ಯಾತ್ರೆ...
ಯಾತ್ರೆ ಎಂದೋ ಆರಂಬಿಸಿದ ಯಾತ್ರೆ, ಮುಗಿಯದ ಅಕ್ಷಯ ಪಾತ್ರೆ ಹೊರಡುತ್ತಲೆ ಇದೆ ಅನಿಯಮಿತ, ಅನೀರಿಕ್ಷಿತ ಹೊಸ ತಳಿಗಳು, ಅಳಿಯುತ್ತಲೇ ಇದೆ ಅಯೋಗ್ಯ ಪೀಳಿಗೆ ಕಾಲನ ಜೋಳಿಗೆಯಲ್ಲಿ. ಚಿರಚಾಲಿತ ಬದಲಾಗುವ ಈ ಗೂಡಿನಲ್ಲಿ, ಮರೆಯಾಗುತ್ತಿವೆ ಹಾಡಿ, ಹಳ್ಳಿಗಳು ನಿಲ್ದಾಣಗಳ ಹಿಂದೆ ಒಂದರ ಹಿಂದೆ ಒಂದು, ರಾಷ್ಟ್ರೀಯ ಹೆದ್ದಾರಿಯ ಮಾಯವಾಗುವ ಮಲಿಗಲ್ಲು, ಅಂಕಿ ಸಂಖ್ಯೆಗಳು ಅಸ್ಪಷ್ಟ, ಒಮ್ಮೊಮ್ಮೆ ಅದೃಶ್ಯ, ವೇಗದ ಗತಿಯಲ್ಲಿ, ಗುರಿ ಗೊಂದಲಮಯ, ಗ್ರಹಿಸಲಾರದ ದೂರ, ತಲುಪಲಾರದ ಊರ. ಅಲ್ಲಲ್ಲಿ ಸಡಗರ, ಉತ್ಸವ, ತೇರು ಸ್ವಾಗತ ಸಂಭ್ರಮ ನಿರ್ಜನ ಮೆರವಣಿಗೆ, ಜನರು ತಿದ್ದದ ಪುರಾತನ ಬರವಣಿಗೆ ಶಿಲಾಶಾಸನ ಹಾಳುಬಿದ್ದ ಕೋಟೆಯೊಳಗೆ ಕಳೆದು ಹೋದ ಭಾವ ವಿಚಿತ್ರ ಸ್ವಭಾವ ಹಗಲು ರಾತ್ರಿ ಅರಿವಾಗದ ಅಸಂಗತ ಥಟ್ಟನೆ ಎದುರಾದ ಮಿಣಕು ಜ್ಯೋತಿ ಎರಗಿ ಬಂತು ಬೆಟ್ಟದಂತೆ, ಬೆಳಕ ಬಯಲು ಕತ್ತಲಾದ ಆ ಕ್ಷಣ, ಅನಿರೀಕ್ಷಿತ ನಿಂತ ಗಾಡಿ, ಎಲ್ಲೆಲ್ಲೂ ನಿರ್ವಾತ ಮೋಡಿ ತಲೆಯೆಲ್ಲ ಹಾರಿದೆ ಗುಂಗಾಡಿ, ದಾಟಿ ಹೋಗಿದೆ ಕಾಲದ ಗಡಿ.... ಎಲ್ಲೆಲ್ಲೂ ಈಗ ಗೊಂದಲದ ಗಡಿಬಿಡಿ,