ಡಾರ್ವಿನ್ ಮತ್ತು ನಾನು.






ಡಾರ್ವಿನ್ ಮತ್ತು ನಾನು.


(ಇತ್ತೀಚೆಗೆ ನಮ್ಮಲ್ಲಿ ಚರ್ಚೆಯಲ್ಲಿರುವ ಡಾರ್ವಿನ್ ಬಗ್ಗೆ ನನಗೆ ಅನುಕಂಪ, ಅಪಾರ ಅಭಿಮಾನ...ಆತನ ಸಿದ್ಧಾಂತವನ್ನು ನನ್ನ ಕೋಶದ ಡಿ.ಎನ್. ಎ. ಸ್ಥರದಿಂದ ಅನುಭವಿಸುತ್ತೇನೆ. ಸಾವಿನಲ್ಲೂ ಎಡಬಿಡಂಗಿಯಾಗಿ ತನ್ನ ಧಾರ್ಮಿಕ ರುದ್ರಭೂಮಿಯಿಂದಲೇ ವಂಚಿತನಾದ ಡಾರ್ವಿನ್ ನೆನಪಿಗೆ ನನ್ನದೇ ರೀತಿಯ ಅಭಿವ್ಯಕ್ತಿ)


ಹೌದು ಲಮಾರ್ಕ್ ಮಂಡಿಸಿದ ಪ್ರತಿಪಾದನೆ 
ಜೀವವಿಕಾಸ, ಪ್ರಭೇದಗಳ ಪ್ರಯತ್ನ, ಉಳಿವಿಗಾಗಿ
ಸರಳ ಜೀವಿಗಳು ಪ್ರಕೃತಿಗನುಗುಣವಾಗಿ
ಕ್ರಮೇಣ, ಹೊಂದಾಣಿಕೆಯ ಹೋರಾಟದಲ್ಲಿ
ಹೊಸ ಅಸ್ತಿತ್ವ ಪಡೆಯುವುದು ಜೈವಿಕ ವಿಕಾಸೀಯ ಪರಂಪರೆ
ಸತತ ಕ್ಲಿಷ್ಟ ರೂಪಪಡೆದು ಪ್ರತ್ಯೇಕ ಪ್ರಭೇದ ಅಸ್ತಿತ್ವ
ಜೀವ ವಿವಿದತೆ ಪ್ರತ್ಯಕ್ಷ ಪರಿಸರ ಪರಕಾಷ್ಟೆಯಲ್ಲಿ
ಪಡೆದ ಹೊಸ ಲಕ್ಷಣ ಬದುಕುಳಿಯುವ ಪ್ರಯತ್ನದ ಕುರುಹು
ಆವಾಸಕ್ಕೆ ತಕ್ಕಂತೆ ಪರಿಸರಪೂರಕ ಮಾರ್ಪಾಡು ಸಹಜ ಜೀವಿಲಕ್ಷಣ
ಹೊಂದಾಣಿಕೆ, ಪರಿಸರದ ಏರುಪೇರುಗಳಿಗೆ,
ವಿದ್ವಾಂಸ, ವಿಜ್ಞಾನಿಗಳ ರಸಪ್ರಶ್ನೆಗಳಿಗೆ ತತ್ತರಿಸಿದ
ನೀಳ ಕತ್ತಿನ ಜಿರಾಫೆ ಉಲ್ಲೇಖ ಮಂಡನೆ ತಿರಸ್ಕೃತ
ಅನುವವಂಶೀಯವಾಗುವುದು ಹೇಗೆ, ಏಕೆ, ಎಲ್ಲಿ?
ನಿಲ್ಲದ ಪ್ರಶ್ನೆಗಳ ನಿರುತ್ತರದಲ್ಲೇ ನೆನೆಗುದಿಗೆ ಬಿದ್ದ ನಿಯಮ
ಎಬ್ಬಿಸಿತು ಮಲಗಿದ್ದ ಪ್ರಕೃತಿ ವಿಜ್ಞಾನಿಯನ್ನು
ಬ್ಯೂಗಲ್ ನಾವೆಯ ವಿಶ್ವಪರ್ಯಟನೆಯಲ್ಲಿ
ಡಾರ್ವಿನ್ ಒಪ್ಪಿದ, ವ್ಯತ್ಯಾಸಗಳು ಜೀವಿಗಳಲ್ಲಿ
ನಿರಂತರ ಸೂಕ್ಷ ಬದಲಾವಣೆಗಳು ಸಹಜ,
ವಿವಿದತೆ ಆವಾಸದ ಅತಿರೇಕದಂಶಗಳಿಗೆ,
ಆವಾಸದ ಕ್ರಿಯಾತ್ಮಕ ವ್ಯವಹಾರಗಳಿಗೆ ತಕ್ಕಂತೆ
ಸಾವು ಸಾಮಾನ್ಯ, ವಂಶಾಭಿವೃಧ್ದಿ ಸಹಜ ಪ್ರವೃತ್ತಿ
ಆದರೂ ಸಕಲ ಜೀವ ಸಂಕುಲ ಸಮತೋಲನದಲ್ಲಿ ಸ್ಥಿರ
ಬಲಿಷ್ಟರನ್ನು ಸಮತೂಗಿಸುವ ಪ್ರಕ್ರಿಯೆ ಪ್ರಾಕೃತಿಕ
ಹರಿದು ತಿನ್ನುವುದು ಜೀವಿಗಳ ಅಧಿಕಾರ
ಅದಕಾಗಿ ನಡೆಯುವ ಹೋರಾಟ ಅಗೋಚರ
ಒಂದು ಜೈವಿಕವಾಸ್ತವದ ಪ್ರದರ್ಶನ, ನಿರ್ಲಕ್ಷ್ಯ ಪ್ರೇಕ್ಷಕ
ಸಮರ್ಥರ ಉಳಿವು ಗಳಿಸಿದ ಮಾರ್ಪಟ್ಟ ಸಂತತಿಯಾಗಿ
ದುರ್ಬಲರ ಹೋರಾಟ ಸೋತ ನಿರ್ಗಮನದಲಿ ಅಂತ್ಯ
ಅಗೋಚರ ಪರಮ ಸತ್ಯ ಪ್ರಕೃತಿ ಆಯ್ಕೆ,
ಪ್ರಶ್ನಾತೀತ ಕಾಲ ಯಜ್ಞಕುಂಡದಲಿ ಅಸಮರ್ಥರ ಆಹುತಿ.
ಅನುವಂಶೀಯವಾಗುವಿಕೆ ಆಗಿನ್ನೂ ಚಿದಂಬರ ರಹಸ್ಯ.
ನಿಜ, "ಮಂಗನಿಂದ ಮಾನವ" ನ ಸಿದ್ಧಾಂತ,
ಒದಗಿಸಿದ ಸಾಕ್ಷಿ, ಪುರಾವೆಗಳು ಅಗಾಧ
ಅಲ್ಲಗಳೆಯುವಂತಿರಲಿಲ್ಲ, ಒಪ್ಪುವಂತಿರಲೂ ಇಲ್ಲ
ಮತ್ತದೇ ಸಮಾಧಾನ ನೀಡದ ಪ್ರಶ್ನೆ, ಬದಲಾವಣೆ!...?
ಅನಿವಾರ್ಯ ಇರುವಿಕೆಗೆ ಸಂಶಯವಿಲ್ಲ,
ಪರಿಸರವೇ ಸ್ಪಷ್ಟ ಪುರಾವೆ, ಜೀವಂತ ಉತ್ತರ
ಬದಲಾವಣೆಯ ಮೂಲವಾದರೂ ಏನು? ಹೇಗೆ? ಎಲ್ಲಿ?
ತಳಿ ವಿಜ್ಞಾನದ ಪಿತಾಮಹ ಮೆಂಡಲನ ದುರ್ವಿಧಿಯೋ,
ಡಾರ್ವಿನ ನ ದ್ವಂದ್ವವೋ
ಸೃಷ್ಟಿಯನು ಯಾರು ಪ್ರಶ್ನಿಸುವಂತಿರಲಿಲ್ಲ
ಸೂಕ್ಷ್ಮ ಕೋಶೀಯ ದೇಹದ ಪರಿಕಲ್ಪನೆ ಇಲ್ಲದ ಆ ಕಾಲದಲ್ಲಿ
ವಂಶಾಣುಗಳ ಕಲ್ಪನೆಯಾದರೂ ಯಾರಿಗೆ ಬರಬೇಕಿತ್ತು
ಕಾಯಬೇಕಿತ್ತು, ವಿಕಾಸದ ಪಿತಾಮಹ
ಬೇಕಿತ್ತು ಹತ್ತಾರು ದಶಕಗಳು ಅರಿವಾಗಲು
ಜೀವವಿಕಾಸ ತಂತ್ರದ ಸರಳ ವಿವರಣೆ ಬೇಕಿತ್ತು
ಇನ್ನಷ್ಟು ತಜ್ಞರು,ವಿಜ್ಞಾನಿಗಳು ಆತನ ಪ್ರತಿಪಾದನೆಗೆ.
ಸಮರ್ಥನೆಗೆ ಬಂದಿತ್ತು ನವಡಾರ್ವಿನಿಸಿಮ್ ಕೊನೆಗೂ
ನೆರವಿಗೆ ಬಂದ ಸಂಶೋಧನೆಗಳು, ಜೀವವಿಜ್ಞಾನಿಗಳು
ರಹಸ್ಯ ಬಯಲು, ಆಸ್ಪದವಿಲ್ಲ ಅನುಮಾನಕೆ
ನಿಜ, ಇರಲಿಲ್ಲ ಸಂಶಯ ಸೃಷ್ಟಿಕ್ರಿಯೆಯಲ್ಲಿ
ಎಲ್ಲರಿಗೂ ಅನುಭವಾಗಿದೆ ಪರಿಸರ ಸೃಷ್ಟಿ
ದೇಹಾಂತರಿಕ ಇರುವಿನಲ್ಲಿ, ವಿಶ್ವದರ್ಶನ,
ಆದಿ, ಅನಂತತೆಯ ಅರಿವು, ಎಲ್ಲವೂ ಒಂದು
ಮಂಗನಾಗಿದ್ದೆ ಎಂದು ನಂಬಲು ಮುಜುಗರವಿಲ್ಲ
ಮಿಲಿಯಾನುವರ್ಶಗಳ ಹಿಂದಿನ ಪೂರ್ವಜರು ನೆನಪು
ಇಂದಿನ ಮರದ ಕೋತಿಗಳ ಕಂಡಾಗ ಅವ್ತಕ್ತ ಅನುಕಂಪ
ವಂಶೀಯ, ದಾಯಾದಿ ಸಂಭಂದದ ಕುಡಿಯಲಿ ಅವ್ಯಕ್ತ ಮಿಡಿತ
ಮರಬಿಟ್ಟು ನೆಲಸೇರಿಸಿದ ನಮ್ಮ ಆ ಪೂರ್ವಜರಲ್ಲಿ
ಕೃತಜ್ಞತಾ ಭಾವ ಡಾರ್ವಿನ್ ನನ್ನೂ ಸೇರಿ.



( ವಿಕಾಸದ ವೈಜ್ಞಾನಿಕ ಪರಿಕಲ್ಪನೆಯನ್ನು ಪ್ರಯೋಗಾತ್ಮಕ ಶೈಲಿಯಲ್ಲಿ ನಿರೂಪಿಸುವ ಪ್ರಯತ್ನ)

Comments

Popular posts from this blog

Reunited...at last..

ಕಾಗೆ....

The Crow.