ವಾಯುದೇವನ ಗಾಳಿ ಗೀತೆ...

ಯಾರೂ ಕಂಡರಿಯದ ಕಣಿವೆ ಇದೆ ಅಲ್ಲೊಂದು
ಯಾವ ಮನುಜನ ಹೆಜ್ಜೆ ಗುರುತಿಲ್ಲ ಈವರೆಗೂ ಒಂದೂ
ಆ ಆವಾಸದಲ್ಲಿ,
ಬೆಂಡಾಗಿ ಬದುಕಿವೆ ಕಂಗೆಟ್ಟ ಪಾಪಿಬದುಕು
ರಕ್ತ ಬೆವರಾಗಿ, ಮಾಂಸ ಎಲುಬಾಗಿಸುವ ದುಡಿಮೆಯಲ್ಲಿ,
ಅಲ್ಲಿ,
ಸದ್ಗುಣಗಳ ಪ್ರತಿರೂಪ ಆ ಪುಣ್ಯಧಾಮದಲ್ಲಿ,
ಧರೆಗಿಳಿಯಲಿವೆ, ನ್ಯಾಯ, ನೀತಿ, ಧರ್ಮ ಅತಿ ಶೀಘ್ರದಲ್ಲಿ,
ಹತ್ತಿ ಉರಿಯುವ ಗುಂಡಿಗೆ, ಬೆಂಕಿಯ ಗೂಡಿಗೆ,
ಸಕಲ ಕರ್ಮಗಳು ಮರಳುತ್ತವೆ ಅಲ್ಲಿಗೆ,
ಮತ್ತೆ ಅಲ್ಲಿಗೆ...

ಅಲ್ಲಿ,
ಕಾವಾರದ ಪ್ರೇಮ, ಬಲಿತಿಲ್ಲ ಯವ್ವನ,
ಹಾಡಾಗದ ಕಾವ್ಯ ಇನ್ನೂ ಮೌನ,
ಸಾತ್ವಿಕ ಸಾಹಸ ಪ್ರದರ್ಶನ,
ಇನ್ನೂ,
ಉಸಿರುತಿದೆ ಮುಕ್ತವಾಗಿ,ತನ್ನೂರ ತಾಜಾ ಗಾಳಿಯಲ್ಲಿ,

ಕೇಳಿದರೆ,
ಆಲಿಸಿ, ಕೇಳಬಹುದಿಂದು, ಈಗಲೂ ಸಾಯಂ ಪ್ರಾರ್ಥನಾ ಗಂಟೆ...
ನೋಡಬಹುದು...
ಹಾದುಹೋಗುವ ಅಶರೀರ ಪುಣ್ಯಾತ್ಮಗಳ ನಡೆದಾಟ.
ಕೇಳಿ..
ಆ ಅಶರೀರ ಆತ್ಮ, ಅನಂತ ಆಕಾಶ ನಡುವಿನ ಆತ್ಮಾವಲೋಕನ ಸಂವಾದ....

ಮೂಲ- ಹೆನ್ರಿ ತೋರೋ,

Comments

Anonymous said…
ಹುಡುಗಾಟ ಅಲ್ಲ ಹೆನ್ರಿ ತೋರೋ ಅಂತ ಬರಹಗಾರನ ಬರವಣಿಗೆಯನ್ನು ಅರ್ಥ ಮಾಡಿಕೊಳ್ಳೋದು, ಮತ್ತೆ ಅದನ್ನು ನಮ್ಮ ಭಾಷೆಗೆ ಭಾಷಾಂತರ ಮಾಡುವುದು.....ಪ್ರಯತ್ನ ಮಾತ್ರ ಸ್ವಾಗತಾರ್ಹ..ಅಷ್ಟೇ..ಬಾಕಿ ಇನ್ನಾವ ವಿಷಯದಲ್ಲೂ ಸತ್ವ ಇಲ್ಲ.. ಹೇಳಬೇಕಾದದ್ದನ್ನು ಹೇಳು ಸೋತಿದ್ದಾರೆ..ಜೋಡಿದಾರ್ ಅವರು.. ಇಡಿ ಕವನದಲ್ಲಿ ಎರಡು ಅಥವಾ ಮೂರೂ ಸಾಲುಗಳನ್ನು ಬಿಟ್ಟರೆ ಇನ್ನಾವ ಪದಗಳು ಯಶಸ್ವಿ ಯಾಗಿಲ್ಲ... ಏನನ್ನು ಅರ್ಥೈಸುವುದಿಲ್ಲ.. ಸಾಲುಗಳಿಗೆ ಕೊಂಡಿಗಳೇ ಇಲ್ಲ ಅನಿಸುತ್ತದೆ.. ಇನ್ನುಮೇಲಾದರು ಇಂಥಹ ಪ್ರಯತ್ನ ಮಾಡುವಾಗ ನೂರು ಬಾರಿ ಯೋಚಿಸಬೇಕಾಗುತ್ತದೆ.. ಇಲ್ಲದಿದ್ದರೆ ಮೂಲ ಕರ್ತ್ರುವಿಗೆ ಮೋಸ ಮಾಡಿದಂತೆ ಆಗುತ್ತದೆ...

Popular posts from this blog

Reunited...at last..

ಕಾಗೆ....

The Crow.