ದ್ವಂದ್ವ....
ತುಮಲ
ಕೃಷ್ಣನಾಟಕೆ ದಾಳವಾದ ಸಾದಕ
ಸುಯೋಧನ ಅಸಹಾಯಕ...
ಚೀತ್ಕಾರ ರಣಭೂಮಿಯಲ್ಲಿ, ಕಿರಾತಕ,
ಬೆರಳೆಣಿಸಿ ಅನುಭವಿಸಿದ ನರಕ
ವ್ಯರ್ಥ ಬದುಕಿನ ಪಾಕ.
ಕ್ಷಣ ಕ್ಷಣಕೆ ವಿಸ್ತರಿಸಿದ ವಾಮನ,
ಕುಗ್ಗಿ ಕರಗಿತು ತನು ಮನ,
ತೀಟೆ ತೆವಲು, ಮೀಟೆ ಜನನ,
ಪೂರ್ಣ ತೃಪ್ತ ಸಾಧನ,
ಹಗಲುವೇಷ ಜೀವನ, ಸರಿ ಅರಣ್ಯ ರೋಧನ.
ನೀನು,
ಧ್ವನಿಯಾಗದ ಭಾಷೆ, ಅರ್ಥರಹಿತ ಅಭಿಲಾಷೆ,
ವ್ಯಕ್ತವಾಗದ ಬದುಕು, ಇಲ್ಲಿ ಉಳಿಯಲು ನಾಲಾಯಕು,
ಈಗ ಸಾಕು,
ಉಳಿದಿಲ್ಲ ಒಂದು ಪೈಸೆಯ ಕೀಮ್ಮತ್ತು,
ಉಸಿರಿಸಲು ಇಲ್ಲ ನಿನಗೆ ಹಿಮ್ಮತ್ತು,
ಬೇಕಿತ್ತು...
ಆದರೂ ತಾಕತ್ತು
ಮಾಡುತ್ತಲೇ ಇದ್ದಿಯಾ ಕರಾಮತ್ತು
ಅಂದಿನಿಂದ ಇಂದಿನವರೆಗೂ....
ಕಲೆಯುವುದಿಲ್ಲ ಮಹರಾಯ ನೀನು ಯಾವೊತ್ತು
ಬೇಸರದ ಹೊರೆ ಹೊತ್ತು,
ಕನಸು ಕಾಣುವ ಗಮ್ಮತ್ತು
ಬೇಕಿಲ್ಲ ಸಂಪತ್ತು,
ಬತ್ತಿದೆ ಭವ್ಯ ಬದುಕಿನ ಮತ್ತು
ಹೊರಡು ಬೇಗ, ಆಯಿತು,
ಮದಿರಾಲಯ ಮುಚ್ಚುವ ಹೊತ್ತು.......
Comments