ಅತೃಪ್ತ. ಖಾಲಿಯಾಗಬೇಕಿದೆ, ಸಂಪೂರ್ಣವಾಗಿ, ಅಡಿಯಿಂದ ಮುಡಿಯವರೆಗೆ ಕಲ್ಪನಾತೀತ ಗತಕಾಲದ ಅನುವಂಶೀಯತೆ ಕೊಬ್ಬಿರುವ ಸ್ಥೂಲ ದೇಹದಲ್ಲಿ, ಅದೇ ಮಿದುಳು ವಕ್ರ ಮೇಲ್ಮೈಯಲ್ಲಿ ಅಗಣಿತ ನರತಂತು ಗ್ರಾಹಕದ ಸ್ವೀಕೃತಿಗೆ ತಿರುಗಿ ಬೀಳದೆ ಬದ್ದ ಪ್ರಾಮಾಣಿಕ ಬೆಳಕು,ವಿಕಿರಣದಲಿ ಥಳಕು ಹಸಿರಲ್ಲಿ ಉಸಿರಾಡಿ ಸೂರ್ಯ ನುಂಗುವ ರಾಹು, ಕೇತು. ಪ್ರಚೋದನೆ, ಪ್ರತಿಕ್ರಿಯೆ ವಿರೋದಾಭಾಸ, ಕೆಸರ ಬಸಿರಾಗಿರುವ ಕುಲಾಂತರಿ ವಿಷ ಗಾಳಿ ದಿಕ್ಕುತಪ್ಪಿ ರಾಧ್ದಾಂತ,ರಗಳೆ ಕೆಟ್ಟ ಮಿಶ್ರತಳಿ ಬಣ್ಣಬದಲಾಗಿದೆ, ಪಂಚಭೂತ ಅನಿವಾರ್ಯ, ಅನಿಯಮಿತ ಸ್ಥಾನಪಲ್ಲಟ ನಿಯಮ ಪಾಲಿಸದ , ಋತುಮಾನಗಳು ಸ್ವೇಚ್ಛಾಚಾರ ಮೆರೆದ ಮೆರವಣಿಗೆ, ನಾಗರೀಕ, ಸಂಸ್ಕೃತಿಗೆ ಮುಕ್ತ ಬರವಣಿಗೆ. ಇರಬೇಕು, ಗಿಡ, ಮರ, ಪ್ರಾಣಿ,ಪಕ್ಷಿಗಳಂತೆ ಅಗೋಚರ ಸಮುದಾಯ ಅಣುಜೀವಿಗಳಂತೆ ಬೇಕಿಲ್ಲ, ವಂಶದ ಹಂಗು, ಮನೆತನ ಬಿರುದು, ಕುಲಗೌರವ ಭವ್ಯತೆ, ವಂಶಕೀರ್ತಿಯ ಹೊರಲಾರದ ಕಿರೀಟದ ಹೊರೆ, ಹೆಣಭಾರ,ಸಂಸ್ಕಾರ, ಮಾನವತೆ ಪುರಸ್ಕಾರಕ್ಕೆ ತಕ್ಕ ತಿರಸ್ಕಾರ. ಇಳಿಸಬೇಕಿದೆ, ನಿರ್ಮೋಹದಲ್ಲಿ, ದೇಶ, ಧರ್ಮ, ಜಾತಿ ವರ್ಗೀಕರಣದ ಸನ್ಮೋಹನದಲ್ಲಿ ಬೇಕಿಲ್ಲ ವಿಶಿಷ್ಟ ಮೀಸಲಾತಿ ನಾಮಕರಣ ಮನುಕುಲದ ಜೈವಿಕ ಅಜ್ಞಾನ, ಜಾಣಮುಗ್ಧತೆ ಕಾರಣ ಶ್ರೇಷ್ಟತೆಯ ಜೇಷ್ಟತೆಯ ಮಹಾ ಕುಚೇಷ್ಟೆ ಸಹಜೀವಿಗಳ ಮಾರಾಣಾಂತಿಕ ಶೋಷಣೆ ತಡೆಯಿಲ್ಲ ಅಮಾಯಕರ ಮಾರಣಹೋಮ ನಮ್ಮ ದೇವರ ನಿಸ್ವಾರ್ಥ,ನಿಷ್ಕಾಮ ಪೂಜೆಗೆ ಅಸಹಾಯಕ ಪ್ರಭೇಧ ದಾರುಣ ಬಲಿ. ಪ್...
Posts
Showing posts from July, 2018
- Get link
- X
- Other Apps
11-07-2018. ಶಾಪ. ಸ್ವಚ್ಛ ಗೊಳಿಸುವ ಹಳ್ಳಿಯ ಗುತ್ತಿಗೆದಾರ ಮಳೆರಾಯ, ಹೆಚ್ಚು ಕಡಿಮೆ, ಕಾಲಪ್ರಜ್ಞ ಸಮಯಪಾಲಕ, ಬಂದೇ ಬರುತ್ತಾನೆ ವರುಷದಲ್ಲಿ ಒಮ್ಮೆ ಸಮಯ ಸ್ವಲ್ಪ ಹಿಂಚು, ಮುಂಚು, ಸಿಂಪಡಿಸಿ ಮಳೆನೀರ, ಸೂಕ್ತ ಮಿಶ್ರಣದಲ್ಲಿ ತೊಳೆದು, ಬಳೆದು, ಶುಚಿಗೊಳಿಸುತ್ತಾನೆ ಸಾರಿಸಿ, ಗುಡಿಸಿ, ಮನೆ, ಕೇರಿ, ಹಾದಿ, ಬೀದಿ, ಧೂಳು ಝಾಡಿಸಿ, ರಬಸದಲಿ ತಿಕ್ಕಿ ಆರಲು ಬಿಟ್ಟಾಗ, ಹಳ್ಳಿ ಚಿತ್ರಕಾರನ ಕ್ಯಾನ್ವಾಸ್ ಮೇಲೆ, ಹೊಚ್ಚಹೊಸ ಹೊಳೆಯುವ ಸುಂದರ ಭೂವಿನ್ಯಾಸ ಚಿತ್ರ ಹುಳ, ಕೀಟ, ಹುಪ್ಪಡಿ, ಗಿಡ, ಮರ, ಮೂಲಿಕೆ ಹೂ, ಎಲೆಗಳು ರೂಪಪಡೆಯುತ್ತವೆ ,ಸ್ಪಷ್ಟವಾಗಿ ಮತ್ತೊಮ್ಮೆ, ತಮ್ಮ ರೆಂಬೆ, ಟೊಂಗೆಗಳ ಮೇಲೆ ಮನಮುಟ್ಟುವ ಪ್ರಕೃತಿಯ ಬಣ್ಣ ಹೊಳೆಯುವ ಎಲೆ, ಚಿಗುರು, ಮೊಗ್ಗು, ಹೂ ಮರುಜೀವ ಗಳಿಸಿ, ಗಾಳಿಯಲಿ ತೂಗಿ ಅಭಾರಿಯಾಗಿ ನಲಿದು ತೂಗುವಾಗ, ಉಲಿಯುತ್ತವೆ ಕೋಗಿಲೆ, ಕಪ್ಪೆಗಳ ವೃಂದಗಾನ, ಗವಾಕ್ಷಿಯಲಿ ಹೊಗೆ ಏರುತ್ತದೆ ಮೇಲೆ, ತೊಳೆದ ರಾಡಿನೀರು ಧೂಳಿನ ಡಿಕಾಕ್ಷನ್ ಹರಿಯುತ್ತದೆ, ಈಗತಾನೆ ತೊಳೆದ, ಎಲ್ಲರ ಮನೆಮುಂದೆ ಮಕ್ಕಳ ಕಾಗದದ ದೋಣಿಗಳ ಹೊತ್ತು ಕಸ, ಕಡ್ಡಿ, ಒಣ ಸಗಣಿ ತೇಲಿ,ನೊರೆಯಾಗಿ ತೊರೆಯಾಗಿ, ದಾಟಿ ಹಳ್ಳ, ಕೆರೆ ಮುಟ್ಟಿಸಿ ತಳ ತಲುಪಿ ಹೂಳುಗೊಬ್ಬರ, ನೇಗಿಲ ಯೋಗಿ, ವರ್ಷಪೂರ್ತಿ ಹರ್ಷ ಹುಟ್ಟಿದ ಮರಿ, ಮಳೆಯಲಿ ತೋಯ್ದ ಹಳ್ಳಿಯ ಹಸಿರು ಸದಾ ಖುಷಿಕೊಡುವ ನೋಟ ನೆನಪೀಗ ಮಾತ್ರ ಬದಲಾಗಿದೆ ಕಾಲ ಆದರೂ, ಅದೇ ಗುತ್ತಿಗೆದಾರ, ಪ್ರಾಯದ, ಮುಂಗ...
ಮನುಷ್ಯ...
- Get link
- X
- Other Apps
ಮನುಷ್ಯ... ನಿನ್ನ ನಿಲ್ಲದ ಅನಾಯಾಸದ ಪ್ರಶ್ನೆಗೆ ಮಿದುಳಲ್ಲಿ ಬಿಡುವಿಲ್ಲದ ಹುಡುಕಾಟ ಮನಸ್ಸಿನಲ್ಲಿನ ತಡಕಾಟ, ಹುಡುಕುವುದಕ್ಕೆ ಬೇಕಿದೆ ಕಾರಣ ನಿಲ್ಲದ ಪರದಾಟ, ಅವ್ಯಕ್ತ ಹೋರಾಟ ತಲೆಬುಡದ ನಾಯಕ ಗ್ರಂಥಿ! ಸೇವಕ ನಡುಪಂಥಿ ಹೃದಯ, ಮುಚ್ಚಿದ ಕತ್ತಲು ಕೋಣೆ, ಎಡವೋ? ಬಲವೋ? ದ್ವಿದಳ ಕವಾಟದ ಆಚೆಯೇ ಹೃತ್ಕುಕ್ಷಿಗಳು ಕೊಳವೆಯಾಂತರ ರಕ್ತಪ್ರವಾಹ ಸಮವೇಗ ಸ್ಥಿರತೆಯಲಿ ತಟಸ್ಥ ಭಾವನೆಯ ಸೆಲೆಯೋ, ಬರಡು ನೆಲೆಯೋ? ಗೊಂದಲದ ಬಲೆಯಲ್ಲಿ ಅಲ್ಲಿ ಏನಿದೆ ಎಂಬರಿವು, ಆಳವೇ ಸುಳಿಯ ಸೆಳವು ಎಲ್ಲವೂ ಅಯೋಮಯ, ಅಸ್ಪಷ್ಟ ಇಂದಿಗೂ ನಿಗೂಢ, ಕಾಣದ ಪವಾಡ ತಲೆ ಕೆಡಿಸಬೇಡ, ತೂಕಡಿಕೆ ನಿಂತಿಲ್ಲ ಇನ್ನೂ, ಮೌನ, ನಿರುತ್ತರವೇ ಪರಿಹಾರವಿರಬಹುದು ಪ್ರಶ್ನೆಯೇ ಚಟವಾದ ವ್ಯಸನಿ ನೀನು ಉತ್ತರಿಸುವ ಹುಚ್ಚ, ಹುಂಬತನ ಹಟ ನನಗಿಲ್ಲ ಬದುಕಲೇ ಬೇಕೆಂಬ ಸಹಜ ಚಟ, ಸಾಯುವವರೆಗೂ ಪ್ರಶ್ನಿಸುವ ಹಕ್ಕಿನ ಅಮಲು ನನಗಿಲ್ಲ ತತ್ವ, ಸಿದ್ಧಾಂತಗಳ ಮಿತಿಯಲ್ಲಿ ಸ್ವಾತಂತ್ರದ ಜಾತ್ರೆಯಲಿ, ಅಜ್ಞಾನದ ಆಡಳಿತ ಮೌಢ್ಯತೆಯ ಆಟಕ್ಕೆ, ಭಾಗಿಯಲ್ಲ ಸವಾಲು, ಪ್ರತಿಕ್ರಿಯೆಗಳ ಹಂಗು, ಇರಬಹುದು ಸೃಜನಾತ್ಮಕ, ಪ್ರತಿಭಾನ್ವಿತರದೇ ಸ್ವತ್ತು ಖಾಲಿಯಾಗಿಯೇ ಉಳಿಯಬಹುದು ಅನಾಮಧೇಯರಾಗಿ, ಆಗಂತುಕರಾಗಿ, ಈ ಗ್ರಹದ ಇತರ ಸಹಜೀವಿ, ಸಹ ಪ್ರಭೇದಗಳಂತೆ, ವಿಶ್ವ ಮಾನವನ ಪಟ್ಟಕ್ಕೆ ಮನಸ್ಸು ಒಪ್ಪುತ್ತಿಲ್ಲ ನಾವೇ ನಾ...