ಹಳ್ಳಿ... ಹೊನಲು ಬೆಳಕಿನ ಶುಭ್ರ ಛಾವಣಿಯಲಿ ತೆರೆದ ಗವಾಕ್ಷಿ ಚಂದ್ರ. ಬಣ್ಣರಹಿತ ನಿರ್ವಾತ ನಿಶ್ಚಲವಾದ ಲಾಂದ್ರ... ಹೊರ ಆಕೃತಿ ಮಾತ್ರ ಮಬ್ಬಾದರೂ ಬೆಟ್ಟ,ಕಣಿವೆ,ಮೈದಾನ, ಮೂಲೆಯಲಿ ರಾಶಿಬಿದ್ದ ಕಾಡು ಉಳಿಸಿಕೊಂಡಿದೆ ಸಾಂದ್ರ... ಮೌನಕ್ಕೆ ಶರಣಾದ ಬೀಡು ಮಣ್ಣುಹಾದಿಗಳ ಸ್ಥಬ್ದಚಿತ್ರ ಜರಡಿಯಾದ ಮಾಡು ಬಾಗಿಲಾದ ತಡಿಕೆ. ಬೂದಿ ಅಗ್ಗಿಷ್ಟಿಕೆ ಹಿಂದೆ ಖಾಲಿಇರುವ ಮಡಿಕೆ ನೀರು ಕುಡಿಯಲು ಕುಡಿಕೆ ಯಾರೋ ಬಿಡಿಸಿದ ಜಲವರ್ಣ ಕಲೆ ಬಲು ಸುಂದರ. ಪ್ರವೇಶ ಉಚಿತ, ನಿಮಗೆಲ್ಲಾ ಸ್ವಾಗತ ಇಲ್ಲಿಗೆ.....ಈ ಕಲಾಪ್ರದರ್ಶನಕೆ ಕಲಾವಿದನ ಗೈರುಹಾಜರಿಯಲ್ಲಿ..... ಬಹಳ ದಿನ ಆಯ್ತು..... ಫೇಸ್ ಬುಕ್ ನ ಫೇಸ್ ಮಾಡಿ ಆಶ್ಚರ್ಯ ಆಯ್ತು ನೋಡಿ.....ಬದುಕಿನ ವೇಗದ ಗಾಡಿ ನನ್ನ ಗೈರು ಹಾಜರಿ ಕೆಲ ದಿನಗಳು ಮಾತ್ರ ಮರೆತೇಹೋಗಿರುವ ಸಾಮಾಜಿಕ ಸೂತ್ರ..... ಇರುವಿಕೆxವೇಗ=ಅಸ್ತಿತ್ವ....ಈ ಬದುಕಿನ ಸಮೀಕರಣ ಭಯವಾಗುತ್ತದೆ ಕಳೆದುಹೋಗುವ, ಕಳೆದುಕೊಳ್ಳುವ ಈ ಸ್ಥಿತಿ ಅತಿ ವಿಚಿತ್ರ..... ಮುದನೀಡುವ,ಮುಂಜಾವಿನ ನಿನ್ನ ಕವನದ ಸಾಲು ತಲುಪಿಲ್ಲ ಇನ್ನೂ ನನಗೆ, ನನ್ನ ಪ್ರತಿದಿನದ ಬದುಕಿನ ಪಾಲು. ಹೊಸ ಬೆಳಗ ಸ್ವಾವಗತಿಸುವ ಆಲಾಪದಲ್ಲಿ ಸದಾ ತಣ್ಣಗಾಗುವ ಗದ್ಯ ನಿಜಕ್ಕೂ ಚಿರಪರಿಚಿತ ಸೋಲು ಬಳಸಲಾಗದ ಹಾಲು ಕಾಯುತ್ತಿದೆ ಉಕ್ಕಲು ಮತ್ತೊಮ್ಮೆ ಕತ್ತಲು ಬೆಳಕಿನ ಜಗಳದ ಚಿಲಿಪಿಲಿ ಸದ್ದಿನ ಮುಂಜಾವು.... ಜೆ.ಕ...
Posts
Showing posts from November, 2013
- Get link
- X
- Other Apps
ಮನೆ .. ಗುರುತ್ವ ಮೀರಿದ ಮೇಲೆ, ಏರದ ಕೆಳಗೆ,ಬೀಳದ, ಎಳು ಬೀಳುವ ವಲಸೆಗೆ ಸದಾ ಸಿದ್ದವಿರುವ ಹಗುರ ಹಂದರದ ಮನೆ ಬೇಕಿದೆ, ನನಗೆ, ಬಾಡಿಗೆಗೆ ಆದರೂ ಸರಿ ಅಕ್ಕ ಪಕ್ಕದ ಅಡೆತಡೆ ಗೋಡೆ ರಹಿತ ವಿಶಾಲ ವಿಸ್ತಾರ ಬಯಲು ಜಾಗ ಬೇಕು ನನಗೆ. ಸತತ ಸ್ಥಾನಪಲ್ಲಟಕೆ, ವಿಸ್ತಾರ ಕೇಂದ್ರದಲಿ ಭಿತ್ತಿಯ ಭ್ರಮೆ ಏಕೆ? ದೃಷ್ಟಿ ಹೋದಲ್ಲಿ ದಿಗಂತ ಕಂಡರೆ ಎಷ್ಟುಚೆನ್ನ? ಆಕಾಶನೋಡಲು ಪಾಳಿಯ ನೂಕುನುಗ್ಗಲು ಬೇಕೆ? ಹೋಗಿ,ಬರುವ ಜನರಿಗೆ ಗಡಿಯಾರದ ಗಡಿಬಿಡಿ ಏಕೆ? ಗಾಳಿ ತಡೆಯಲು ಕಾಂಕ್ರೀಟ್ ಪರದೆ ಬೇಡ ಕಣ್ಣುಕುಕ್ಕಲು ಹಸಿರು, ಉಸಿರ ಬೆರೆಸಲು ತಿಳಿಗಾಳಿ ತೀಡುತಲಿರಲಿ , ಬೆಳಕಿಗೆ ಗೂಟಹೊಡೆಯುವ ಹವ್ಯಾಸ ಬೆವರ ಇಂಗುವ ಹವಾ ನಿಯಂತ್ರಕ ಆಗಿ ಬಿಟ್ಟಿದೆ ಕೆಟ್ಟ ಅಭ್ಯಾಸ. ತಾಪ ನಿರೋಧಕ, ಶೋಧಕ ಆಲಸ್ಯ ಜನಕ ಸಿಗಲೇಬೇಕು ಬಂಗಾರದ ಪದಕ ಕಡಲತೀರಕ್ಕೆ ನೂಕಿ ಬೆಳಕಿಗೆ ಮೈ ಒಡ್ಡಲು ಬೆತ್ತಲೆ ಯಾಗಿಸದಿರಲಿ ಬಗೆದು ಭೂಮಿಯಲಿ ನಿನ್ನ ಬುನಾದಿ ತೆಗೆದು ಮಣ್ಣು ಗುಂಡಿ ಮುಚ್ಚಿ ಸಮಾದಿ, ಜೀವಮಂಡಲವನ್ನೇ ಗೋರಿಯಾಗಿಸುವ ಶಿಲ್ಪಿಗಳ ಮಿದುಳ ತೊಗಟೆಯ ನರಕೋಶಗಳ ಬಲೆ ನಿರ್ಮಿಸಬಹುದು ಗೊಂದಲದ ನವವಿನ್ಯಾಸ ಸಂಕುಚಿತ ಸುಸಜ್ಜಿತ "ಸಕಲ ಸೌಕರ್ಯ ಸಹಿತ", "ಸಕಲ ನಿಯಂತ್ರಕ" ಪರಿಕಲ್ಪನೆಯ ಕಟ್ಟಡ.. ಹೌದು, ಅದು ಗೂಡಾಗ ಬಹುದು ಹಕ್ಕಿಗೆ ಬಿಲವಾಗಬಹುದು ಮೂಶಿಕನಿಗೆ ...