ದೇವಕಣ.....
ಕ್ರಿಯೆಗೆ ಸಮ ಪ್ರತಿಕ್ರಿಯೆ ಸಮವೆಂದ ನ್ಯೂಟನ್ ಮಹಾ ದಡ್ಡ, ದ್ರವ್ಯರಾಶಿ ವೇಗ, ಶಕ್ತಿಗೆ ಸಮವೇ ಅಲ್ಲ, ಅಲ್ಲವೇ?
ಐನ್ ಸ್ಟಿನ್ ಒಬ್ಬ ಸುಳ್ಳ, ನೋಡು ಆ ಡಾರ್ವಿನ್ ಮಹಾ ಬುದ್ದಿವಂತ. ವಿವರಿಸಿದ ವೈವಿದ್ಯ ಸಿದ್ದಾಂತ. ಬಳಸಿಕೊಂಡ ಸಾವಯವ ವಿಕಾಸಸಿದ್ದಾಂತ. ಪ್ರಕೃತಿ ಆಯ್ಕೆ ಬಿತ್ತಿ, ಹುಟ್ಟು ಹಾಕಿದ ಅಸಮಾನತೆಯ ಸಾಮಾಜಿಕ ರಾದ್ದಾಂತ. ಛಿದ್ರವಾಗದ ಅಣು ಇಂದೀಗ ಸೃಷ್ಟಿಸಿದೆ ದೇವಕಣ. ಮುಂದೇನು ಅವತಾರ? ಭೂಗೊಳವನ್ನೇ ಕುಗ್ಗಿಸಿದ ಹಿಗ್ಸ್ ಬೋಸಾನ್ ಶಿಷ್ಯರೇ ಕೊಡಲಿದ್ದಾರೆ ಉತ್ತರ...
ಎಲ್ಲಾ ಪ್ರಶ್ನೆಗಳಿಗೂ ಸಿಗಲೆಬೇಕಿಲ್ಲ ಪರಿಹಾರ,ಪ್ರಶ್ನಾತೀತ ಬದುಕು ಬರಿ ಹುಡುಕಾಟವಲ್ಲ.ನಮ್ಮನ್ನೇ ಹುಡುಕುವ ಜಂಜಾಟ, ಕಲಾವಿದನ ಕಲ್ಪನೆ, ವಿಜ್ಞಾನಿಯ ಆಲೋಚನೆ, ಎರಡರ ನಡುವಿನ ನಾವೊಂದು ನಮೂನೆ. ಹಾಡು ನಿಶ್ಯಬ್ಧ,, ಚಿತ್ರ,ವರ್ಣರಹಿತ ಖಾಲಿ ಹಾಳೆ ಮಾತ್ರ, ಪದರಹಿತ ಆದರೂ ಮುದ್ರಿತ ಸಾಹಿತ್ಯ
ವಿಜ್ಞಾನಿಯ ಸಂಶೋಧನೆ.....ಶೂನ್ಯವಾಗಲಿ ಎಲ್ಲರ ವೇದನೆ,ಅನ್ವೇಷಣೆ, ಅವಿಷ್ಕಾರ ಅನ್ವಯವಾಗುವ ನಿಯಮ ಇಳಿಯಲಿ ತರಲೆಕಣದ ಆಳಕ್ಕೆ, ಅನ್ವಯದ ಉಪಯೋಗ ಹರಡಲಿ ಎಲ್ಲ ಬ್ರಹ್ಮಾಂಡಗಳಿಗೆ. ತೊಲಗಲಿ ಪ್ರಯೋಗಾಲಯದಿಂದ ಬಂಡವಾಳದ ಸ್ವಾರ್ಥ. ಹೊರಬರಲಿ ಜ್ಞಾನ, ಹರಾಜಾಗದಿರಲಿ ಮಾನವನ ಮಾನ. ನಮಗೆ ಈಗಿರುವ ಮಹಾಸ್ವಾರ್ತಿ ವಿಶ್ಲೇಷಕ, ಕೊಲೆಗಡುಕ ಮಹಾ ಸಾದಕ , ಪರಿಸರ ಶತ್ರು ಕಿರಾತಕ, ಬಿರುದುಗಳೇ ಸಾಕು. ಭಸ್ಮಾಸುರ ನಂತೆ ವಿದೂಷಕನಾಗ ಬೇಡ ಸೃಷ್ಟಿಕರ್ತನ ಮುಂದೆ.......
Comments
-Swetha Jagadeesh