ಅಮ್ಮನತೀರ್ಪು...ಕಾದುನೋಡೋಣ.
ಅಮ್ಮನತೀರ್ಪು ... ಕಾದುನೋಡೋಣ . ದೇವ , ದೈವ ಇಬ್ಬರೂ ನಮ್ಮ ಪಾಲನೆಯ ತಮ್ಮ ಹೊಣೆಯನ್ನು ನಿನ್ನ ತಾಯಿಗೇ ಬಿಟ್ಟಿದ್ದಾರಂತೆ ನೋಡು . ಏನನ್ಯಾಯ ? ದುರ್ವಾಸ ಮುನಿಯಂತೆ ಮುನಿದು ಮೌನಿಯಾಗಿರುವ ಅಮ್ಮ . ಕಾರಣ ಗೊತ್ತಾ ಮಗಾ ? ನಿನ್ನಿಂದಲೇ ಅಂತೆ , ಕಂಗಾಲಾಗಿರುವ ಆಕೆಗೆ ನಿನ್ನದೇ ಚಿಂತೆ ಮಮತೆಯ ಮಮಕಾರಕ್ಕೆ ಸೋತು ಕುದಿಯುತ್ತಿದ್ದಾಳೆ ಭೂಮಂಡಲದ ಸುಪ್ತ ಲಾವಕಂದರಗಳಲ್ಲಿ . ಮೊದಲು ಹೀಗಿರಲಿಲ್ಲವಂತೆ ! ನಿನ್ನಮ್ಮ ಹಾಗೆಂದು ಹೇಳುತ್ತಾರೆ ಹಿರಿಯರು . ಇರಲಿಲ್ಲ ಆಗ ನಾವ್ಯಾರು ಸರ್ವಗುಣ ಸಂಪನ್ನೇ... ಭೂಗರ್ಭ ಸಿರಿವಂತೆ ಎಲ್ಲಕೂ ಅವಳೇ ಒಡತಿ.... ಸರ್ವಾಧಿಕಾರಿ ಅವಳಲ್ಲ ಸರ್ವರಿಗೂ ಸಿರಿಹಂಚುವ ಹಂಬಲ, ಇದು ಎಲ್ಲಾ ತಾಯಿಯ ಬಯಕೆ ಬಿದ್ದಿದೆ ನಿನ್ನಿಂದಲೇ ಕೊಕ್ಕೆ..ಅದಕೆ ಬೇಕಿತ್ತೇ? ಬದುಕಲು ಅ ಮೂರು ಕಪಟ ಹಜ್ಜೆ ವಾಮನನಿಗೆ ನೀನಾದರೋ ತ್ರಿವಿಕ್ರಮ, ಅನಗತ್ಯ ಬೇಕಿದೆ ಎಲ್ಲವೂ ನಿನಗೆ ನಿನ್ನವರು ಯಾರಿಲ್ಲ, ಯಾರೂ ನಿನಗೆ ಬೇಕಿಲ್ಲ ನಿನ್ನ ಭೋಗ ವೈಭವವೇ ಆಮ್ಮನ ಕಾಡುತಿರುವ ಮಹಾಭಯ ನೋವಿಗೊಂದು ಗಡಿ, ತಾಳ್ಮೆಗೊಂದು ಮಿತಿ, ತಿಳಿದಿಲ್ಲ ನಮಗೆ, ಕಾದಿರುವ ಗ್ರಹಚಾರ ಕರಳಬಳ್ಳಿ ಕಳಚಿ, ಛಿದ್ರವಾಗುವ ಮಮಕಾರ ನಿನ್ನ ಚೀತ್ಕಾರ, ನಿಶ್ಚಲ ನಿಲ್ಲುತ್ತವೆ ನಿಂತಲ್ಲೇ ಅಲೆಗಳು. ಅಪ್ಪಳಿಸುವುದಿಲ್ಲ ...