Posts

Showing posts from March, 2011

The muted and the Mutated..

The shift of the greed. The disturbing trend of the unethical migratory movement in the circles of   News  media and electronic media journalist professionals  has forced me into a brooding mood of  my beautiful experiences with my journalist friends with whom I lived for a considerable period  in early seventies. My intention is not to hurt (I know they dont get hurt easily as they are criticism resistant) any particular individual who are presently involved in the mass  media  as a whole.  It is an only effort to console my disturbed state of mind and to find out the reasons for my anguish that has been bothering me for a quite few time now.The  recent incidents of mass exodus and frequent migration from one media house to another. The writers, reporters, columnists and almost  all  writers of different dailies and channels which was more or less like a...
Image
ಕೆಂಪು ಬಾಣಲಿ ಕೆಂಪು ಬಾಣಲಿ ಇಲ್ಲಿ ಇರುವುದು ಎರಡೇ ಕಾಲ ಬೇಸಿಗೆ, ಕಡುಬೇಸಿಗೆ ಇರುವುದು ಎರಡೇ ಹಸಿರು. ಜಾಲಿ, ಕುರುಚಲು ಬಂಡೆ ಮತ್ತು ನೆಲ, ಎಲ್ಲೂ ಕಾಣಿಸದ ಜಲ  ಇಲ್ಲಿ ಎಲ್ಲವೂ ಝಾಳ ಝಾಳ  ಕಾರೆ ಕವಳೆಯೂ ಫಳ ಫಳ ಅಲ್ಲಿ ಅಲ್ಲೊಂದು, ಇಲ್ಲೊಂದು ಹಸಿರು ನಡೆಸಿದೆ ಹರ ಸಾಹಸ,  ಬಂಡೆ, ಬಿಸಿಲುಗಳ ನಡುವೆ ತೀವ್ರ ಪೈಪೋಟಿ,  ಫಲಿತಾಂಶ ನಿಘೂಡ, ಕಾಯ್ದಿರಿಸಿದ ತೀರ್ಪು, ಸಮ, ಸಮವಾಗಿ ನಡೆಯುತ್ತಲೇ ಇದೆ ಮೌನ ಯುದ್ಧ ಲೆಕ್ಕ  ಸಿಗದ  ಕಾಲದಿಂದ ಇತಿಹಾಸಕ್ಕೆ ಸಿಲುಕದ ಜ್ಹಳ   ಹಂಗಿಸಿದೆ ಬೆತ್ತಲೆ ಆಕಾಶ ಕಾದು,  ಹಾದು, ಹಾರಿ ಹೋಗುವ ಮೋಡಗಳನ್ನು, ನಿರ್ಮಿಸಿದೆ ಬಿಸಿಲು ಚಾವಡಿ, ಎಲ್ಲವೂ ಹಬೆಯಲ್ಲಿ ಬೆಂದ ಹಂದರ, ಹೊಳೆಯುತ್ತಾನೆ  ಶುಬ್ರ ಆಕಾಶದಲ್ಲಿ ಚಂದಿರ, ಬೆಂಕಿಗೆ ಬರವಿಲ್ಲ, ಬಂಡೆಗೆ  ಬಡಿದು ಬೀಸುವ ಗಾಳಿಗೆ ಕರವಿಲ್ಲ. ದಾರಿ ತಪ್ಪಿ ಬಂದ ಬಂಡೆ  ಹುಳು ಸೀತೆ ಬಿತ್ತಿದ ಸೀತಾಫಲ, ಶಿಲಾರಾಶಿ ಕಿಂಡಿಗಳಲ್ಲಿ ಹೊಲಕ್ಕೆ ಗಡಿಯಾಗುವ ಜಾಲಿ, ಮೇಕೆಗ ಮುಳ್ಳಾಗುವ ತುಗ್ಗಲಿ, ಸದಾ ಕೆಂಪಾದ ಬಾಣಲಿ...
ಮೊಬೈಲ್ ಸಂದೇಶ...     ಯೋಚಿಸುತ್ತಿರಬಹುದು, ತಪ್ಪದೇ ನಿತ್ಯ ಬರುತ್ತಿದ್ದ ಸಂದೇಶ  ಎಚ್ಚರಿಸದೆ, ಹಟಾತ್ ನಿಂತು ಹೋಯಿತು ಏಕೆ?  ಯೋಗ್ಯ ಸಂದೇಶ ಇಲ್ಲದಿರಬಹುದು ಸಂದೇಶ ಸಾಗಿಸುವ ಕ್ರಿಯೆ ಜಿಗುಪ್ಸೆ ಬಾಲಿಶ ಅನ್ನಿಸಿಕೆ ಸಹಜ ಆ ವಯಸ್ಸಿಗೆ ಪ್ರಾಯಕ್ಕೆ ಸೂಕ್ತ ಚಟುವಟಿಕೆಯೂ ಅಲ್ಲ. ಜಗತ್ತಿನ ಜಂಜಾಟ ಜಡತ್ವ ಮೊಳಕೆಯೊಡೆದಿರಬಹುದು... ಅದರೂ,   ಕಾತುರದ ನಿರೀಕ್ಷೆ ಕೊನೆಗೊಂಡಿಲ್ಲ ಇನ್ನು, ಬರಬಹುದು ಸಂದೇಶ ಏನಾದರೊಂದು  ಯಾರಿಂದಲೋ, ಎಲ್ಲಿಂದಲೋ , ಯಾವಾಗಲೋ ಬಂದೇ ಬರಬಹುದು ಸುದ್ದಿ ಒಂದು. ಸೋತಿರಬಹುದು ಸುದ್ದಿಗಾರ, ಸರಿಯಾದ ಸಮಯಕ್ಕೆ ಗೈರುಹಾಜರಾದ ವರದಿಗಾರ,  ಅಂತ್ಯವೇ ಆ ಅನ್ವೇಷಣೆ  ನಿರಂತರ? ಅಭ್ಯಾಸದ ಮುಕ್ತಾಯ ಎಲ್ಲರಿಗೂ ವಿದಾಯ ಹೇಳಲಿರಬಹುದು ಆತ.... ಸಂದೇಹ,ಸಂಶಯ ಅಂತೆ ಕಂತೆಗಳ ಭರ್ಜರಿ ಸಂದೇಶ ಮಿನುಗಲಿದೆ ನನ್ನ ಮೊಬೈಲ್ ನಲ್ಲಿ..   ಕೆಂಪು ಬಾಣಲಿ ಇಲ್ಲಿ ಇರುವುದು ಎರಡೇ ಕಾಲ ಬೇಸಿಗೆ, ಕಡುಬೇಸಿಗೆ ಇರುವುದು ಎರಡೇ ಹಸಿರು. ಜಾಲಿ, ಕುರುಚಲು ಬಂಡೆ ಮತ್ತು ನೆಲ, ಎಲ್ಲೂ ಕಾಣಿಸದ ಜಲ  ಇಲ್ಲಿ ಎಲ್ಲವೂ ಝಾಳ ಝಾಳ  ಕಾರೆ ಕವಳೆಯೂ ಫಳ ಫಳ ಅಲ್ಲಿ ಅಲ್ಲೊಂದು, ...
Image
11/3/2o11....ಸುನಾಮಿ. ಬಾಂಗ್ಲ ಮತ್ತು ಇಂಗ್ಲಂಡ್ ನಡುವೆ ನಡೆಯುತ್ತಿದ್ದ ಮಹಾ ಬೋರಿಂಗ್ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ ಸಮಯದಲ್ಲಿ,ನನ್ನ ಅಭ್ಯಾಸ ಬಲದಂತೆ ಹಾಗೆ ಸುದ್ದಿಗಾಗಿ  ಚಾನಲ್ ಬದಲಾಯಿಸಿದೆ. ಬಿ.ಬಿ.ಸಿ.ಸುದ್ದಿವಾಹಿನಿಯಲ್ಲಿ ಕಂಡಚಿತ್ರ, ಜೀವನ ಪೂರ್ತಿ ಮರೆಯಲಾಗದು.  ಇದುವರೆವಿಗೂ  ಕೇವಲ ಹಾಲಿವುಡ್  ಸಿನೆಮಗಳಲ್ಲಿ ಮಾತ್ರ ಮಾನವ ನಿರ್ಮಿತ ಕೃತಕ ವಿನಾಶದ  ದೃಶ್ಯಗಳನ್ನು ನೋಡುತ್ತಿದ್ದೆವು. ಎರಡು ವರ್ಷಗಳ  ಹಿಂದೆಬಿಡುಗಡೆಯಾದ 2012 ಚಿತ್ರದ  ದೃಶ್ಯಗಳು  ಭಯಾನಕ ವಾಗಿದ್ದವು.  ಆದರೆ ಈಗ ನಾನು ಕಾಣುತ್ತಿದ್ದುದು ಸಿನೆಮ  ಸೆಟ್ ಆಗಲಿ, computerized graphics ಅಥವಾ special effects ಅಥವಾ computer generated  ದೃಶ್ಯಗಳಲ್ಲ. ನಿಜವಾಗಿ ನಡೆದ ಮನುಷ್ಯನನ್ನು  ಗೇಲಿಮಾಡುವ, ಪ್ರಳಯದ  ನಿಜವಾದ  ಸಾಂಕೇತಿಕ ಒಂದು  ಝಾಲಕ್.  ಮ್ಯಾಚ್  ಪೂರ್ಣ  ರದ್ದು  ಗೊಳಿಸಿ ಎಲ್ಲಾ ಸುದ್ದಿ   ಚಾನಲ್ ಗಳನ್ನು ಬದಲಿಸುತ್ತ  ನೋಡುತ್ತಾ ಕುಳಿತೆ.  ಪ್ರಕೃತಿ ನ...
ಕಿವಿ ಮಾತು . ಇದ್ದುಬಿಡು ಹಾಯಾಗಿ, ಹಾವಿನಂತೆ ನಿನ್ನದೇ ಬಿಲದಲ್ಲಿ ಹಗುರವಾಗಿ, ಕಳಚಿ ಬಿಡು ಸಂಭಂದಪೊರೆ  ಎಲ್ಲರಿಂದ ನಿರ್ಲಿಪ್ತ, ತಣ್ಣಗಾಗಿದೆ ನಿನ್ನ ರಕ್ತ ಬೇಕಾಗಿದೆ ಒಂದು ಪೊಟರೆ ಗ್ರೀಷ್ಮ ನಿದ್ರೆಗೆ ಬಿಂದಾಸ್,ಒಂಟಿಯಾಗಿ.... ತೆಗೆದುಕೋ ಶಶಿರ ವಿಶ್ರಾಂತಿ ನಿಶ್ಚಿಂತ ನಾಗು....ಪೊರೆಕಳಚಿ ಯಾರ ಹಂಗಿಲ್ಲದೆ,  ಅಪರಿಚಿತನಾಗು ಸ್ನೇಹವಿಲ್ಲದೆ, ನಿನಗೆ ನೀನೆ... ಆಗಂತುಕ ನಾಗು ಎದುರು ಸಿಗುವ ಪರಿಚಯದ ಮುಖಕೆ ನಗೆ ಬೀರುವರಿಗೆ. ಕಳೆದುಹೋಗು, ನಿನ್ನ ಯಾರೆಂದು ಕೇಳಿದರೆ???  ವಿಚಾರಿಸಲೂ ಸಾಕು ಕೆಟ್ಟ ಕುತೂಹಲ ಈ ಬೃಹತ್ ಜನಜಾತ್ರೆಯಲ್ಲಿ. ಯೋಚಿಸಬೇಡ ನೀನಾರೆಂದು... ನಿನಗೆ ಯಾರು ಗೊತ್ತಿಲ್ಲ, ಮರೆವು ನಿನ್ನ ಸರ್ವಸ್ವ,   ಮಸ್ತಿಷ್ಕ ಮಾಸಿದೆ, ಹೊಳಪು ನೀಡಿ ನೋಡಿದರೂ ಕಾಣಲಾರೆ ಪ್ರತಿಬಿಂಬ ನಿನ್ನ ಬೆನ್ನ ಹಿಂದೆಯೇ  ನಿನ್ನ ಸ್ಮಾರಕ ಶಿಲಾ ಸ್ಥಂಭ ಜೀವವಿಲ್ಲದೆ  ಪ್ರತಿಧ್ವನಿಸುವ  ಕಲ್ಲು ನೀನು ಅಷ್ಟೇ... ಬೀರೊಂದು ಪ್ರತಿಕ್ರಿಯೆಯ ಮಂದಹಾಸ ನೋವಲ್ಲೆ ಪ್ರೀತಿಸಿ, ನೋವನ್ನೇ ಶಿಲುಬೆಗೇರಿಸಿದ  ಆ ಮಹಾಪುರುಷ ಕ್ರ್ಯಸ್ತನಂತೆ.