ಆಭಾರಿ...


















ಅಭಾರಿ 








ಆಗಿರಬೇಕು ಅಭಾರಿ ಸದಾ
ಇಲ್ಲಿಯವರೆಗೂ ಬದುಕಿ ಉಳಿದಿರುವುದಕ್ಕೆ.
ಹೇಳಲೇಬೇಕು ಖಂಡಿತ ಯಾರಿಗಾದರೂ ಥ್ಯಾಂಕ್ಸ್.

ಏಕೋಪಾಧ್ಯಾಯ ಸರಕಾರೀ ಶಾಲೆಗಳಲ್ಲಿ
ಸಾಣೆ ಹಿಡಿದ ಮನಸು, ಬುದ್ಧಿ, ಹಳ್ಳಿ ಗಮಾರನಿಗೆ,
ದಡ್ಡತನ ಸರಳತೆ, ನಗೆಪಾಟಲಿನ ಮುಘ್ದತೆಗೆ,
ಅನ್ವೇಷಕ ಪ್ರಾಣಿ, ಅಂಡೆಲೆದು ಓಡಿ,
ಕಾಡು ಬಂಡೆಗಳ ಮೇಲೆ ಆಡಿ,
ಕುಂಟಿ, ಕುಪ್ಪಳಿಸಿ,ಎದ್ದು ಬಿದ್ದ ವಡ್ಡ ದೇಹಕ್ಕೆ,
ಅಳದೆ, ತೊಳೆಯದೇ, ಅರಿಶಿನಹಚ್ಚಿ,
ಗಾಯ ಮುಚ್ಚಿ ಮೆರೆದ, ಕನಸಾದ ಆ ದೇಹಕ್ಕೆ ಶರಣು,

ಅನ್ವೇಷಿಸಲು ಕಳಿಸಿದ ಮರಳು ಹಳ್ಳಿಗೆ,
ಆಹ್ವಾನವಿಲ್ಲದ ಅಥಿತಿ,
ನನ್ನನ್ನು ಸಹಿಸಿದ ಮಹಾ ನಗರದ ನಾಗರಿಕರಿಗೆ,
ಮನೆ ಭಾಷೆ ಕೀಳರಿಮೆ ಮೂಡಿಸಿ, ಲೋಕಭಾಷೆ ಕೇಳಿ,
ನಗೆಯಾಡಿ, ಬದುಕನ್ನೇ ಭಾಷೆಯಾಗಿಸಿದ ಸ್ನೇಹಿತರಿಗೆ,
ಅಮಾನವೀಯ ಪೈಪೋಟಿಯ ಬಿತ್ತಿದ ಬದುಕಿಗೆ
'ಬದುಕು ಅಂದರೆ ಹೊಂದಾಣಿಕೆ'
ಒಪ್ಪಂದದ ಬಾಯಿಪಾಠ ಮಾಡಿಸಿದ ಗುರುಗಳಿಗೆ ವಂದನೆ,

ಆತ್ಮವನ್ನೇ ಶಾಶ್ವತ ಮುಚ್ಚಿದ ಸನ್ನಿವೇಶಗಳಿಗೆ,
ಆಸೆಪಟ್ಟು, ನಿರಾಸೆಗೊಂಡ ಮನಸಿಗೆ,
ದುರಾಸೆ ಹೆಚ್ಚಿಸಿ, ಪಡೆದು,ಗೆದ್ದ ಕ್ಷಣಗಳಿಗೆ,
ಮೇಲೇರಿದ ಸ್ನೇಹಿತರ ಕಂಡು ಕರುಬಿದ ಸಣ್ಣತನಕ್ಕೆ,
ಚಾಡಿ ಹೇಳಿದ್ದಕ್ಕೆ, ವಂಚಿಸಿ ಹೀರೋ ಆಗಿದ್ದಕ್ಕೆ,
ನನ್ನವರ ಕೆಳನೂಕಲು ಪಟ್ಟ ಗುಪ್ತ ಪ್ರಯತ್ನಕ್ಕೆ,
ಅಮಲೇರಿದ ಕುಡುಕನ ನಶೆ ಇಳಿದಾಗ ಪಟ್ಟ ವ್ಯಥೆಗೆ,
ಪೊಗರಿಳಿದ ದೇಹದ ನಿರಾಕರಣೆಗೆ
ಸೋತ ಮನಸ್ಸಿಗೆ,
ಗಲಿ ಬಿಲಿಗೊಂಡ ವಿವೇಚನೆಗೆ, ಪ್ರಣಾಮ,

ಜೀವನ ಅರ್ಥರಹಿತ...
ಎನಿಸಿದ
ಅ ಭ್ರಮನಿರಸನದ ಮಹೂರ್ಥಕ್ಕೆ,
ಮನಸು ಅದೇ, ದೇಹ ಮಾತ್ರ ಬೇರೆ, ಹೊಸತು?
ಒಣಗಿದ ಮರ,
ಯಾವ ಶಸ್ತ್ರ ಚಿಕಿತ್ಸೆಯಿಲ್ಲದೆ ಆದ ಷಂಡನಿಗೆ ನಮನ,

ವಿರಕ್ತಿ,
ಮತ್ತೆ ಹುಡುಕಾಟ, ಬದುಕಿಗೆ ಕೊಡಲೇ ಬೇಕಿದೆ ಒಂದು ಅರ್ಥ,
ಯಾವುದೂ ಅಲ್ಲ ವ್ಯರ್ಥ, ಪಾಪಿಯಲ್ಲ ಸ್ವಾರ್ಥ,
ಆ ಅರಿವು...
ಆ ಘಳಿಗೆ!
ಗೆ....

ಯಾರಿಗೆ ಹೇಳಲಿ ನಾನು ಥ್ಯಾಂಕ್ಸ್?
ಎಲ್ಲರಂತೆ ಅ ಹಗರಣ ರಹಿತ ದೇವರಿಗೆ??
ನನ್ನ ಜ್ನಾನೆಂದ್ರಿಯಗಳಿಗೆ? ಹೊರಗಿನ ಪ್ರಚೋದನೆಗೆ?
ಒಳಗಿನ ಪ್ರವೃತ್ತಿಗೆ? ಸುಂದರ ಪರಿಸರಕ್ಕೆ?
ಒಗಟಾದ ಕಾಲಕ್ಕೆ? ಕಳೆದುಹೋದ ಇತಿಹಾಸಕ್ಕೆ?
ಇನ್ನೂ ಕಾಣದ ಅತಿನಾಜೂಕು ಭವಿಷ್ಯಕ್ಕೆ?,

ಹೌದು..
ಆದರೂ ಆಗಿರಲೇಬೇಕುಆಭಾರಿ,
ಹೇಳಲೇ ಬೇಕು... ಬಾರಿ, ಬಾರಿ,
ಧನ್ಯವಾದ, ಎಲ್ಲರಿಗೂ..
ಕಾಲು ಕಿತ್ತುವ ಮುನ್ನ...





Comments

Popular posts from this blog

Reunited...at last..

ಕಾಗೆ....

The Crow.