ಬೆಳಕಿನಿಂದ ಕತ್ತಲಿಗೆ...
ಕತ್ತಲ ಹಟ್ಟಿಯಿಂದ ಹುಡುಕಾಟದ ಹುಲ್ಲುಗಾವಲಿಗೆ ಹೊಡೆದು ಕೊಂಡುಬರುವ ಬೆಳಗು.
ಮೇಯುವ ಮಂದೆಯನ್ನು ಕಾಯುತ್ತಾನೆ
ಕುರುಬ
ಹಿಂಡನ್ನು ಅಟ್ಟಲು
ಮುಸ್ಸಂಜೆಯ ಮುಳ್ಳುಬೇಲಿಯು ಮತ್ತೆ ತೆರೆಯುವ ತನಕ,
ಅಲುಗಾಡದ ಭೂಪ.
ನಿದ್ರೆಯ ದೊಡ್ಡಿಗೆ ಅಟ್ಟಿ, ಕನಸಿನ ಅಗಳಿ ಜಡಿದಾಗ
ದೂರದಲ್ಲೆಲ್ಲೋ ಕೇಳಿ ಬರುವ ಗೊರಕೆ
ಕನಸಿನಲ್ಲೂ ಮರೆಯುವುದಿಲ್ಲ ಕೆಲವರು ತಮ್ಮ ಹರಕೆ.
ನನಸಾಗದಿರುವುದು ವಾಡಿಕೆ
ಆದರೂ...
ನಗರಗಳ ರಸ್ತೆಯಮೇಲೆ ಅತೃಪ್ತ ಆತ್ಮಗಳ ಚಡಪಡಿಕೆ.
Comments