ಅಲ್ ಸಾದಿಕಿ ಅಲ್ ರದೀ. ಸುಡಾನ್ ಕವಿ- 
(ಅರೇಬಿಕ್ ಮೂಲದ ಇಂಗ್ಲಿಷ್ ಅನುವಾದದ ಭಾವಾಂತರ)



ಉಸಿರ, ಕೋಮಲರಾಗ ವಾಗಿಸುವ ಗಾನಕೋಗಿಲೆಗಳು ನಿನ್ನ ಬಾಯಲ್ಲಿ
ನಿನ್ನ ಕಣ್ಣಿಂದ ತುಳುಕುವ ಮಬ್ಬು ಬೆಳಕಲ್ಲೇ ನೀ ಸಂಪೂರ್ಣ ಬೆತ್ತಲೆ
ಜಾಗೃತವಾಗಲು ನೀನು, ಒಮ್ಮೆಯಾದರೂ ಜಿಗಿಯಬೇಕು ದಿಗಂತದಾಚೆ
ತೆರೆದಷ್ಟೂ ಅಂತ್ಯವಿಲ್ಲದ ಮುಚ್ಚಿದ ಕಿಟಕಿಗಳ ತೆರೆಯುತ್ತಲೇ ಇರಬೇಕು
ಗೋಡೆಗಳಿಗೆ ಆದಾರವಾಗಬೇಕು
ದೇಹ, ಜಗದ ನಡುವೆ ಸೂಕ್ಷ್ಮ ಭಾಷೆ ಎಳೆಯಲ್ಲೇ
ಅಕ್ಷರಗಳಿಗಂಟಿಕೊಂಡು ಏರುವ ನಾನು
ನಿಜ ಲೋಕ, ಭಾಷೆಗಳ ನಡುವೆ
ಜೋತು ಬಿದ್ದಿರುವ ಭಾವನೆಗಳ ಕಲೆಹಾಕುತ್ತೇನೆ ಬಾಯಲ್ಲೇ
ಅಕ್ಷರ, ನಿಜಪರಿಸರಗಳ ನಡುವೆ ತೂಗುತ್ತೇನೆ
ಬೆಟ್ಟದೊಂದರ ತುದಿಯಲ್ಲಿ ನಿಂತು
ಗಾಳಿಯೊಂದಿಗೆ ಗುದ್ದಾಟದಲಿ ಆತ್ಮ ಪ್ರಸಂಶೆ
ರಹಸ್ಯಗಳ ಪ್ರತಿಧ್ವನಿ ಆಲಿಸಲು
ಕೊಟ್ಟಿದ್ದೇನೆ
ಕೌತುಕಕೆ ನನ್ನ ತಲೆ ಮುಕ್ತವಾಗಿ
ನನ್ನ ನಾಲಿಗೆಯೇಕೆ ಇಷ್ಟು ಎತ್ತರವೇರಲು ಹೇಳಿದೆ?
ನನ್ನಾಸೆ, ನನ್ನದೇ ಧ್ವನಿಗಳ ನಡುವಿನ ಅಂತರ ವೇನು
ಏನಿದೆ ಈ ಕಂದರದ ಕೇಂದ್ರದಲ್ಲಿ?
ದೇಹವೇ ತನ್ನಿರುವ ಮೀರಿ ಅತೀತವಾಗುವ
ಆಸೆಗಳ ವಂಚನೆಯಲಿ ಗಡಿಪಾರಾದ ದೇಹ ಗಾಳಿಯಲ್ಲಿ ಸುಭಧ್ರ,

Comments

Popular posts from this blog

Reunited...at last..

ಕಾಗೆ....

The Crow.