ಕೆಂಪು ಬಾಣಲಿ





















ಕೆಂಪು ಬಾಣಲಿ
ಇಲ್ಲಿ ಇರುವುದು ಎರಡೇ ಕಾಲ
ಬೇಸಿಗೆ, ಕಡುಬೇಸಿಗೆ
ಇರುವುದು ಎರಡೇ ಹಸಿರು.
ಜಾಲಿ, ಕುರುಚಲು
ಬಂಡೆ ಮತ್ತು ನೆಲ, ಎಲ್ಲೂ ಕಾಣಿಸದ ಜಲ 
ಇಲ್ಲಿ ಎಲ್ಲವೂ ಝಾಳ ಝಾಳ 
ಕಾರೆ ಕವಳೆಯೂ ಫಳ ಫಳ
ಅಲ್ಲಿ ಅಲ್ಲೊಂದು,
ಇಲ್ಲೊಂದು ಹಸಿರು ನಡೆಸಿದೆ ಹರ ಸಾಹಸ, 

ಬಂಡೆ, ಬಿಸಿಲುಗಳ ನಡುವೆ ತೀವ್ರ ಪೈಪೋಟಿ, 
ಫಲಿತಾಂಶ ನಿಘೂಡ, ಕಾಯ್ದಿರಿಸಿದ ತೀರ್ಪು,
ಸಮ, ಸಮವಾಗಿ
ನಡೆಯುತ್ತಲೇ ಇದೆ ಮೌನ ಯುದ್ಧ
ಲೆಕ್ಕ  ಸಿಗದ  ಕಾಲದಿಂದ
ಇತಿಹಾಸಕ್ಕೆ ಸಿಲುಕದ ಜ್ಹಳ  
ಹಂಗಿಸಿದೆ ಬೆತ್ತಲೆ ಆಕಾಶ ಕಾದು, 
ಹಾದು, ಹಾರಿ ಹೋಗುವ ಮೋಡಗಳನ್ನು,
ನಿರ್ಮಿಸಿದೆ ಬಿಸಿಲು ಚಾವಡಿ,
ಎಲ್ಲವೂ ಹಬೆಯಲ್ಲಿ ಬೆಂದ ಹಂದರ,
ಹೊಳೆಯುತ್ತಾನೆ  ಶುಬ್ರ ಆಕಾಶದಲ್ಲಿ ಚಂದಿರ,
ಬೆಂಕಿಗೆ ಬರವಿಲ್ಲ,
ಬಂಡೆಗೆ  ಬಡಿದು ಬೀಸುವ ಗಾಳಿಗೆ ಕರವಿಲ್ಲ.
ದಾರಿ ತಪ್ಪಿ ಬಂದ ಬಂಡೆ  ಹುಳು
ಸೀತೆ ಬಿತ್ತಿದ ಸೀತಾಫಲ,
ಶಿಲಾರಾಶಿ ಕಿಂಡಿಗಳಲ್ಲಿ
ಹೊಲಕ್ಕೆ ಗಡಿಯಾಗುವ
ಜಾಲಿ,
ಮೇಕೆಗ ಮುಳ್ಳಾಗುವ ತುಗ್ಗಲಿ,
ಸದಾ ಕೆಂಪಾದ ಬಾಣಲಿ                                                    


Comments

Popular posts from this blog

6-7 poems

The Crow.

ಕಾಗೆ....