Posts

Showing posts from December, 2015
Image
ಅವರ ಮನೆಯಲ್ಲೇ ಮೊಟ್ಟಮೊದಲ ಬಾರಿಗೆ ಕಣಿಲೆಯ ಪಲ್ಯದ ರುಚಿ.. Avadhi   |   December 19, 2015 ಶೇಷಗಿರಿ ಜೋಡಿದಾರ್ ಪ್ರಾಯಶಃ ೧೯೭೨ ಅಥವ ೭೩ ಸರಿಯಾಗಿ ನೆನಪಿಲ್ಲ…ನಾನು ಆಗ ಕಾಸರಗೋಡಿನ ಆಡ್ಯನಡ್ಕ ಎನ್ನುವ ಸ್ಥಳದಲ್ಲಿ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದೆ….. ನನ್ನ ಒಬ್ಬ ಸಹೋದ್ಯೋಗಿಯಾದ ಶ್ರೀಕೃಷ್ಣ ಚೆನ್ನಂಗೋಡ್ ಮತ್ತು ನನಗೆ ಕವನ ಬರೆಯುವ ದುರಬ್ಯಾಸವಿತ್ತು… ನಾವಿಬ್ಬರೂ ಕವನಗಳನ್ನು ಬರೆಯುತ್ತಾ ಇದ್ವಿ…. ಮಂಗಳೂರಿನ ಕೊಣಾಜೆಯಲ್ಲಿ ಕನ್ನಡ ಎಮ್.ಎ. ಮಾಡುತ್ತಿದ್ದ ಕಮಲ ಹೆಮ್ಮಿಗೆ ಮತ್ತು ಎಸ್.ಮಾಲತಿ ಅವರ ಪರಿಚಯವಿತ್ತು… ಆಗಾಗ ಭಾನುವಾರ ನಾನು ಮಂಗಳೂರಿಗೆ ಬಂದು ಅವರಲ್ಲಿ ವಿಚಾರ ವಿನಿಮಿಯ ಮಾಡಿಕೊಳ್ಳುತ್ತಿದ್ದೆ… ನಾವು ನಾಲ್ಕು ಜನವೂ ಸೇರಿ ಕವನ ಸಂಕಲನ ತರಬೇಕೆಂಬ ಶ್ರಿಯುತ ಚೆನ್ನಂಗೋಡ್ ಅಲೋಚನೆ… ಅದಕ್ಕೆ ಅವರಿಬ್ಬರೂ ಒಪ್ಪಿದರು… ಆದರೆ ನನ್ನ ಸ್ನೇಹಿತರಾದ ಸೂ.ರಮಾಕಾಂತ್ ಒಪ್ಪಲಿಲ್ಲ… ಹೀಗಾಗಿ ಕಡೆಗೆ ನಾವಿಬ್ಬರೇ ಸಂಕಲನ ತರಬೇಕೆಂಬ ನಿರ್ಧಾರಕ್ಕೆ ಬಂದಾಗ.. ಮುನ್ನುಡಿಯ ವಿಚಾರ ಬಂದಾಗ ನಮಗೆ ಹತ್ತಿರವಿದ್ದ ಕೆ.ವಿ. ತಿರುಮಲೇಶ್ ಬಳಿ ಹೋದೆ. ವಿಟ್ಲದಿಂದ ಕಾಸರಗೋಡಿಗೆ ಹೋಗುವ ರಸ್ತೆಯಲ್ಲೇ ತಿರುಮಲೇಶರ ಮನೆಯಿತ್ತು… ಸ್ವಲ್ಪ ಸಮಯದ ಮುಂಚೆಯೇ ಅವರ ಮದುವೆ ಆಗಿ ಹೊಸದಾಗಿ ಸಂಸಾರ ಆರಂಭಿಸಿದ್ರು…. ಅವರ ಹೆಂಡತಿ ನಿರ್ಮಲ ( ನೆನಪು ಸರಿ ಇದೆ ಎಂದುಕೊಂಡಿದ್ದೇನೆ) ನಾನು ಹೋದ ದಿನ ಅವರ ಮನೆಯಲ್ಲೇ ಮೊಟ್...
ನಿರ್ವಾಣ. ಮುಗಿಯಲಾರದ ಯಾತ್ರೆಯಲ್ಲಿ ಜಾತ್ರೆ ನಿರೀಕ್ಷೆ ಸೇರಲಿಹ ತಾಣದ ರಹಸ್ಯ ಕುತೂಹಲ ಮರೀಚಿಕೆ, ಕಲ್ಪನೆಯಲಿ ಸಮೀಕ್ಷೆ,ಪಲಿತಾಂಶ ಫಲಿತ ಪರೀಕ್ಷೆ ಕೊನೆಯಾಗಲೇ ಬೇಕು ಇಂದಲ್ಲ ನಾಳೆ ಇಳಿಯಲೇ ಬೇಕು ನಿಂತಾಗ ಗುರುತ್ಚ ಆಕರ್ಷಣೆ ನಿರಾಕಾರ ಕ್ಷಣಿಕ, ಅಂಡಾಕಾರ ಭೂಮಿಯಲ್ಲಿ ಅಸಂಖ್ಯ ಆಕಾರಗಳು, ವಿಚಿತ್ರ ವಿಕಾರಗಳು ಮೂಲ ರೂಪದಲ್ಲಿ ಆಕಾರವೇ ಅಮೂರ್ತವಾಗುವ ಗುಪ್ತ ಕಾಲನಚಲನೆಯಲ್ಲೇ ತಟಸ್ಥ ನಿಂತ ನಿರ್ವಾತ ಸಮಯ ಮೂಕವಿಸ್ಮಿತ ಪ್ರೇಕ್ಷಕ ಉಸಿರುಸುತ್ತಿದ್ದಾನೆ ಗುರುತ್ವದಲ್ಲೇ ನಡುಕ, ಭೂಕಾಂತ ಪ್ರಕ್ಷುಭ್ದ ಎಲ್ಲಿ ಬೆಳಗು, ಎಲ್ಲಿ ರಾತ್ರಿ? ಎಲ್ಲೆಲ್ಲೂ ಅಸಹನೀಯ, ಶಾಂತ ಮೌನ ಜ್ವಾಲಮುಖಿಯ ಒಡಲಲ್ಲಿ ಉಬ್ಬು ತಗ್ಗಾಗಿ, ತಗ್ಗು ಉಬ್ಬಾದಾಗ ನಾವು ತಬ್ಬಿಬ್ಬಾಗಿ ಬದುಕು ಬೊಬ್ಬೆ ಸಮತಲದಲ್ಲಿ ಸಮನಾಂತರವಾಗಿ ದಿಕ್ಕು ತಪ್ಪಿಸುವ ಆಟ ಕೋನರಹಿತ ವಕ್ರತೆ ನೇರ ಚಲಿಸಿ ಸರಳರೇಖೆ ವ್ಯೂಮದಲಿ ಛಿದ್ರ,ಅನಂತದಲ್ಲಿ ಲೀನ ಹುಟ್ಟು ಸಾವು.....ನಡುವೆ,ಒಂದೇ ಸರಳರೇಖೆ ಆಗಿಲ್ಲ ಏಕೆ...ಆಗಮನ, ನಿರ್ಗಮನದ ಕೋನ ಬಿಂದುಗಳು ಸೇರಿದಾಗ ಮತ್ತದೇ ಶೂನ್ಯ ಇತಿಹಾಸದ ಹೊರೆ, ವರ್ತಮಾನದಲ್ಲಿ ಸೆರೆ ದುಂಡಾದಚಂಡಲ್ಲಿ ಭವಿಷ್ಯ ಲಂಬಕೋನ ಎಡಬದಿಗೆ ಬಾಗುವ ತಗ್ಗಿದ ಕೋನ ಬಲಬದಿಗೆ ಆತುಕೊಂಡಾಗ ನಿರ್ವಾತ ವಿಕಸನ ಯಾವ ಅಂಶದ ಮೋಡಿಯೋ ಕಾಣುತ್ತಿದೆ ಅಪರೂಪದ ವಿಡೀಯೊ ಅನೂಹ್ಯ ಬಣ್ಣ, ಆಕಾರ, ಎಲ್ಲ ಸಾಕ್ಷತ್ಕಾರ ಕ್ಷಣದಲ್ಲಿ ಬದಲಾಗುವ ಗೊಂದಲದ ರೂಪ ಸಪ್ತವರ್ಣರಹಿತ ಬೆಳಕಲ್ಲಿ ಆಕಾರವೇ ಅದೃಷ...