Posts

Showing posts from January, 2018

ಡಾರ್ವಿನ್ ಮತ್ತು ನಾನು.

೨೯-೦೧-೨೦೧೮·  ಡಾರ್ವಿನ್ ಮತ್ತು ನಾನು. (ಇತ್ತೀಚೆಗೆ ನಮ್ಮಲ್ಲಿ ಚರ್ಚೆಯಲ್ಲಿರುವ ಡಾರ್ವಿನ್ ಬಗ್ಗೆ ನನಗೆ ಅನುಕಂಪ, ಅಪಾರ ಅಭಿಮಾನ...ಆತನ ಸಿದ್ಧಾಂತವನ್ನು ನನ್ನ ಕೋಶದ ಡಿ.ಎನ್. ಎ. ಸ್ಥರದಿಂದ ಅನುಭವಿಸುತ್ತೇನೆ. ಸಾವಿನಲ್ಲೂ ಎಡಬಿಡಂಗಿಯಾಗಿ ತನ್ನ ಧಾರ್ಮಿಕ ರುದ್ರಭೂಮಿಯಿಂದಲೇ ವಂಚಿತನಾದ ಡಾರ್ವಿನ್ ನೆನಪಿಗೆ ನನ್ನದೇ ರೀತಿಯ ಅಭಿವ್ಯಕ್ತಿ) ಹೌದು ಲಮಾರ್ಕ್ ಮಂಡಿಸಿದ ಪ್ರತಿಪಾದನೆ  ಜೀವವಿಕಾಸ, ಪ್ರಭೇದಗಳ ಪ್ರಯತ್ನ, ಉಳಿವಿಗಾಗಿ ಸರಳ ಜೀವಿಗಳು ಪ್ರಕೃತಿಗನುಗುಣವಾಗಿ ಕ್ರಮೇಣ, ಹೊಂದಾಣಿಕೆಯ ಹೋರಾಟದಲ್ಲಿ ಹೊಸ ಅಸ್ತಿತ್ವ ಪಡೆಯುವುದು ಜೈವಿಕ ವಿಕಾಸೀಯ ಪರಂಪರೆ ಸತತ ಕ್ಲಿಷ್ಟ ರೂಪಪಡೆದು ಪ್ರತ್ಯೇಕ ಪ್ರಭೇದ ಅಸ್ತಿತ್ವ ಜೀವ ವಿವಿದತೆ ಪ್ರತ್ಯಕ್ಷ ಪರಿಸರ ಪರಕಾಷ್ಟೆಯಲ್ಲಿ ಪಡೆದ ಹೊಸ ಲಕ್ಷಣ ಬದುಕುಳಿಯುವ ಪ್ರಯತ್ನದ ಕುರುಹು ಆವಾಸಕ್ಕೆ ತಕ್ಕಂತೆ ಪರಿಸರಪೂರಕ ಮಾರ್ಪಾಡು ಸಹಜ ಜೀವಿಲಕ್ಷಣ ಹೊಂದಾಣಿಕೆ, ಪರಿಸರದ ಏರುಪೇರುಗಳಿಗೆ, ವಿದ್ವಾಂಸ, ವಿಜ್ಞಾನಿಗಳ ರಸಪ್ರಶ್ನೆಗಳಿಗೆ ತತ್ತರಿಸಿದ ನೀಳ ಕತ್ತಿನ ಜಿರಾಫೆ ಉಲ್ಲೇಖ ಮಂಡನೆ ತಿರಸ್ಕೃತ ಅನುವವಂಶೀಯವಾಗುವುದು ಹೇಗೆ, ಏಕೆ, ಎಲ್ಲಿ? ನಿಲ್ಲದ ಪ್ರಶ್ನೆಗಳ ನಿರುತ್ತರದಲ್ಲೇ ನೆನೆಗುದಿಗೆ ಬಿದ್ದ ನಿಯಮ ಎಬ್ಬಿಸಿತು ಮಲಗಿದ್ದ ಪ್ರಕೃತಿ ವಿಜ್ಞಾನಿಯನ್ನು ಬ್ಯೂಗಲ್ ನಾವೆಯ ವಿಶ್ವಪರ್ಯಟನೆಯಲ್ಲಿ ಡಾರ್ವಿನ್ ಒಪ್ಪಿದ, ವ್ಯತ್ಯಾಸಗಳು ಜೀವ...
ಒಂದಾನೊಂದು ಕಾಲದಲ್ಲಿ. ಮಾನವ ಮಾತೆಯ ಮಮತೆಯ  ಕುಡಿಯಾದರೂ...ಹುಟ್ಟಿದ್ದು ಊರಲ್ಲ,  ಊದು ಕುಲುಮೆಯ ಗರ್ಭದಲ್ಲಿ,  ಜ್ವಾಲೆಯಲೇ ಕಳೆದ ಬಾಲ್ಯ ಕಾಡುಬಂಡೆಗಳಮೇಲೆ  ಇವ ನಿಜಕೂ ಅಗ್ನಿಪುತ್ರನಲ್ಲ, ಜೂಟಾಟ, ಕಣ್ಣುಮುಚ್ಚಾಲೆ ಕೊರಕಲು ಪ್ರಪಾತಗಳಲ್ಲಿ ತಳರಹಿತ  ಗವಿಯ ಸಂದು, ಗೊಂದುಗಳ ನೆರಳಲ್ಲೂತೀವ್ರ ತಾಪ ಬಯಲುದರ್ಶಿನಿಯಲಿ ನೇರಲೆ,   ಕಾರೆ,ಕವಳೆ,ಲೇಬೆ, ಬೋರೆ, ಉಪಹಾರಕ್ಕೆ,   ಶಿಲಾದರ್ಶಿನಿ ಚಾರಣದ ಕ್ಯಾಂಟೀನಲ್ಲಿ ಸಿತಾಫಲ ಅನ್ ಲಿಮಿಟೆಡ್ ಬಹಿರ್ದೆಸೆಯ ದಿನಚರಿಯಲಿ ನುರಿತ ಪರ್ವತಾರೋಹಿ  ನಿರ್ಜನ ಕಣಿವೆಯಲಿ ಸ್ವಗತ, ಶಾಶ್ವತ ಸಂಭಾಷಣೆ ಕೂಗೋಗುಡ್ಡದ ಪ್ರತಿಧ್ವನಿಯ ಕಂಪನ  ರಾಕ್ಷಸ ಇಳಿಜಾರು ಬಂಡೆ ಬೈಗಳ ಪ್ರತಿಧ್ವನಿಯ ರೋಮಾಂಚನ ನೇಕಾರರ ಮಗ್ಗಗಳ ನಿಲ್ಲದ ನಡಿಗೆಯ ರೇಶಿಮೆಯ ಹೆಜ್ಜೆ ಶಿಸ್ತಿನ ಸಾರೋಟು ಚಲನೆಯಲಿ ಲಾಳಗಳ ಓಟ ನಿರಂತರ ಧ್ವನಿಸುವ ಚಟಾ ಪಟಾ ಊರಿಗೊಂದು ಭಾಷೆ ಅದರ ಸಾಮಾನ್ಯದ ಅಸ್ತಿತ್ವ ಕರಡಿ ಗಂಗಣ್ಣನ ಘಮ,ಘಮ ಮಂಡಾಳ್ ಒಗ್ಗರಣಿ ಅತ್ತಿಕಾಯಿ, ಜೊತೆಗೆ ಮೆಣ್ಸಿನ್ಕಾಯ್ ಉಳ್ಳಾಗಡ್ಡಿ ಈಜಾಟ ಮನೋರಂಜನೆ ಆಟ, ನೀರಿದ್ದ ಆ ದೊಡ್ಡಬಾವಿ ಬಾನಿ ಎಳೆಯುವ ಹಗ್ಗದ ಮೇಲೆ ಜೋಕಾಲಿ ಶುಶ್ಕತೆಗೆ ಬಡಕಲಾಗಿ ಒಣಕಲಾಗಿ ನಿಂತ ಸೈಂಧವ ತಾಳೆಮರವಲ್ಲ ಈಚಲಿನ ವಿರಳದಲಿ ತೆಂಗು, ಆದರೂ ಹೆಸರು ಬಾಳೆತೋಪು ಮೇಕೆ,ದನಗಳ ಜಾಡೇ ಜಾರೋಬಂಡಿ ಹಟ್ಟಿಯಲಿ ಕತ್ತರಿಸಿ ಹಸಿರು...
ನಿರ್ಲಿಪ್ತರು. ನಮ್ಮೂರಿನ ಜಾಲಿಮರದ ಕೊರಡು ಬಿಸಿಲ ಕುಲುಮೆಯ ತಿದಿಯು ಏರಿಳಿತದ ಶ್ವಾಸಕೆ ಸಿಡಿವ ಕೆಂಡವಾಗಬೇಕಿದ್ದ ಕ್ರಾಂತಿ ಕವನ  ಕಿಡಿ ಕಾರಬೇಕಿದ್ದ ಹಾಡು, ಯಾಕೋ....ಕರ್ಶಕದಲ್ಲಿಇದ್ದಿಲಾಗಿದೆ ದಹನಕ್ರಿಯೆ ಇನ್ನೂ ಅಪೂರ್ಣ, ಸ್ವರತಪ್ಪಿದ ಜಾಡು, ಕನಿಕರದ ಪಾಡು ಬೂದಿಯಾಗಿದೆಯೆಂದು ಸಂಭ್ರಮಿಸ ಬೇಡಿ ಕಿಡಿ ಒಂದು ತಾಕಿದರೆ ಸಾಕು, ಬಣಿವೆಯೇ ಆಹುತಿ ಸಿವುಡುಪೇರಿಸಿದ ಕಣದಲ್ಲಿ ಕಾಂಡವದಹನ ಬಿಸಿಲ ಜ್ವಾಲೆಯ ತಾಂಡವ ನೃತ್ಯ ಶಿವನ ಜಟೆಯಲ್ಲಿ ನಿಂತ ಗಂಗೆಯ ಹರಿವು ನಿರ್ನಾಮವಾಗುವರು ಯಾರೆಂದು ತಿಳಿದಿಲ್ಲ ನರ್ತಕ, ನೃತ್ಯದಲ್ಲಿ ತಲ್ಲೀನ ಸದ್ಯಕೆ ರೆಪ್ಪೆಗಳು ಬೇರ್ಪುಡುವ ಮುನ್ನ, ಮುಕ್ಕಣ್ಣ ಮೌನಿ ಧ್ಯಾನಿ, ಬೂದಿಮಣ್ಣಾಗುವ ಮೊದಲು ದೃಷ್ಟಿಮಂಜಾಗಿ, ನಂಜಾಗುವ ಮೊದಲು ಗ್ರಾಮದೇವತೆಯ ಬೇಡಿರಿ, ಕಳೆದವರ್ಷ ಹೂತಹೆಣ ತೆಗೆಯಿರಿ, ಮಳೆಯಾಗಬಹುದು. ಕಾಳು ಹಸನಾಗಿಸುವ ಮುನ್ನ ಬಡಿಯಲೇ ಬೇಕು ಸಿವುಡು, ರಾಶಿಮಾಡುವ ಮುನ್ನ, ಹಂಚಿಕೆ ಹಸನಿರಬೇಕು ಎಲ್ಲರಿಗೂ ಸಮಪಾಲು, ಚಮ್ಮಾರ, ಕಮ್ಮಾರ, ಕುಂಬಾರ, ಅಗಸ, ಮಡಿವಾಳ,ತೋಟಿ, ಪೂಜಾರಿ ಉಳಿಸಿಕೊಳ್ಳಿ ನಿಮ್ಮ, ನಿಮ್ಮೆಲ್ಲರ ಪಾಲು ಮಿಕ್ಕ ಸಿಂಹಪಾಲಲ್ಲೂ ಸದಾ ಕಾಂಗಾಲು ಕೊರಡು ಹೊಗೆಯಾಡುತಿದೆ ಹೊಂಗೆಯ ನೆರಳಲ್ಲಿ, ನೀರಿಲ್ಲದ ಹಳ್ಳದಲಿ, ಉರಿಯನೇ ಉಂಡ ಕೃಷಿಕ ನರಳುತ್ತಾನೆ ಶಾಶ್ವತ ಮೌನದಲ್ಲಿ ಅಸಹಾಯಕ ಖುಷಿಯಾಗಿದ್ದಾನೆ ಧನಿಕ, ಬದುಕಿದ್ದಾನೆ ಶ್ರಮಿಕ ನಗರದಲ್ಲಿ ನಿರ್ಲಿಪ್ತ ನಾಗರೀಕ.