭವ. ಇದ್ದಕ್ಕಿದ್ದ ಹಾಗೆ ತೆರೆದ ಬಾಗಿಲಿನಿಂದ ಕಾಗೆ ಹಾರಿ ಬಂದು ನನ್ನ ತಲೆಯ ಮೇಲಿದ್ದ ಕಿಟಕಿಯ ಮೇಲೆ ಕುಳಿತು ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಹದರಿ ಹ...
Comments