ಕವನ


ಅಸ್ಪಷ್ಟವಿರಬಹುದು, ನನ್ನ ಕವನ
ದಯಮಾಡಿ ಕನ್ನೋಡಿಸಿ ಮತ್ತೊಮ್ಮೆ
ಪೋಣಿಸಿದ ಪದಗಳು ಹಾರವಾಗದಿರಬಹುದು
ಕಾಗದದ ಮೇಲೆ ಜೋಡಿಸಿದ ರಾಶಿ ಪದಗಳೇ ಹೂ ಗುಚ್ಛ
ಹಾವೆಂದು ಹೆದರದಿರಿ
ಭಾವನೆಯೇ ನಿರ್ಮಾಲ್ಯ ಅನಿಸಿದಾಗ
ವಿಸರ್ಜನೆಯ ಭಾರ ನಿಮ್ಮದಾಗಿರಲಿ.
 
ಅಸಂಗತ ಸಂಗೀತ,
ಕಿವಿಗಡರುವ ಕಲಸುಮೇಲೋಗರ ಶಬ್ದದಲ್ಲೂ 
ಮಧುರ ಗೀತೆ ಪ್ರತಿಧ್ವನಿಸಬಹುದು 
ತಾಳೆಯಾಗಬಹುದು ನಿಮ್ಮ ಅಭಿರುಚಿಗೆ 
ನಿಮ್ಮ ಯಾವುದೋ ಒಂದು ಅನುಭಾವಕೆ 
ಮುಕ್ತ ಕಿವಿ ನಿಮ್ಮದಾಗಲಿ,
 
ಕಪ್ಪು ಹಾಳೆಯಲ್ಲೂ ಚೆಲ್ಲಬಹುದು
ಕಾಮನ ಬಿಲ್ಲಿನ ಬಣ್ಣಗಳ ಸಾಮರಸ್ಯದ ಸರಸ 
ಮೂಡಿ ಮರೆಯಾಗಬಹುದು ಕುಂಚದಲ್ಲೇ 
ಸೃಷ್ಟಿ ಕಲಾ ಪ್ರಪಂಚ 
ಆಗಬಹುದೇನೋ ಆತ್ಮಾನುಭೂತಿ 
ಪ್ರೀತಿಸುವ ಹೃದಯ ನಿಮ್ಮಲ್ಲೇ ಇರಲಿ,  

Comments

kiran.N said…
Tumba chennagide...

Popular posts from this blog

Reunited...at last..

ಕಾಗೆ....

The Crow.