ಹಳ್ಳಿ...

ಹೊನಲು ಬೆಳಕಿನ ಶುಭ್ರ ಛಾವಣಿಯಲಿ
ತೆರೆದ ಗವಾಕ್ಷಿ ಚಂದ್ರ.
ಬಣ್ಣರಹಿತ ನಿರ್ವಾತ
ನಿಶ್ಚಲವಾದ ಲಾಂದ್ರ...
ಹೊರ ಆಕೃತಿ ಮಾತ್ರ ಮಬ್ಬಾದರೂ
ಬೆಟ್ಟ,ಕಣಿವೆ,ಮೈದಾನ,
ಮೂಲೆಯಲಿ ರಾಶಿಬಿದ್ದ ಕಾಡು
ಉಳಿಸಿಕೊಂಡಿದೆ ಸಾಂದ್ರ...
ಮೌನಕ್ಕೆ ಶರಣಾದ ಬೀಡು
ಮಣ್ಣುಹಾದಿಗಳ ಸ್ಥಬ್ದಚಿತ್ರ
ಜರಡಿಯಾದ ಮಾಡು
ಬಾಗಿಲಾದ ತಡಿಕೆ.
ಬೂದಿ ಅಗ್ಗಿಷ್ಟಿಕೆ
ಹಿಂದೆ ಖಾಲಿಇರುವ ಮಡಿಕೆ
ನೀರು ಕುಡಿಯಲು ಕುಡಿಕೆ
ಯಾರೋ ಬಿಡಿಸಿದ ಜಲವರ್ಣ ಕಲೆ
ಬಲು ಸುಂದರ.
ಪ್ರವೇಶ ಉಚಿತ, ನಿಮಗೆಲ್ಲಾ ಸ್ವಾಗತ
ಇಲ್ಲಿಗೆ.....ಈ ಕಲಾಪ್ರದರ್ಶನಕೆ
ಕಲಾವಿದನ ಗೈರುಹಾಜರಿಯಲ್ಲಿ.....




ಬಹಳ ದಿನ ಆಯ್ತು..... ಫೇಸ್ ಬುಕ್ ನ ಫೇಸ್ ಮಾಡಿ
ಆಶ್ಚರ್ಯ ಆಯ್ತು ನೋಡಿ.....ಬದುಕಿನ ವೇಗದ ಗಾಡಿ
ನನ್ನ ಗೈರು ಹಾಜರಿ ಕೆಲ ದಿನಗಳು ಮಾತ್ರ
ಮರೆತೇಹೋಗಿರುವ ಸಾಮಾಜಿಕ ಸೂತ್ರ.....
ಇರುವಿಕೆxವೇಗ=ಅಸ್ತಿತ್ವ....ಈ ಬದುಕಿನ ಸಮೀಕರಣ
ಭಯವಾಗುತ್ತದೆ ಕಳೆದುಹೋಗುವ,
ಕಳೆದುಕೊಳ್ಳುವ ಈ ಸ್ಥಿತಿ ಅತಿ ವಿಚಿತ್ರ.....




ಮುದನೀಡುವ,ಮುಂಜಾವಿನ ನಿನ್ನ ಕವನದ ಸಾಲು
ತಲುಪಿಲ್ಲ ಇನ್ನೂ ನನಗೆ,
ನನ್ನ ಪ್ರತಿದಿನದ ಬದುಕಿನ ಪಾಲು.

ಹೊಸ ಬೆಳಗ ಸ್ವಾವಗತಿಸುವ ಆಲಾಪದಲ್ಲಿ
ಸದಾ ತಣ್ಣಗಾಗುವ ಗದ್ಯ ನಿಜಕ್ಕೂ ಚಿರಪರಿಚಿತ ಸೋಲು
ಬಳಸಲಾಗದ ಹಾಲು ಕಾಯುತ್ತಿದೆ ಉಕ್ಕಲು ಮತ್ತೊಮ್ಮೆ



ಕತ್ತಲು ಬೆಳಕಿನ ಜಗಳದ ಚಿಲಿಪಿಲಿ ಸದ್ದಿನ ಮುಂಜಾವು....
ಜೆ.ಕೆ.

ಉಷೆ.....
ನಿನಗೇನು ಹೇಳಿಹೋದಳು ನಿಷೆ?
ಪ್ರತಿಕ್ರಿಯೆಯ ಊಹೆಯಲ್ಲಿ,
ಬಯಸಿದುತ್ತರ ಕೇಳುವ ಅತುರದಲ್ಲಿ
ಆಗಲೇ ಶುರುವಾಗಿದೆ ಈ ಜಗದ ಪರಿಷೆ....
ಎಸ್.ಜೆ.



ದೀಪಹಿಡಿದು ನಡೆವಾಗ ನೆರಳುಗಳು ಕಂಬಗಳ ಹಿಂದೆ ಅಡಗಿಕೊಳ್ಳುವ ಇರುಳು.
ಜೆ.ಕೆ.

ಕವನವಾಗುವ ಬೆಳಗಲ್ಲಿ ಬಣ್ಣಗಳು ಅಪಾರ,
ನಿತ್ಯನೂತನ.
ಕನಸುಗಳ ನಶೆಯಲ್ಲಿ ವ್ಯಾಪಾರ
ಚೌಕಾಶಿಮಾಡಿ ಪಡೆಯುವ ಉಪಶಮನ
ಅದಕ್ಕೂ ರಸೀದಿ ಕೇಳಿಪಡೆಯುವ ಜನ......
ಎಸ್.ಜೆ.

2361Like · 

Comments

Popular posts from this blog

Reunited...at last..

ಕಾಗೆ....

The Crow.