ನಿರೀಕ್ಷೆ,
ಕಾಯುತ್ತಿದ್ದೇನೆ
ಹೌದು,
ನಡುಹಗಲಿನ ನಿದ್ರೆ ಮಂಪರು
ಬರಹವಾಗುವ ಮುನ್ನ ಮರೆತು ಹೋಗುವ ಕನಸು,
ಬಿಚ್ಚಿಟ್ಟ ನೆನಪು ಕರಗಿ ಹೋಗಿದೆ ಬಳಲಿಕೆಯ ಬೆವರಿನಲಿ,
ಆವಿಯಾಗಿ,
ಅಸ್ಪಷ್ಟ ಕದಡಿದ ಮನಸು, ರಾಡಿ
ಆಗಿದೆ, ಸಂಪೂರ್ಣವಾಗಿ, ಪರ್ಯಾಪ್ತ ದ್ರಾವಣ,
ಪ್ರನಾಳದಷ್ಟೇ ಪಾರದರ್ಶಕ,
ಕಾರಣ,
ಆಕರ್ಷಕ ಭಾವ ಸ್ವಭಾವ, ಭಾಷೆ ಅಭಾವ
ಎಲ್ಲದರಲ್ಲೂ ಆಗಿದೆ ರಹಸ್ಯ ಒಪ್ಪಂದ,
ನಿಜ,
ಯಾವುದಕ್ಕೂ ತಾಳೆಯಾಗದ ಯಾವ ಸಂಭಂದ..
ಹೂವಲ್ಲಿ, ಇರದ ಮಕರಂದ,
ದುಂಬಿ ಮರೆತಿದೆ ತನ್ನ ಹಾರಾಟದಾನಂದ
ಬೇಕಿಲ್ಲ ಪರಾಗ
ತೇಲಿದೆ ಆವರಣದಲ್ಲಿ ಸರಾಗ,
ಸ್ನೇಹಿತನ ಮಗಳು ಸ್ರಜನ, ಬರೆಯುತ್ತಾಳೆ ಕವನ,
ಅಲ್ಲಿ...ಗೋಕರ್ಣದಲ್ಲಿ, ಮೀನ
ವಾಸನೆಗೆ ನಾಯಿಯ ಹಸಿವು,
ಹಸಿದ ಹೊಟ್ಟೆಗೆ ತಳಮಳ
ಮಿಡಿಯುತ್ತಾಳೆ ಅಂತಃಕರಣದಲ್ಲಿ ಮಗಳು ಸಹನಾ,
ಎದುರು ಆವಿಯಾಗುವ ಕಡಲ ಝಳ
ಉಹಿಸ ಬಹುದೇ?
ಹವಳ ಹಂಚುವ ಅದರ ತಳ,
ಕಾಯುತ್ತಿದ್ದೇನೆ ಬೀಸಿ ನನ್ನ ಗಾಳ,
Comments