ಒಂದು ಗೀತೆ......

ಕವನ...
ಮೂಲ ಆಂಗ್ಲ ಭಾಷೆ-----ಮೀನಜಾನ್.
ಕನ್ನಡ ಅನುವಾದ-------ಶೇಷಗಿರಿ ಜೋಡಿದಾರ್.



ಆ ಮೌನ ರಾತ್ರಿಯಲಿ,
ತುಪ್ಪಳ ತುಂಬಿದ ಆ ಮೆತ್ತನೆಯ ತಲೆದಿಂಬಿಗೆ,
ನಯವಾದ ನನ್ನ ಎಳೆಕೆನ್ನೆ ತೀಡಿದಾಗ,
ಬೆಚ್ಚಗಾಯಿತು ನಯವಾದ ಒಳ ತುಪ್ಪಳ.
ಮೃದುವಾಯಿತು.
ಮನಸು, ಹಗುರವಾಗಿ,
ನಿಶ್ಯಬ್ದ ನಿಶೆಯ ಆ ಸುಮಧುರ ಸುಳಿಗಾಳಿಯ ಗಾನ,
ಕತ್ತಲ ಕನಸುಗಳ ಅಲೆ...ಅಪ್ಪಳಿಸಿ,
ಕಿವಿ ತೂರಿದಾಗ,
ಆಶ್ಚರ್ಯ........
ಅಂಗಾತ ಮಲಗಿ,
ಮುಲುಗಿತು,ದೇಹ,
ಮುಳುಗಿತು ಮುದುಡಿದ ಮನ ಪ್ರಶ್ನೆಗಳ ಆಳದಲ್ಲಿ,
ಬೆತ್ತಲೆಯ ಸತ್ಯ,
ನನ್ನ ಈ ಪೂರ್ಣ ನಿಲುವಿನಲ್ಲಿ,
ಓ ನನ್ನ ಆತ್ಮವೇ,
ಓ ನನ್ನ ಮನಸೇ, ಸತ್ಯ, ಸೌಂದರ್ಯಗಳ ಅನುಭವವೇ??
ಅನುಮಾನವೆ?? ಈ ವರ್ತಮಾನ?
ನನ್ನ ಇರುವು? ನಿರುತ್ತರ ಪ್ರಶ್ನೆಗಳ ಅವಶೇಷ!!
ನನ್ನ ಕೈ ಕೋಳಕ್ಕೆ,
ಯಾರ ನಾಡಿ ಪಿಸುಗುಡುತಿದೆ...
ಪ್ರೀತಿ ಜಪವನ್ನ,
ಪ್ರೇಮ ಭಜನೆಯಲಿ,
ಸೌಂದರ್ಯದ ಉಪಾಸನೆ...?
<<<<<>>>>>>

Comments

anna,

this translation is nice, its like original creation. you have grasped the what the poet is saying and again you r a poet,
its nice combination
-vidyarashmi

Popular posts from this blog

Reunited...at last..

ಕಾಗೆ....

The Crow.