ಕಿವಿ ಮಾತು.

ಇದ್ದುಬಿಡು ಹಾಯಾಗಿ,
ಹಾವಿನಂತೆ ನಿನ್ನದೇ ಬಿಲದಲ್ಲಿ
ಹಗುರವಾಗಿ,
ಕಳಚಿ ಬಿಡು ಸಂಭಂದಪೊರೆ  ಎಲ್ಲರಿಂದ
ನಿರ್ಲಿಪ್ತ,
ತಣ್ಣಗಾಗಿದೆ ನಿನ್ನ ರಕ್ತ
ಬೇಕಾಗಿದೆ ಒಂದು ಪೊಟರೆ ಗ್ರೀಷ್ಮ ನಿದ್ರೆಗೆ
ಬಿಂದಾಸ್,ಒಂಟಿಯಾಗಿ....
ತೆಗೆದುಕೋ ಶಶಿರ ವಿಶ್ರಾಂತಿ
ನಿಶ್ಚಿಂತ ನಾಗು....ಪೊರೆಕಳಚಿ
ಯಾರ ಹಂಗಿಲ್ಲದೆ, 
ಅಪರಿಚಿತನಾಗು ಸ್ನೇಹವಿಲ್ಲದೆ, ನಿನಗೆ ನೀನೆ...
ಆಗಂತುಕ ನಾಗು ಎದುರು ಸಿಗುವ ಪರಿಚಯದ ಮುಖಕೆ
ನಗೆ ಬೀರುವರಿಗೆ.
ಕಳೆದುಹೋಗು,
ನಿನ್ನ ಯಾರೆಂದು ಕೇಳಿದರೆ??? 
ವಿಚಾರಿಸಲೂ ಸಾಕು ಕೆಟ್ಟ ಕುತೂಹಲ
ಈ ಬೃಹತ್ ಜನಜಾತ್ರೆಯಲ್ಲಿ.
ಯೋಚಿಸಬೇಡ ನೀನಾರೆಂದು...
ನಿನಗೆ ಯಾರು ಗೊತ್ತಿಲ್ಲ, ಮರೆವು ನಿನ್ನ ಸರ್ವಸ್ವ,  
ಮಸ್ತಿಷ್ಕ ಮಾಸಿದೆ, ಹೊಳಪು ನೀಡಿ
ನೋಡಿದರೂ ಕಾಣಲಾರೆ ಪ್ರತಿಬಿಂಬ
ನಿನ್ನ ಬೆನ್ನ ಹಿಂದೆಯೇ  ನಿನ್ನ ಸ್ಮಾರಕ ಶಿಲಾ ಸ್ಥಂಭ
ಜೀವವಿಲ್ಲದೆ  ಪ್ರತಿಧ್ವನಿಸುವ  ಕಲ್ಲು
ನೀನು ಅಷ್ಟೇ...
ಬೀರೊಂದು ಪ್ರತಿಕ್ರಿಯೆಯ ಮಂದಹಾಸ
ನೋವಲ್ಲೆ ಪ್ರೀತಿಸಿ, ನೋವನ್ನೇ ಶಿಲುಬೆಗೇರಿಸಿದ 
ಆ ಮಹಾಪುರುಷ ಕ್ರ್ಯಸ್ತನಂತೆ.

Comments

Popular posts from this blog

ಕಾಗೆ....