ನಿರ್ವಾಣ.
ಮುಗಿಯಲಾರದ ಯಾತ್ರೆಯಲ್ಲಿ ಜಾತ್ರೆ ನಿರೀಕ್ಷೆ
ಸೇರಲಿಹ ತಾಣದ ರಹಸ್ಯ ಕುತೂಹಲ ಮರೀಚಿಕೆ,
ಕಲ್ಪನೆಯಲಿ ಸಮೀಕ್ಷೆ,ಪಲಿತಾಂಶ ಫಲಿತ ಪರೀಕ್ಷೆ
ಸೇರಲಿಹ ತಾಣದ ರಹಸ್ಯ ಕುತೂಹಲ ಮರೀಚಿಕೆ,
ಕಲ್ಪನೆಯಲಿ ಸಮೀಕ್ಷೆ,ಪಲಿತಾಂಶ ಫಲಿತ ಪರೀಕ್ಷೆ
ಕೊನೆಯಾಗಲೇ ಬೇಕು ಇಂದಲ್ಲ ನಾಳೆ
ಇಳಿಯಲೇ ಬೇಕು ನಿಂತಾಗ ಗುರುತ್ಚ ಆಕರ್ಷಣೆ
ನಿರಾಕಾರ ಕ್ಷಣಿಕ, ಅಂಡಾಕಾರ ಭೂಮಿಯಲ್ಲಿ
ಅಸಂಖ್ಯ ಆಕಾರಗಳು, ವಿಚಿತ್ರ ವಿಕಾರಗಳು
ಮೂಲ ರೂಪದಲ್ಲಿ ಆಕಾರವೇ ಅಮೂರ್ತವಾಗುವ
ಗುಪ್ತ ಕಾಲನಚಲನೆಯಲ್ಲೇ ತಟಸ್ಥ ನಿಂತ ನಿರ್ವಾತ ಸಮಯ
ಮೂಕವಿಸ್ಮಿತ ಪ್ರೇಕ್ಷಕ ಉಸಿರುಸುತ್ತಿದ್ದಾನೆ
ಗುರುತ್ವದಲ್ಲೇ ನಡುಕ, ಭೂಕಾಂತ ಪ್ರಕ್ಷುಭ್ದ
ಎಲ್ಲಿ ಬೆಳಗು, ಎಲ್ಲಿ ರಾತ್ರಿ? ಎಲ್ಲೆಲ್ಲೂ
ಅಸಹನೀಯ, ಶಾಂತ ಮೌನ ಜ್ವಾಲಮುಖಿಯ ಒಡಲಲ್ಲಿ
ಇಳಿಯಲೇ ಬೇಕು ನಿಂತಾಗ ಗುರುತ್ಚ ಆಕರ್ಷಣೆ
ನಿರಾಕಾರ ಕ್ಷಣಿಕ, ಅಂಡಾಕಾರ ಭೂಮಿಯಲ್ಲಿ
ಅಸಂಖ್ಯ ಆಕಾರಗಳು, ವಿಚಿತ್ರ ವಿಕಾರಗಳು
ಮೂಲ ರೂಪದಲ್ಲಿ ಆಕಾರವೇ ಅಮೂರ್ತವಾಗುವ
ಗುಪ್ತ ಕಾಲನಚಲನೆಯಲ್ಲೇ ತಟಸ್ಥ ನಿಂತ ನಿರ್ವಾತ ಸಮಯ
ಮೂಕವಿಸ್ಮಿತ ಪ್ರೇಕ್ಷಕ ಉಸಿರುಸುತ್ತಿದ್ದಾನೆ
ಗುರುತ್ವದಲ್ಲೇ ನಡುಕ, ಭೂಕಾಂತ ಪ್ರಕ್ಷುಭ್ದ
ಎಲ್ಲಿ ಬೆಳಗು, ಎಲ್ಲಿ ರಾತ್ರಿ? ಎಲ್ಲೆಲ್ಲೂ
ಅಸಹನೀಯ, ಶಾಂತ ಮೌನ ಜ್ವಾಲಮುಖಿಯ ಒಡಲಲ್ಲಿ
ಉಬ್ಬು ತಗ್ಗಾಗಿ, ತಗ್ಗು ಉಬ್ಬಾದಾಗ
ನಾವು ತಬ್ಬಿಬ್ಬಾಗಿ ಬದುಕು ಬೊಬ್ಬೆ
ಸಮತಲದಲ್ಲಿ ಸಮನಾಂತರವಾಗಿ ದಿಕ್ಕು ತಪ್ಪಿಸುವ ಆಟ
ಕೋನರಹಿತ ವಕ್ರತೆ ನೇರ ಚಲಿಸಿ ಸರಳರೇಖೆ
ವ್ಯೂಮದಲಿ ಛಿದ್ರ,ಅನಂತದಲ್ಲಿ ಲೀನ
ಹುಟ್ಟು ಸಾವು.....ನಡುವೆ,ಒಂದೇ ಸರಳರೇಖೆ
ಆಗಿಲ್ಲ ಏಕೆ...ಆಗಮನ, ನಿರ್ಗಮನದ ಕೋನ
ಬಿಂದುಗಳು ಸೇರಿದಾಗ ಮತ್ತದೇ ಶೂನ್ಯ
ನಾವು ತಬ್ಬಿಬ್ಬಾಗಿ ಬದುಕು ಬೊಬ್ಬೆ
ಸಮತಲದಲ್ಲಿ ಸಮನಾಂತರವಾಗಿ ದಿಕ್ಕು ತಪ್ಪಿಸುವ ಆಟ
ಕೋನರಹಿತ ವಕ್ರತೆ ನೇರ ಚಲಿಸಿ ಸರಳರೇಖೆ
ವ್ಯೂಮದಲಿ ಛಿದ್ರ,ಅನಂತದಲ್ಲಿ ಲೀನ
ಹುಟ್ಟು ಸಾವು.....ನಡುವೆ,ಒಂದೇ ಸರಳರೇಖೆ
ಆಗಿಲ್ಲ ಏಕೆ...ಆಗಮನ, ನಿರ್ಗಮನದ ಕೋನ
ಬಿಂದುಗಳು ಸೇರಿದಾಗ ಮತ್ತದೇ ಶೂನ್ಯ
ಇತಿಹಾಸದ ಹೊರೆ, ವರ್ತಮಾನದಲ್ಲಿ ಸೆರೆ
ದುಂಡಾದಚಂಡಲ್ಲಿ ಭವಿಷ್ಯ ಲಂಬಕೋನ
ಎಡಬದಿಗೆ ಬಾಗುವ ತಗ್ಗಿದ ಕೋನ
ಬಲಬದಿಗೆ ಆತುಕೊಂಡಾಗ ನಿರ್ವಾತ ವಿಕಸನ
ಯಾವ ಅಂಶದ ಮೋಡಿಯೋ
ಕಾಣುತ್ತಿದೆ ಅಪರೂಪದ ವಿಡೀಯೊ
ಅನೂಹ್ಯ ಬಣ್ಣ, ಆಕಾರ, ಎಲ್ಲ ಸಾಕ್ಷತ್ಕಾರ
ಕ್ಷಣದಲ್ಲಿ ಬದಲಾಗುವ ಗೊಂದಲದ ರೂಪ
ಸಪ್ತವರ್ಣರಹಿತ ಬೆಳಕಲ್ಲಿ ಆಕಾರವೇ ಅದೃಷ್ಯ
ಕ್ಷಣದಲ್ಲಿ ಪ್ರತ್ಯಕ್ಷ ಕಣ್ಣುಕುಕ್ಕುವ ಬಯಲಾಟ ಪ್ರದರ್ಶನ
ಕೈಗೆಟುಕದ ಅದೇ ತೆರೆದ ನೀಲಿ ಆಕಾಶ ಅನಾವರಣ
ಕಡಲತೀರದಲ್ಲಿ ತಂಗಾಳಿ, ಸೂರ್ಯನ ನಿರ್ವಾಣ
ದುಂಡಾದಚಂಡಲ್ಲಿ ಭವಿಷ್ಯ ಲಂಬಕೋನ
ಎಡಬದಿಗೆ ಬಾಗುವ ತಗ್ಗಿದ ಕೋನ
ಬಲಬದಿಗೆ ಆತುಕೊಂಡಾಗ ನಿರ್ವಾತ ವಿಕಸನ
ಯಾವ ಅಂಶದ ಮೋಡಿಯೋ
ಕಾಣುತ್ತಿದೆ ಅಪರೂಪದ ವಿಡೀಯೊ
ಅನೂಹ್ಯ ಬಣ್ಣ, ಆಕಾರ, ಎಲ್ಲ ಸಾಕ್ಷತ್ಕಾರ
ಕ್ಷಣದಲ್ಲಿ ಬದಲಾಗುವ ಗೊಂದಲದ ರೂಪ
ಸಪ್ತವರ್ಣರಹಿತ ಬೆಳಕಲ್ಲಿ ಆಕಾರವೇ ಅದೃಷ್ಯ
ಕ್ಷಣದಲ್ಲಿ ಪ್ರತ್ಯಕ್ಷ ಕಣ್ಣುಕುಕ್ಕುವ ಬಯಲಾಟ ಪ್ರದರ್ಶನ
ಕೈಗೆಟುಕದ ಅದೇ ತೆರೆದ ನೀಲಿ ಆಕಾಶ ಅನಾವರಣ
ಕಡಲತೀರದಲ್ಲಿ ತಂಗಾಳಿ, ಸೂರ್ಯನ ನಿರ್ವಾಣ
Comments