ಪ್ರಾಯ.....
ಆಕಸ್ಮಿಕ...
ಕುಡಿವ ಮಜ್ಜಿಗೆಯಲಿ ನೆರೆತ ಗಡ್ಡದ ಮುದಿ ಕೂದಲು,
ಮತ್ತೇರಿ ಕುಣಿದಾಗ ನಲಿದಾಡಿತು,
ಸಜ್ಜಿಗೆಯ ಪರಾತದಲಿ ಕಳಚಿ ಬಿದ್ದ ಕಟ್ಟಿಸಿದ ಹಲ್ಲು,
ಬಿಟ್ಟ ಬಾಯಿ ಸುರಿಸುವ ಜೊಲ್ಲು,
ಕಂಡಾಗ....
ಕೋಶ, ಜೀವಕೋಶಗಳ ಚಿತ್ಕಾರ,
ಭಾರ,
ಅರ್ಥವಿಲ್ಲದ ವ್ಯವಹಾರ
ಜಿಗುಪ್ಸೆ ಅಪಾರ ಯಾವ ಮಮಕಾರ?
ಯಾರ ಸಹಕಾರ?
ಶ್ವಾಸವೇ ಬಲು ಭಾರ,
ಮುಕ್ತ ಗಾಳಿಗೂ ಬಂದಿದೆ ಸಂಚಕಾರ....
Comments
writing so many poems!
vidyarashmi