Different lines of nomadic Moods,



ಕೆಳಗೆ ಕಾಣುವ ಎಲ್ಲಾ ಪದ್ಯಗಳು ಬೇರೇ ಬೇರೆ.ಹಾಗೆ ಸುಮ್ಮನೆ ಗೀಚಿದ ಸಾಲುಗಳು.

ಪದ ವ್ಯಾಮೋಹದಿಂದ ಹುಟ್ಟಿದ ಕವನ....
ಭಾವರಹಿತ ಜೀವನ, ಅಕ್ಷರ ಭ್ರೂಣದಿಂದ ಬೆಳೆಯುವ ಸಾಲುಗಳು...
ಗರ್ಭಪಾತದಲಿ ಕೊನೆಗೊಳ್ಳುವ ಮಾಮೂಲು ಗದ್ಯ,
ಇಲ್ಲಿ ಕೆಲವರ ಬದುಕು ಅರ್ಥವಾಗದ ನವ್ಯ ಪದ್ಯ
.

ಪ್ರಿಯ ಫೇಸ್ ಬುಕ್...ಇದ್ದದ್ದೇ ನಿಂದಂತೂ ಸದಾ ಕ್ರಿಕ್
ದಿನ,ದಿನವೂ ಬರೆದು ನಾ ಗಳಿಸಬೇಕಿಲ್ಲ ಹ್ಯಾಟ್ರಿಕ್.....
ಬರೆವ ಹವ್ಯಾಸ ಕೊಡಬಹುದು ಯಾವಾಗಾದರೊಮ್ಮೆ ಕಿಕ್
ಹಾಗಂತ ತೋಚಿದ್ದು ಗೀಚಿದರೆ ಓದುಗರೆಲ್ಲರೂ ಸಿಕ್


ಕನಸಿನಲ್ಲಿ ಬಂದೆ ನೀನು, ನನಸಿಂದ ಓಡಿದೆ
ನೆನಪಿನಲ್ಲಿ ಬರುವ ನೀನು ಮರೆವಿನಲ್ಲೂ ಮೂಡಿದೆ
ನನ್ನ ನೋವ ರಾಗದಲ್ಲ ನಿನ್ನ ಮೌನ ಗಾಯನ
ಕಣ್ಣ ಒರೆಸಿ,ಎಲ್ಲ ಮರೆಸಿ, ನೀನೆಂದೋ ಪಲಾಯನ.



ದುಖ ಬರೆಯಲು ಭಾಷೆ ಬೇಕೆ?
ನೋವಮರೆಯಲು ನೆನಪು ಸಾಕೆ?
ನಲಿವು ನೋವಿನ ಬಾಳು ಸಮರಸ
ಕಾಡದಿರು ಬದುಕೆ.... ನಾನು ಖಂಡಿತಾ ಓಕೆ.


There is an inexplicable emptiness of relief in the air...
but an echo of profound silence follows me everywhere!!!!



Comments

Popular posts from this blog

Reunited...at last..

ಕಾಗೆ....

The Crow.