ಅಮ್ಮ


ಎಲ್ಲ ದಿಕ್ಕಿಗೂ ಹಾಸಿದ ಮಡಿಲು,
ಸಡಿಲವಾಗದ ಬಾಚಿ ತಬ್ಬಿದ ತೋಳು
ಅಪ್ಪಿಕೊಂಡಿದೆ ಪೀಳಿಗೆಯ ಎಲ್ಲರನ್ನೂ
ತನ್ನ ಸುಕ್ಕು ಗಟ್ಟಿದ ಚರ್ಮದಲಿ ಪೋಣಿಸಿ
ಕೈ...


ತೇಪೆ ಹಾಕಿ ಹೊಲಿದಿದೆ ಜೋತುಬಿದ್ದ ಮಾಂಸಲ ತೋಳಿನಲ್ಲಿ....
ಕಾಯುತ್ತಿದೆ ಕಣ್ಣಿಗೆ ಹಚ್ಚಿ ಎಣ್ಣೆ ,
ಮುಚ್ಚಿ ಗರ್ಭದಲಿ ಭದ್ರ ಪಡಿಸಿ ಕರಗುವ ಬೆಣ್ಣೆ

ಅಮ್ಮ ನಾವೆಲ್ಲಾ ಕ್ಷೇಮ
ಆಲದ ಅಸಂಖ್ಯಾತ ಬಿಳಲು ಕಂಭಗಳು ಭದ್ರ,


ಹಸಿರು ಚಾವಣಿಹೊತ್ತ ಈ ವೂರುಗೋಲು

ಕಾಂಡವೋ? ಬೇರೊ?
ಅವಲಂಬಿತ,ಅವಲಂಬನದ ಈ ದ್ವಿಪಾತ್ರಗಳಲ್ಲಿ
ಗುರುತು ಹಿಡಿಯುವ ಹುಚ್ಚು
ನಿನಗ್ಯಾಕೆ?


ಆಲದ ಮರದಲ್ಲಿ ಲೆಕ್ಕವಿಲ್ಲದಷ್ಟು ಪುಟ್ಟ ಹತ್ತಿ ಹಣ್ಣು.
ಬಣ್ಣ ಮಾತ್ರ ಒಂದೇ,ಗಾತ್ರ ಸ್ವಲ್ಪ ಅದಲು ಬದಲು
ಒಳಗೆ ಹುಳುವೆಂದು ಭ್ರಮಿಸಿದ
ಅದೇ ಸಗಣಿ ಸೊಳ್ಳೆಗಳು ತಿಪ್ಪೆಯಲ್ಲಿ
ಅದೇ ಪ್ರಭೇದದ ಬೀಜಗಳಂತೆ!
ಗೊತ್ತೇ ಇರಲಿಲ್ಲ ನನಗೆ
ತಿಳಿದಾಗ ಸೋಜಿಗಕ್ಕಿಂತ ಹೆಚ್ಚು ಹೇಸಿಗೆ ಆಯ್ತು ಅನ್ನಿ,


ನಿಜ..
ಆದರೂ ಒಪ್ಪಲೇ ಬೇಕು ವಿಧಿಯಿಲ್ಲ
ನಾನೂ ಅದೇ ಬೀಜಗಳ ಮೊಳಕೆಯೆಂದು
ಅಳಕ್ಕಿಳಿದ ಆ ತಾಯಿ ಬೇರು
ಇಳಿದಿದೆ ಪ್ರಪಾತದಲ್ಲಿನ ವಂಶವೃಕ್ಷ
ಕವಲಾದ ನನ್ನವರು ಶಾಕೆಗಳಲ್ಲಿನ ಬಿಳಲು ಬೇರು
ಚದುರಿ,ಚೆಲ್ಲಾಪಿಲ್ಲಿ,
ಸೋರಿ ಹೊಗಿದ್ದಾರೆ ದಿಕ್ಕು,ದಿಕ್ಕು

ನೆಲಸಿದ್ದಾರೆ ಭದ್ರವಾಗಿ ಟಿಸಿಲೊಡೆದು ಅಲ್ಲಲ್ಲಿ

ಹುದುಗಿ ಹೋಗಿವೆ ಆಳದಲ್ಲಿ,
ಮೂಲ ರಚನಾತ್ಮಕ ಅಣುವಿನಲ್ಲಿ
ಅನುಮಾನ!!


ಹತ್ತಿಯೂ? ಅಂಜೂರವೋ ?

ಜ್ಞಾನದಲ್ಲಿ ಎರಡೂ ಒಂದೇ
ಅಷ್ಟೇ ಏಕೇ ಈ ನಿಜದಲ್ಲಿ ಸರ್ವವೂ ಸೊನ್ನೆ
ಅರ್ಥವಾಗಿದ್ದು ಮಾತ್ರ ಮೊನ್ನೆ, ಮೊನ್ನೆ.

Comments

Appu said…
Sir..really good..nice poetic words about AMMA!!!

Popular posts from this blog

Reunited...at last..

ಕಾಗೆ....

The Crow.