ಇಕಾಲಜಿ....ಕಾಳಜಿ....












ಇಕಾಲಜಿ ಕಾಳಜಿ 







ಪರಿಸರಪ್ರೇಮಿ
ಈ ಆಸಾಮಿ..
ಕೇಳಬೇಡಿ ಮಹಾಸ್ವಾಮಿ,
ಒಂಥರಾ ಇವನೇ ಭಯಂಕರ ಸುನಾಮಿ.
ಜೋಕೆ !
ಜೋಕು..ಮಾರ...
ಮಾತಿಗಿಲ್ಲ ಬರ,
ಭಾರ!
ಜ್ಞಾನ ವ್ಯವಹಾರ, ಅಭಿವ್ಯಕ್ತಿ ಅಪಾರ

ಬೇಕೆ ಬೇಕು ಇವನಿಗೆ
ಸನ್ಮಾನಗಳ ಸರಮಾಲೆ,
ಇವನಿಗಿದೆ ಜನಪ್ರಿಯತೆ ಸಂಪಾದನೆಯ ಖಾಯಿಲೆ
ಹೆಸರು ಮಾಡುವ ಒಂದು ವಿಧದ ಕಾಮಾಲೆ..
ಇದೆ ಇವನಿಗೊಂದು ಭದ್ರ ನೆಲೆ.
ಗೊತ್ತಿದೆ ಚೆನ್ನಾಗಿ ಹಣ ಮಾಡುವ ಕಲೆ,

ಪರಿಸರ ಸಂರಕ್ಷಣೆ....
ಟೈಮ್ ಸಿಕ್ಕರೆ ನೋಡೋಣ ಆಮೇಲೆ.

ಸೆಮಿನಾರು, ಚರ್ಚೆ, ಸಮ್ಮೇಳನ, ಅಂತರರಾಷ್ಟ್ರೀಯ ವೇದಿಕೆ,
ಇವರಿಗಿದೆ ಬಹಳ ಬೇಡಿಕೆ,
ಸಧ್ಯಕ್ಕೆ ಡಿಸ್ಟರ್ಬ್ ಮಾಡ್ಬೇಡಿ,
ಸಾಹೇಬರು ಬಹಳ ಬಿಸಿ.
ತಲೆ ತುಂಬ ಇಕಾಲಜಿ, ನೀವು ಮಾಡ್ಬೇಡಿ ಕಾಳಜಿ..
ವಿಷಯ ಎತ್ತುತ್ತಾರೆ ಸೂಕ್ತ ಪರಿಸರ ನೋಡಿ.
ಸಧ್ಯಕ್ಕೆ ನೀವು ನೋಡಿ ದೂರದರ್ಶನ,
ಅಲ್ಲಿ ಪಡೆಯಿರಿ ಅವರ ದರ್ಶನ,
ಕೊಟ್ಟೆ ಕೊಡುತ್ತಾರೆ ನಿಮಗೆ ಒಮ್ಮೆ ಸಂದರ್ಶನ....

Comments

Popular posts from this blog

Reunited...at last..

ಕಾಗೆ....

The Crow.