ಫುಟ್ ಬಾಲ್ 28-10-18 ವಿಶ್ವ ಫುಟ್ಬಾಲ್ ಪಂದ್ಯ ನಡೆಯುತ್ತಿದೆ ಕ್ರೀಡಾಂಗಣದಲ್ಲಿ.ಕಿಕ್ಕಿರದ ಜನ, ಕಿವಿಗಡಚುವಂತಹ ಸದ್ದು....ಹುಚ್ಚೆದ್ದ ಅಂತರಾಷ್ರ್ಟೀಯ ಪ್ರೇಕ್ಷಕರ ಕಿರುಚಾಟ,ಸದ್ದು, ಪದವಾಗದ ಅರ್ಥಹೀನ ಧ್ವನಿ,ತಿಳಿಯುತ್ತಿಲ್ಲ,ಯಾರಿಗೂ.ಯಾರಿಗೆ,ಯಾರಿಂದ,ಪ್ರೋತ್ಸಾಹನಿರುತ್ತೇಜನ?ಹುರಿದುಂಬಿಸುವ ಜಯಕಾರ ಸಮರವೀರರಿಗೆ, ಮೊಳಗಿದ ಯುದ್ಧಘೋಷಣೆ, ಏನೂ ಕೇಳುತ್ತಿಲ್ಲ. ವಿಶಾಲ ಹಸಿರು ಹಾಸಿಗೆಯ ಮೈದಾನದಲ್ಲಿ,ಎರಡು ಗೋಲು ಪೋಸ್ಟ್ಗಳಿವೆ ವಿರುದ್ಧದಿಕ್ಕಿನಲ್ಲಿ.ಅವೆರಡರ ನಡುವೆಯೇ ನಡೆದಿರುವ ಆಟ,ಹೇಗೆ ತಲುಪಿದರೂ ಎರಡು ಗುರಿಕಂಬಗಳ ನಡುವಿನ, ಖಾಲಿತನವನ್ನ ತಲುಪಲೇ ಬೇಕು.ಗೋಲುಬಲೆ, ಗೋಲುರಕ್ಷಕನಿಗೆ ಮಾತ್ರ.ಜಾಗಕದಲದ ದಿಗ್ಭಂದನ.ಬಲೆಯಲ್ಲಿ ಚೆಂಡು ಹಾಕುವುದೇ ಗೆಲುವು,ಚೆಂಡು ತಡೆಯದಿರುವುದೇ ಸೋಲು.ಇದು ಕ್ರೀಡಾನಿಯಮ, ಪೈಪೋಟಿ, ಅದಕ್ಕಾಗಿಯೇ ಇಲ್ಲಿ ಈಗ ನಡೆದಿರುವ ಮಹಾಸಮರ, ಖಾಲಿ, ಬರಿಗೈಲಿ ತಲುಪವಂತಿಲ್ಲ, ತಾವೂ ಹೋಗುವಹಾಗಿಲ್ಲ. ಹೋದರೂ ನಗಣ್ಯ, ಅದು ಗೋಲಲ್ಲ.ಆ ಬಲೆಯೊಳಗೆ, ಕೇವಲ ಚೆಂಡುಮಾತ್ರ ಕಳಿಸಬೇಕು.ಔಟಾದರೂ ಪರವಾಗಿಲ್ಲ, ಗಡಿರೇಖೆ ಬಿಟ್ಟು. ಕ್ಷೇತ್ರ ಗೋಲ್ ಹೊಡೆಯಬಹುದು ಎಲ್ಲಿಂದಾದರೂ ಮೈದಾನದಲ್ಲಿ, ದಿಕ್ಕುಮಾತ್ರ ಪರಸ್ಪರ ವಿರುದ್ಧವಿರಬೇಕು ಅಷ್ಟೇ! ಅಥವಾ ಒಬ್ಬರಿಂದ ಒಬ್ಬರಿಗೆ ಪಾಸ್ ಕೊಟ್ಟು ಇನ್ನೊಂದು ಪಕ್ಕಕ್ಕೆ ತಂದು,ಗೋಲ್ ಸಮೀಪ ಸಮಯಸಾಧಿಸಿ, ಕೋಟೆ ಭೇದಿಸಿ ಚೆಂಡನ್ನು ನುಗ್ಗಿಸಬೇಕು.ಇವೆಲ್ಲವೂ, ಆದರೆ ಕಾಲಿಂದ ಮಾತ್ರ.ಕೈ,ಮ...
Posts
Showing posts from November, 2018