ವಿಕಾಸ ಗೀತೆ.....
ವಿಕಾಸ ಗೀತೆ
ಜಲಜ ಶಿಲಾ ಸುಪ್ಪತ್ತಿಗೆಯ ಚರಟದ ಚಾದರ ಹೊದ್ದು,ಮಲಗಿರುವ ಕುಂಭಕರ್ಣ.ಧರೆಗೆ ಹಿಡಿದಿತ್ತು ಗ್ರಹಣ,ಚಿರಂಜೀವಿ, ಭ್ರೂಣ ಬೆಳೆಯಲಿಲ್ಲ ಪೂರ್ಣ,ವಿಕಾಸದ ಅನಂತ ಪಯಣಆದಿ ಅಂತ್ಯ ಗಳೆರಡು ಅರಿಯದ ನಿರಂತರ ಮರಣ.ಆ ಕಾಲ ಒಂದಿತ್ತು ಧರೆ ಬೆಂಕಿ ಉಗುಳಿತ್ತುನಿರ್ಜೀವ ಹೊಗೆ ಹೊರಹಾಕಿತ್ತು,ಭೂ ತಾಯಿ ನಿರ್ಜಲ ಬಸಿರು, ಪ್ರಕ್ಷುಬ್ದ ವಾಗಿತ್ತುಮೈ ಮರೆತು ಹರಿಯಿತು ತೊರೆ,ಅಂದೇಮೈನೆರೆತ ವಸುಂಧರೆ,ತೊಟ್ಟಿದ್ದ ಆ ಹಸಿರು ಫ್ಯಾಶನ್ ಸೀರೆಅಂಚಿಗೆ ವರ್ಣಮಯ ವಿನ್ಯಾಸ ಬೇರೆ,ಸಪೂರ ಪಾರದರ್ಶಕ ತೆಳುವಾದ ಪೊರೆ,ನೀಲಹಸಿರು, ಬೂದಿ ಕೆಂಪು ಸತತ ವರ್ಷಧಾರೆ.ಏನೆಲ್ಲಾ ಕಲೆ ಅದರ ಮೇಲೆ? ಹೊರೆ,ಚಿತ್ತಾರದಲ್ಲಿ ಸೆರೆ,ಗೆರೆ,ಕೇಳುವುದಿಲ್ಲ ಯಾರ ಮೊರೆ,ಜೀವಜಾಲದಲಿ ಬದುಕಿನ ಶಾಶ್ವತ ಸೆರೆ,ನಡೆಯುತ್ತಲೇ ಇದೆ ಇಂದಿಗೂ ಅಸಂಖ್ಯಾತ ಕೊಲೆ,
ಜನನ ಮರಣಗಳ ವಿನಿಮಯ ಲೀಲೆ,
ವಸ್ತುಗಳ ವರ್ತುಲ ಮುಗಿಯದ ಜಾತ್ರೆಎಂದೂ ಮುಗಿಯದ ಜೈವಿಕ ಖಾತೆ...ಹರಿಸಿ, ಹಾರೈಸಿದಳು ಪ್ರಕೃತಿ ಮಾತೆ,ಜೀವಿ ವಿಸ್ಮಯ, ವಿವಿಧತೆಯ ಭಿಕ್ಷಾಪಾತ್ರೆ.ಅದಕ್ಕೆ ಇರಬೇಕು, ಸರ್ಪರಾಜನ ಶಾಪ,ಭಸ್ಮವಾಯಿತು, ಪಾಪ,ದೈತ್ಯ ಉರಗ, ಕವಲಾಯಿತು ಖಗ,ಮೃಗ..ಮುಗಿಯಿತು ಸುವರ್ಣ ಯುಗ,ಶುರುವಾಯಿತು ಹೊಸ ರಾಗತಾಯಿಯ ತ್ಯಾಗ ಎದೆಹಾಲಿನ ವೈಭೋಗಇಂದಿನ ಹಾಲಿನ ಯುಗ,ಉಳಿಸಲು ಬೇಕಿದೆ ಮಹಾ ತ್ಯಾಗ,ತೀರಿಸಲು ತಾಯ ಋಣ ತ್ಯಜಿಸಬೇಕಿದೆ ಭೋಗಕೇಳಿ ಕಿವಿಗೊಟ್ಟು ಒಮ್ಮೆ ,ಬರಲಿರುವ ಜೀವಿ ಸಂಕುಲ ಪೀಳಿಗೆಯ ಕೂಗುಸಾಕಿನ್ನು ನಮ್ಮ ಸೋಗು...
Comments