ಮೊಬೈಲ್ ಸಂದೇಶ...
ಯೋಚಿಸುತ್ತಿರಬಹುದು,
ತಪ್ಪದೇ ನಿತ್ಯ ಬರುತ್ತಿದ್ದ ಸಂದೇಶ
ಎಚ್ಚರಿಸದೆ,
ಹಟಾತ್ ನಿಂತು ಹೋಯಿತು ಏಕೆ?
ಯೋಗ್ಯ ಸಂದೇಶ ಇಲ್ಲದಿರಬಹುದು
ಸಂದೇಶ ಸಾಗಿಸುವ ಕ್ರಿಯೆ ಜಿಗುಪ್ಸೆ
ಬಾಲಿಶ ಅನ್ನಿಸಿಕೆ ಸಹಜ ಆ ವಯಸ್ಸಿಗೆ
ಪ್ರಾಯಕ್ಕೆ ಸೂಕ್ತ ಚಟುವಟಿಕೆಯೂ ಅಲ್ಲ.
ಜಗತ್ತಿನ ಜಂಜಾಟ ಜಡತ್ವ ಮೊಳಕೆಯೊಡೆದಿರಬಹುದು...
ಅದರೂ,
ಕಾತುರದ ನಿರೀಕ್ಷೆ ಕೊನೆಗೊಂಡಿಲ್ಲ ಇನ್ನು,
ಬರಬಹುದು ಸಂದೇಶ ಏನಾದರೊಂದು
ಯಾರಿಂದಲೋ, ಎಲ್ಲಿಂದಲೋ , ಯಾವಾಗಲೋ
ಬಂದೇ ಬರಬಹುದು ಸುದ್ದಿ ಒಂದು.
ಸೋತಿರಬಹುದು ಸುದ್ದಿಗಾರ,
ಸರಿಯಾದ ಸಮಯಕ್ಕೆ ಗೈರುಹಾಜರಾದ ವರದಿಗಾರ,
ಅಂತ್ಯವೇ ಆ ಅನ್ವೇಷಣೆ ನಿರಂತರ?
ಅಭ್ಯಾಸದ ಮುಕ್ತಾಯ ಎಲ್ಲರಿಗೂ ವಿದಾಯ
ಹೇಳಲಿರಬಹುದು ಆತ....
ಸಂದೇಹ,ಸಂಶಯ
ಅಂತೆ ಕಂತೆಗಳ ಭರ್ಜರಿ ಸಂದೇಶ
ಮಿನುಗಲಿದೆ ನನ್ನ ಮೊಬೈಲ್ ನಲ್ಲಿ..
ಕೆಂಪು ಬಾಣಲಿ
ಸಂದೇಹ,ಸಂಶಯ
ಅಂತೆ ಕಂತೆಗಳ ಭರ್ಜರಿ ಸಂದೇಶ
ಮಿನುಗಲಿದೆ ನನ್ನ ಮೊಬೈಲ್ ನಲ್ಲಿ..
ಕೆಂಪು ಬಾಣಲಿ
ಇಲ್ಲಿ ಇರುವುದು ಎರಡೇ ಕಾಲ
ಬೇಸಿಗೆ, ಕಡುಬೇಸಿಗೆ
ಇರುವುದು ಎರಡೇ ಹಸಿರು.
ಜಾಲಿ, ಕುರುಚಲು
ಬಂಡೆ ಮತ್ತು ನೆಲ, ಎಲ್ಲೂ ಕಾಣಿಸದ ಜಲ
ಇಲ್ಲಿ ಎಲ್ಲವೂ ಝಾಳ ಝಾಳ
ಕಾರೆ ಕವಳೆಯೂ ಫಳ ಫಳ
ಅಲ್ಲಿ ಅಲ್ಲೊಂದು,
ಇಲ್ಲೊಂದು ಹಸಿರು ನಡೆಸಿದೆ ಹರ ಸಾಹಸ,
ಇಲ್ಲೊಂದು ಹಸಿರು ನಡೆಸಿದೆ ಹರ ಸಾಹಸ,
ಬಂಡೆ, ಬಿಸಿಲುಗಳ ನಡುವೆ ತೀವ್ರ ಪೈಪೋಟಿ,
ಫಲಿತಾಂಶ ನಿಘೂಡ, ಕಾಯ್ದಿರಿಸಿದ ತೀರ್ಪು,
ಸಮ, ಸಮವಾಗಿ
ನಡೆಯುತ್ತಲೇ ಇದೆ ಮೌನ ಯುದ್ಧ
ಲೆಕ್ಕ ಸಿಗದ ಕಾಲದಿಂದ
ಇತಿಹಾಸಕ್ಕೆ ಸಿಲುಕದ ಜ್ಹಳ
ಹಂಗಿಸಿದೆ ಬೆತ್ತಲೆ ಆಕಾಶ ಕಾದು,
ಹಾದು, ಹಾರಿ ಹೋಗುವ ಮೋಡಗಳನ್ನು,
ನಿರ್ಮಿಸಿದೆ ಬಿಸಿಲು ಚಾವಡಿ,
ಎಲ್ಲವೂ ಹಬೆಯಲ್ಲಿ ಬೆಂದ ಹಂದರ,
ಹೊಳೆಯುತ್ತಾನೆ ಶುಬ್ರ ಆಕಾಶದಲ್ಲಿ ಚಂದಿರ,
ಬೆಂಕಿಗೆ ಬರವಿಲ್ಲ,
ಬಂಡೆಗೆ ಬಡಿದು ಬೀಸುವ ಗಾಳಿಗೆ ಕರವಿಲ್ಲ.
ದಾರಿ ತಪ್ಪಿ ಬಂದ ಬಂಡೆ ಹುಳು
ಸೀತೆ ಬಿತ್ತಿದ ಸೀತಾಫಲ,
ಶಿಲಾರಾಶಿ ಕಿಂಡಿಗಳಲ್ಲಿ
ಹೊಲಕ್ಕೆ ಗಡಿಯಾಗುವ
ಜಾಲಿ,
ಮೇಕೆಗ ಮುಳ್ಳಾಗುವ ತುಗ್ಗಲಿ,
ದಾರಿ ತಪ್ಪಿ ಬಂದ ಬಂಡೆ ಹುಳು
ಸೀತೆ ಬಿತ್ತಿದ ಸೀತಾಫಲ,
ಶಿಲಾರಾಶಿ ಕಿಂಡಿಗಳಲ್ಲಿ
ಹೊಲಕ್ಕೆ ಗಡಿಯಾಗುವ
ಜಾಲಿ,
ಮೇಕೆಗ ಮುಳ್ಳಾಗುವ ತುಗ್ಗಲಿ,
ಸದಾ ಕೆಂಪಾದ ಬಾಣಲಿ
Comments