ಹೋಮೊ ಸೆಪಿಯನ್.
ಹೋಮೋ ಸೆಪಿಯನ್
ಏನಿದು?
ಪದ! ನಿಜ....
ಇರಲಿ, ಇರಬೇಕು ಸದಾ,
ಒಂದು ನಾಮಪದ.
ಹೌದು, ನಿಮ್ಮ ಗ್ರಹಿಕೆ ಸರಿ,
ಬರೀ ಹೆಸರ್ರೀ....
ವಿವೇಕಿ ಮಾನವ.
ಹೆಸರು ಸಾಂಕೇತಿಕ,
ಜಾತಿ ಪ್ರಭೇದ ಸೂಚಕ, ನಿಜ ತೀರಾ ವೈಜ್ಞಾನಿಕ
ಸಾಮಾನ್ಯರಿಗೆ ಚಿರ ಪರಿಚಿತನಾದರೂ ಅನಾಮಿಕ,
ಭವಿಷ್ಯ ಬರೆದು ,ಭಾವ ಚಿವುಟಿದ ಭಾವುಕ!
ಹೊತ್ತ ತನ್ನ ರೆಂಬೆಯನ್ನೇ, ತಾನೇ ಕಡಿವ ಸಾದಕ.
ಮಹಾಕವಿ ಕಾಳಿದಾಸ!
ಜ್ಞಾನದಲ್ಲಿ ಮಿದುಳು ಅರಳಿ , ಭಕ್ತಿಯಿಂದ ಹೂವು ಮುಡಿಸಿ
ಮಿದುಳಿನಲ್ಲೇ ಎಲ್ಲ ಕೆಡಿಸಿ, ಸೃಷ್ಟಿ ಯಿಂದ ಪುಷ್ಟಿ ಗೊಂಡು,
ಕಂಡಿದೆಲ್ಲ ಕುಡಿದು ತಿಂದು, ಬಳೆದು ಬಾಚಿ ಖಾಲಿ ಮಾಡಿ,
ಇದ್ದದೆಲ್ಲ ಕದಡಿ, ಕದಡಿ, ತೀಡಿ ಮಾಡಿ ಎಲ್ಲ ರಾಡಿ.
ತಾಯ ಬಸಿರ ಹಸಿರು ಬಗೆದು, ಇದ್ದದೆಲ್ಲ ಹೊರಗೆ ತೆಗೆದು...
ಮೆರೆದ ಸಾಧನೆ, ಮರೆತ ನಮ್ಮ ವೇದನೆ
ಅಳಿವಪ್ಪಿದೆ ಪರಿಸರ, ಗಾಳಿಗೂ ಬೀಸದ ಚಾಮರ,
ಜರಡಿಯಾದ ಹಂದರ, ಭೂಮಿ ಸುಡುವ ಪಂಜರ,
ನದಿಗಳಾಗಿವೆ ಕಂದರ, ಕಾವೇರಿದ ಚಂದಿರ,
ಬತ್ತಿಹೋದ ಸಾಗರ, ಮರಳುಭೂಮಿ ಆಕರ,
ಪರಿಹಾರ! ಸ್ಪೋಟಗೊಂಡ ಮಹಾ ಸಮರ...
ಕಳಚಿಹೋದ ಜೀವ ಕೊಂಡಿ,
ಮಾಯವಾಗಿವೆ ಸರದಿಯಲ್ಲಿ, ದೂರಜಾರಿದ ಪರಧಿಯಲ್ಲಿ,
ಜೀವಮಂಡಲ ಪ್ರಕ್ಷುಬ್ದ,
ವಿವಿದತೆ ಕಳೆದುಹೋದ ಭಾಗಲಬ್ಧ,
ಕಾಡು ಬೆಳೆಸುವ ಕಲೆ, ನಾಡ ಕಟ್ಟುವ ಬೆಲೆ,
ಸರ್ವ ಭಕ್ಷಕ, ಹೇಳಲಾಗದು ಇವನ ಲೀಲೆ,
ಎಲ್ಲದಕೂ ಬಿಸಬಲ್ಲ ಇವನ ಮಾರಕ ಬಲೆ
ಮೂಗುದಾರ ಕಳಚಿದ ಕಾಡು ಕುದುರೆ...
ನಿರಂಕುಶ ರಾಜ ನೀರೋ,
ಯಾಕೆ ಕವಿದಿದೆ ಮಂಕು?
ಸ್ವರ್ಗ ನಿರ್ಮಿಸಲಿರುವ ತ್ರಿಶಂಕು,
ಸಿಕ್ಕೀತೆ ಪರಿಚಯ?
ಯಾರೀತ?
ಸಾಕ್ಷಾತ್ ದೇವ ಮೆಚ್ಚಿದ ಮಾನವ,
ಹೂಮೂಸೇಪಿಯನ್....
ಇವನಾಟಕೆ ಇದು ಯಾವ ಪೆವಿಲಿಯನ್?
ಏನಿದು?
ಪದ! ನಿಜ....
ಇರಲಿ, ಇರಬೇಕು ಸದಾ,
ಒಂದು ನಾಮಪದ.
ಹೌದು, ನಿಮ್ಮ ಗ್ರಹಿಕೆ ಸರಿ,
ಬರೀ ಹೆಸರ್ರೀ....
ವಿವೇಕಿ ಮಾನವ.
ಹೆಸರು ಸಾಂಕೇತಿಕ,
ಜಾತಿ ಪ್ರಭೇದ ಸೂಚಕ, ನಿಜ ತೀರಾ ವೈಜ್ಞಾನಿಕ
ಸಾಮಾನ್ಯರಿಗೆ ಚಿರ ಪರಿಚಿತನಾದರೂ ಅನಾಮಿಕ,
ಭವಿಷ್ಯ ಬರೆದು ,ಭಾವ ಚಿವುಟಿದ ಭಾವುಕ!
ಹೊತ್ತ ತನ್ನ ರೆಂಬೆಯನ್ನೇ, ತಾನೇ ಕಡಿವ ಸಾದಕ.
ಮಹಾಕವಿ ಕಾಳಿದಾಸ!
ಜ್ಞಾನದಲ್ಲಿ ಮಿದುಳು ಅರಳಿ , ಭಕ್ತಿಯಿಂದ ಹೂವು ಮುಡಿಸಿ
ಮಿದುಳಿನಲ್ಲೇ ಎಲ್ಲ ಕೆಡಿಸಿ, ಸೃಷ್ಟಿ ಯಿಂದ ಪುಷ್ಟಿ ಗೊಂಡು,
ಕಂಡಿದೆಲ್ಲ ಕುಡಿದು ತಿಂದು, ಬಳೆದು ಬಾಚಿ ಖಾಲಿ ಮಾಡಿ,
ಇದ್ದದೆಲ್ಲ ಕದಡಿ, ಕದಡಿ, ತೀಡಿ ಮಾಡಿ ಎಲ್ಲ ರಾಡಿ.
ತಾಯ ಬಸಿರ ಹಸಿರು ಬಗೆದು, ಇದ್ದದೆಲ್ಲ ಹೊರಗೆ ತೆಗೆದು...
ಮೆರೆದ ಸಾಧನೆ, ಮರೆತ ನಮ್ಮ ವೇದನೆ
ಅಳಿವಪ್ಪಿದೆ ಪರಿಸರ, ಗಾಳಿಗೂ ಬೀಸದ ಚಾಮರ,
ಜರಡಿಯಾದ ಹಂದರ, ಭೂಮಿ ಸುಡುವ ಪಂಜರ,
ನದಿಗಳಾಗಿವೆ ಕಂದರ, ಕಾವೇರಿದ ಚಂದಿರ,
ಬತ್ತಿಹೋದ ಸಾಗರ, ಮರಳುಭೂಮಿ ಆಕರ,
ಪರಿಹಾರ! ಸ್ಪೋಟಗೊಂಡ ಮಹಾ ಸಮರ...
ಕಳಚಿಹೋದ ಜೀವ ಕೊಂಡಿ,
ಮಾಯವಾಗಿವೆ ಸರದಿಯಲ್ಲಿ, ದೂರಜಾರಿದ ಪರಧಿಯಲ್ಲಿ,
ಜೀವಮಂಡಲ ಪ್ರಕ್ಷುಬ್ದ,
ವಿವಿದತೆ ಕಳೆದುಹೋದ ಭಾಗಲಬ್ಧ,
ಕಾಡು ಬೆಳೆಸುವ ಕಲೆ, ನಾಡ ಕಟ್ಟುವ ಬೆಲೆ,
ಸರ್ವ ಭಕ್ಷಕ, ಹೇಳಲಾಗದು ಇವನ ಲೀಲೆ,
ಎಲ್ಲದಕೂ ಬಿಸಬಲ್ಲ ಇವನ ಮಾರಕ ಬಲೆ
ಮೂಗುದಾರ ಕಳಚಿದ ಕಾಡು ಕುದುರೆ...
ನಿರಂಕುಶ ರಾಜ ನೀರೋ,
ಯಾಕೆ ಕವಿದಿದೆ ಮಂಕು?
ಸ್ವರ್ಗ ನಿರ್ಮಿಸಲಿರುವ ತ್ರಿಶಂಕು,
ಸಿಕ್ಕೀತೆ ಪರಿಚಯ?
ಯಾರೀತ?
ಸಾಕ್ಷಾತ್ ದೇವ ಮೆಚ್ಚಿದ ಮಾನವ,
ಹೂಮೂಸೇಪಿಯನ್....
ಇವನಾಟಕೆ ಇದು ಯಾವ ಪೆವಿಲಿಯನ್?
Comments