ಅಲ್ ಸಾದಿಕಿ ಅಲ್ ರದೀ. ಸುಡಾನ್ ಕವಿ- (ಅರೇಬಿಕ್ ಮೂಲದ ಇಂಗ್ಲಿಷ್ ಅನುವಾದದ ಭಾವಾಂತರ) ಉಸಿರ, ಕೋಮಲರಾಗ ವಾಗಿಸುವ ಗಾನಕೋಗಿಲೆಗಳು ನಿನ್ನ ಬಾಯಲ್ಲಿ ನಿನ್ನ ಕಣ್ಣಿಂದ ತುಳುಕುವ ಮಬ್ಬು ಬೆಳಕಲ್ಲೇ ನೀ ಸಂಪೂರ್ಣ ಬೆತ್ತಲೆ ಜಾಗೃತವಾಗಲು ನೀನು, ಒಮ್ಮೆಯಾದರೂ ಜಿಗಿಯಬೇಕು ದಿಗಂತದಾಚೆ ತೆರೆದಷ್ಟೂ ಅಂತ್ಯವಿಲ್ಲದ ಮುಚ್ಚಿದ ಕಿಟಕಿಗಳ ತೆರೆಯುತ್ತಲೇ ಇರಬೇಕು ಗೋಡೆಗಳಿಗೆ ಆದಾರವಾಗಬೇಕು ದೇಹ, ಜಗದ ನಡುವೆ ಸೂಕ್ಷ್ಮ ಭಾಷೆ ಎಳೆಯಲ್ಲೇ ಅಕ್ಷರಗಳಿಗಂಟಿಕೊಂಡು ಏರುವ ನಾನು ನಿಜ ಲೋಕ, ಭಾಷೆಗಳ ನಡುವೆ ಜೋತು ಬಿದ್ದಿರುವ ಭಾವನೆಗಳ ಕಲೆಹಾಕುತ್ತೇನೆ ಬಾಯಲ್ಲೇ ಅಕ್ಷರ, ನಿಜಪರಿಸರಗಳ ನಡುವೆ ತೂಗುತ್ತೇನೆ ಬೆಟ್ಟದೊಂದರ ತುದಿಯಲ್ಲಿ ನಿಂತು ಗಾಳಿಯೊಂದಿಗೆ ಗುದ್ದಾಟದಲಿ ಆತ್ಮ ಪ್ರಸಂಶೆ ರಹಸ್ಯಗಳ ಪ್ರತಿಧ್ವನಿ ಆಲಿಸಲು ಕೊಟ್ಟಿದ್ದೇನೆ ಕೌತುಕಕೆ ನನ್ನ ತಲೆ ಮುಕ್ತವಾಗಿ ನನ್ನ ನಾಲಿಗೆಯೇಕೆ ಇಷ್ಟು ಎತ್ತರವೇರಲು ಹೇಳಿದೆ? ನನ್ನಾಸೆ, ನನ್ನದೇ ಧ್ವನಿಗಳ ನಡುವಿನ ಅಂತರ ವೇನು ಏನಿದೆ ಈ ಕಂದರದ ಕೇಂದ್ರದಲ್ಲಿ? ದೇಹವೇ ತನ್ನಿರುವ ಮೀರಿ ಅತೀತವಾಗುವ ಆಸೆಗಳ ವಂಚನೆಯಲಿ ಗಡಿಪಾರಾದ ದೇಹ ಗಾಳಿಯಲ್ಲಿ ಸುಭಧ್ರ,
Posts
Showing posts from May, 2018
- Get link
- X
- Other Apps
The Laboratory. Somebody asked me who am I? I did reply with pride my name. The questions on my great family tree when investigated unstopped and uninterrupted… further and farther like a detective on solving a murder mystery I did answer my father’s name and his father’s…. grand fathers name… With sir name attached in great fancy I did not forget to detail out the place of migration from where it branched and extended in its exploration An unavoidable adventure of an escape of desperation. The questions seem to be unending…. the names and identity and the origin of history diffused My very presence became a worthless molecule disappeared into the timeless solution, The great search continues to segregate the solute Solvent is settled in a saturated solution dissolved gradually into a matter of plasma And till I got confused with constant stirring who am I ? Yes...tell me who I am? Forgot my own present name,puzzled and irritated in a raze, I answered..... "D...
- Get link
- X
- Other Apps
ಪಲಾಯನ /ಮೌನ ಕಣಿವೆ. ದೂರದ ಬೆಟ್ಟ ನುಣ್ಣಗೆ, ಕಾಣುವ ಕಾಡು ಸಣ್ಣಗೆ ಹೂಕೋಸುಗಳ ಹಸಿರ ಸೊಂಪಿನ ಗುಂಪು ಹೊರಳಿದ ಕೋನದಲ್ಲೆಲ್ಲಾ ವಿಸ್ತರಿಸುವ ಕಣ್ಣು ಒರಟು ಹಸಿರ ಚಾದರಹೊದ್ದಿರುವ ಗಿರಿಗಳ ರಾಶಿ, ಕಣಿವೆಯ ಆಳದ ಮೇಲೆ ಕಾಣುವ ವಿಸ್ತಾರ ನೀಲಿ, ಕಾಡ ತಬ್ಬಲು ಕಾಡುವ ಚಡಪಡಿಸುವ ಮನಸು ಶಿಖರ ಏರಿ ನಿಂತಾಗ ಸ್ವರ್ಗತಾಕಿದ ಅವ್ಯಕ್ತ ಖುಷಿ, ನೂರಾರು ಬೆಟ್ಟಗಳು ವಿಶಿಷ್ಟ ಮೇಲ್ಮೈ ಗುಮ್ಮಟವೋ, ಗೋಪುರವೋ,ಎಲ್ಲವೂ ಅಂತ್ಯದಲಿ ವಕ್ರತೆಯ ಸಮತಟ್ಟು,ಇಳಿಜಾರ ಮೇಲ್ಮುಖ ಏರು ದಿಣ್ಣೆ ತಗ್ಗಾಗುವ ಬಯಲು, ಕೆಳಹರಿಯುವ ಝರಿ ರಕ್ತನಾಳಗಳು, ಲೋಮನಾಳಗಳ ಹರಿವಲ್ಲಿ ತೊರೆಗಳ ಕವಲು ಕತ್ತರಿಸಿ,ನೀಟಾಗಿ ಬೋಳಿಸಿದ ಉದ್ಯಾನವನದ ಹುಲ್ಲಲ್ಲ ಸ್ವೇಚ್ಛೆಯಲಿ ಎಲ್ಲೆಡೆ ಹರಡಿ, ಎಲ್ಲರನು ಬಚ್ಚಿಡುವ ಸಸ್ಯಾಹಾರಿ ಹಲ್ಲುಗಳ ಸೈಂಧವ ಹುಲ್ಲು ಅಪರಿಚಿತ ಜೀವಿಗಳ ಬಾಡಿಗೆರಹಿತ ಆವಾಸ ಇಳಿಜಾರಿನ ತಳದಲ್ಲಿ, ಅಸಂಖ್ಯ ಅಗೋಚರ ಜೀವ ಪ್ರಭೇದಗಳು ಇಳಿದಾಗ, ನಡೆದಾಗ, ಏರುವಾಗ ಎಲ್ಲವೂ ಅಯೋಮಯ! ದೇಹಾಂತರಿಕ ಅಂಗರಚನಾ ಬಲೆ, ವಿವರಣೆಗೆ ಸಿಕ್ಕದ, ವಿವಿದತೆಯನ್ನೇ ಕೆಣಕಿ, ಜೋಡಿಸಲ್ಪಟ್ಟ ಸಸ್ಯ ಸ್ತರಗಳ ಜಾಲ, ಅಂಗ, ಅಂಗಾಂಶಗಳ ಪ್ರತ್ಯೇಕ ಕೋಶಗಳ ವಿನ್ಯಾಸ, , ಮರಗಿಡಗಳು, ಪೊದೆ ಮೂಲಿಕೆ, ಎಲೆ ಹೂಗಳ ಓಕುಳಿ ಒಣಗಿ, ಒಂಟಿನಿಂತ ಕಪ್ಪು ನಿರ್ಜೀವ ಪಂಜರ ಭಯ ಹುಟ್ಟಿಸುವ ಒಂಟಿ ಮರ ಹಸಿರ ಓಯಸಿಸ್ ನಲ್ಲಿ ಇಂಚು,ಇಂಚಲ್ಲೂ ಬದಲಾಗುವ ಬಣ್ಣದ ಸಂಚು, ಮರುಗಳಿಗೆಯಲಿ ದಟ್ಟಮೋಡದಲಿ ಮಿಂಚ...