ಮನೆ..
ಗುರುತ್ವ ಮೀರಿದ
ಮೇಲೆ, ಏರದ
ಕೆಳಗೆ,ಬೀಳದ,
ಎಳು ಬೀಳುವ ವಲಸೆಗೆ ಸದಾ ಸಿದ್ದವಿರುವ
ಹಗುರ ಹಂದರದ ಮನೆ ಬೇಕಿದೆ,
ನನಗೆ,
ಬಾಡಿಗೆಗೆ ಆದರೂ ಸರಿ
ಅಕ್ಕ ಪಕ್ಕದ ಅಡೆತಡೆ ಗೋಡೆ ರಹಿತ ವಿಶಾಲ ವಿಸ್ತಾರ
ಬಯಲು ಜಾಗ ಬೇಕು ನನಗೆ.
ಸತತ ಸ್ಥಾನಪಲ್ಲಟಕೆ,
ವಿಸ್ತಾರ ಕೇಂದ್ರದಲಿ ಭಿತ್ತಿಯ ಭ್ರಮೆ ಏಕೆ?
ದೃಷ್ಟಿ ಹೋದಲ್ಲಿ ದಿಗಂತ ಕಂಡರೆ ಎಷ್ಟುಚೆನ್ನ?
ಆಕಾಶನೋಡಲು ಪಾಳಿಯ ನೂಕುನುಗ್ಗಲು ಬೇಕೆ?
ಹೋಗಿ,ಬರುವ ಜನರಿಗೆ ಗಡಿಯಾರದ ಗಡಿಬಿಡಿ ಏಕೆ?
ಗಾಳಿ ತಡೆಯಲು ಕಾಂಕ್ರೀಟ್ ಪರದೆ ಬೇಡ
ಕಣ್ಣುಕುಕ್ಕಲು ಹಸಿರು, ಉಸಿರ ಬೆರೆಸಲು
ತಿಳಿಗಾಳಿ ತೀಡುತಲಿರಲಿ ,
ಬೆಳಕಿಗೆ ಗೂಟಹೊಡೆಯುವ ಹವ್ಯಾಸ
ಬೆವರ ಇಂಗುವ ಹವಾ ನಿಯಂತ್ರಕ
ಆಗಿ ಬಿಟ್ಟಿದೆ ಕೆಟ್ಟ ಅಭ್ಯಾಸ.
ತಾಪ ನಿರೋಧಕ, ಶೋಧಕ ಆಲಸ್ಯ ಜನಕ
ಸಿಗಲೇಬೇಕು ಬಂಗಾರದ ಪದಕ
ಕಡಲತೀರಕ್ಕೆ ನೂಕಿ
ಬೆಳಕಿಗೆ ಮೈ ಒಡ್ಡಲು ಬೆತ್ತಲೆ ಯಾಗಿಸದಿರಲಿ
ಬಗೆದು ಭೂಮಿಯಲಿ ನಿನ್ನ ಬುನಾದಿ
ತೆಗೆದು ಮಣ್ಣು
ಗುಂಡಿ ಮುಚ್ಚಿ ಸಮಾದಿ,
ಜೀವಮಂಡಲವನ್ನೇ ಗೋರಿಯಾಗಿಸುವ
ಶಿಲ್ಪಿಗಳ ಮಿದುಳ ತೊಗಟೆಯ ನರಕೋಶಗಳ ಬಲೆ
ನಿರ್ಮಿಸಬಹುದು
ಗೊಂದಲದ ನವವಿನ್ಯಾಸ
ಸಂಕುಚಿತ ಸುಸಜ್ಜಿತ "ಸಕಲ ಸೌಕರ್ಯ ಸಹಿತ",
"ಸಕಲ ನಿಯಂತ್ರಕ" ಪರಿಕಲ್ಪನೆಯ
ಕಟ್ಟಡ..
ಹೌದು, ಅದು
ಗೂಡಾಗ ಬಹುದು ಹಕ್ಕಿಗೆ
ಬಿಲವಾಗಬಹುದು ಮೂಶಿಕನಿಗೆ
ಹುತ್ತವೂ ಆದೀತು ಹಾವಿಗೆ
ಗುಹೆಯಾಗಲೂ ಸಾಕು ವಾಘ್ರನಿಗೆ
ಪೊಟರೆಯಲಿ ಕೀಟ ಆಡಲು ಸಾಕು
ರೆಂಬೆಯಲಿ ಮಂಗ ಮಲಗಲು ಬೇಕು
ಮರದಿಂದ ಮರಕ್ಕೆ ಹಾರಿ
ಆವಾಸ ಬದಲಿಸುವ ಅಂಟಿಸಿಕೊಂಡಿರುವ ಚಟ
ಒಳ್ಳೆಯದಲ್ಲ... ಗೊತ್ತು ನನಗೆ
ಈಪಾರಿ ಹಟ,ಹುಡುಗಾಟ,
ಪರದಾಟ..... ಮಾತ್ರ
ಎಂದೂ ಮರೆಯದ ಶಾಶ್ವತ ಹುಡುಕಾಟ.
ನಾನಿನ್ನು ಜೀವಂತ......
ಗುರುತ್ವ ಮೀರಿದ
ಮೇಲೆ, ಏರದ
ಕೆಳಗೆ,ಬೀಳದ,
ಎಳು ಬೀಳುವ ವಲಸೆಗೆ ಸದಾ ಸಿದ್ದವಿರುವ
ಹಗುರ ಹಂದರದ ಮನೆ ಬೇಕಿದೆ,
ನನಗೆ,
ಬಾಡಿಗೆಗೆ ಆದರೂ ಸರಿ
ಅಕ್ಕ ಪಕ್ಕದ ಅಡೆತಡೆ ಗೋಡೆ ರಹಿತ ವಿಶಾಲ ವಿಸ್ತಾರ
ಬಯಲು ಜಾಗ ಬೇಕು ನನಗೆ.
ಸತತ ಸ್ಥಾನಪಲ್ಲಟಕೆ,
ವಿಸ್ತಾರ ಕೇಂದ್ರದಲಿ ಭಿತ್ತಿಯ ಭ್ರಮೆ ಏಕೆ?
ದೃಷ್ಟಿ ಹೋದಲ್ಲಿ ದಿಗಂತ ಕಂಡರೆ ಎಷ್ಟುಚೆನ್ನ?
ಆಕಾಶನೋಡಲು ಪಾಳಿಯ ನೂಕುನುಗ್ಗಲು ಬೇಕೆ?
ಹೋಗಿ,ಬರುವ ಜನರಿಗೆ ಗಡಿಯಾರದ ಗಡಿಬಿಡಿ ಏಕೆ?
ಗಾಳಿ ತಡೆಯಲು ಕಾಂಕ್ರೀಟ್ ಪರದೆ ಬೇಡ
ಕಣ್ಣುಕುಕ್ಕಲು ಹಸಿರು, ಉಸಿರ ಬೆರೆಸಲು
ತಿಳಿಗಾಳಿ ತೀಡುತಲಿರಲಿ ,
ಬೆಳಕಿಗೆ ಗೂಟಹೊಡೆಯುವ ಹವ್ಯಾಸ
ಬೆವರ ಇಂಗುವ ಹವಾ ನಿಯಂತ್ರಕ
ಆಗಿ ಬಿಟ್ಟಿದೆ ಕೆಟ್ಟ ಅಭ್ಯಾಸ.
ತಾಪ ನಿರೋಧಕ, ಶೋಧಕ ಆಲಸ್ಯ ಜನಕ
ಸಿಗಲೇಬೇಕು ಬಂಗಾರದ ಪದಕ
ಕಡಲತೀರಕ್ಕೆ ನೂಕಿ
ಬೆಳಕಿಗೆ ಮೈ ಒಡ್ಡಲು ಬೆತ್ತಲೆ ಯಾಗಿಸದಿರಲಿ
ಬಗೆದು ಭೂಮಿಯಲಿ ನಿನ್ನ ಬುನಾದಿ
ತೆಗೆದು ಮಣ್ಣು
ಗುಂಡಿ ಮುಚ್ಚಿ ಸಮಾದಿ,
ಜೀವಮಂಡಲವನ್ನೇ ಗೋರಿಯಾಗಿಸುವ
ಶಿಲ್ಪಿಗಳ ಮಿದುಳ ತೊಗಟೆಯ ನರಕೋಶಗಳ ಬಲೆ
ನಿರ್ಮಿಸಬಹುದು
ಗೊಂದಲದ ನವವಿನ್ಯಾಸ
ಸಂಕುಚಿತ ಸುಸಜ್ಜಿತ "ಸಕಲ ಸೌಕರ್ಯ ಸಹಿತ",
"ಸಕಲ ನಿಯಂತ್ರಕ" ಪರಿಕಲ್ಪನೆಯ
ಕಟ್ಟಡ..
ಹೌದು, ಅದು
ಗೂಡಾಗ ಬಹುದು ಹಕ್ಕಿಗೆ
ಬಿಲವಾಗಬಹುದು ಮೂಶಿಕನಿಗೆ
ಹುತ್ತವೂ ಆದೀತು ಹಾವಿಗೆ
ಗುಹೆಯಾಗಲೂ ಸಾಕು ವಾಘ್ರನಿಗೆ
ಪೊಟರೆಯಲಿ ಕೀಟ ಆಡಲು ಸಾಕು
ರೆಂಬೆಯಲಿ ಮಂಗ ಮಲಗಲು ಬೇಕು
ಮರದಿಂದ ಮರಕ್ಕೆ ಹಾರಿ
ಆವಾಸ ಬದಲಿಸುವ ಅಂಟಿಸಿಕೊಂಡಿರುವ ಚಟ
ಒಳ್ಳೆಯದಲ್ಲ... ಗೊತ್ತು ನನಗೆ
ಈಪಾರಿ ಹಟ,ಹುಡುಗಾಟ,
ಪರದಾಟ..... ಮಾತ್ರ
ಎಂದೂ ಮರೆಯದ ಶಾಶ್ವತ ಹುಡುಕಾಟ.
ನಾನಿನ್ನು ಜೀವಂತ......
Comments