ಆಗುಂಬೆಯ ಅಮಲು ಅಡರಿಕೊಂಡಿದೆ ಇನ್ನು ಎಲ್ಲಾ ಜಂಜಾಟದಿಂದ ದೂರ ಬಯಸಿದ ಪೆನ್ನು. ಆಕಾಶದ ಹಾಳೆಯ ಮೇಲೆ ಮಳೆಕುಂಚ ಬಿಡಿಸುವ ಹಿಮರಾಶಿ ಬಿಳಿ ಅರ್ಥವಾಗದ ನೂರಾರು ಬಣ್ಣ ಉತ್ಸಾಹಕ್ಕೆ ಇರಬಹುದೇ ಛಳಿ? ದಿಗಂತಚೌಕಟ್ಟಿಗೆ ಸಸ್ಯರಾಶಿಯ ಕಿರೀಟ ದೂರ ಸರಿಯುವ ಬೆಟ್ಟ ಛಾಯೆಯ ಮಾಟ ಮಾಯೆ. ಇರುವನ್ನೇ ಮರೆಸುವ ವಿಸ್ತಾರ, ಏಕಾಂತತೆ, ಕಡೆಯಲಾಗದ ಆಳ ಸಾಗರ "ನೀನ್ಯಾರು" ಎಂದು ಯಾರದೋ ದೂರದಿಂದ ತೇಲಿಬಂದ ಕೂಗು ಮಳೆಯಲ್ಲಿ ಕರಗಿ ಅಸ್ಪಷ್ಟವಾದಾಗ ಗೊಂದಲದಲ್ಲಿ ಬೆಚ್ಚಿಬಿದ್ದು ತಡವಡರಿಸಿದ ಪದವನ್ನೇ ನಾನು ಮರೆತಿದ್ದೇನೆ.
Posts
Showing posts from June, 2013
- Get link
- X
- Other Apps
ಬೆಳಕಿನಿಂದ ಕತ್ತಲಿಗೆ ... ಕತ್ತಲ ಹಟ್ಟಿಯಿಂದ ಹುಡುಕಾಟದ ಹುಲ್ಲುಗಾವಲಿಗೆ ಹೊಡೆದು ಕೊಂಡುಬರುವ ಬೆಳಗು . ಮೇಯುವ ಮಂದೆಯನ್ನು ಕಾಯುತ್ತಾನೆ ಕುರುಬ ಹಿಂಡನ್ನು ಅಟ್ಟಲು ಮುಸ್ಸಂಜೆಯ ಮುಳ್ಳುಬೇಲಿಯು ಮತ್ತೆ ತೆರೆಯುವ ತನಕ , ಅಲುಗಾಡದ ಭೂಪ . ನಿದ್ರೆಯ ದೊಡ್ಡಿಗೆ ಅಟ್ಟಿ , ಕನಸಿನ ಅಗಳಿ ಜಡಿದಾಗ ದೂರದಲ್ಲೆಲ್ಲೋ ಕೇಳಿ ಬರುವ ಗೊರಕೆ ಕನಸಿನಲ್ಲೂ ಮರೆಯುವುದಿಲ್ಲ ಕೆಲವರು ತಮ್ಮ ಹರಕೆ . ನನಸಾಗದಿರುವುದು ವಾಡಿಕೆ ಆದರೂ ... ನಗರಗಳ ರಸ್ತೆಯಮೇಲೆ ಅತೃಪ್ತ ಆತ್ಮಗಳ ಚಡಪಡಿಕೆ .