ಇತಿಹಾಸದಲ್ಲಿ  ಸಾಂಸ್ಕೃತಿಕ ಸಮಾಜದ ವಿಕಾಸವಾಗಿ ಸುಮಾರು 3000-4000  ವರ್ಷಗಳಾಗಿರಬಹುದು.  ಸುಮಾರು 10000   ವರ್ಷಗಳ  ಹಿಂದೆ  ಕೃಷಿ  ಕಂಡು ಹಿಡಿದಾಗಿನಿಂದ  ಇಲ್ಲಿಯವರೆವಿಗೂ  ಅಭಿವೃದ್ಧಿಯ  ಕ್ರಮೇಣ  ಬೆಳವಣಿಗೆಯನ್ನು  ನೋಡಬಹುದು.   ಆಹಾರಕ್ಕಾಗಿ  ಅಲೆದಾಡುವ ಅಲೆಮಾರಿ ಮಾನವ, ಇತರ ಪ್ರಾಣಿಗಳಂತೆ  ತಾನೂ  ಸಹಾ  ಆಹಾರ  ಸಿಕ್ಕಲ್ಲಿಗೆ  ವಲಸೆ   ಹೋಗುತ್ತಿದ್ದ  ಸ್ಥಿತಿಯಿಂದ  ಆಹಾರ  ಸಂಗ್ರಹಕಾರನಾಗಿ ಒಂದು ಸ್ಥಳದಲ್ಲಿ ನೆಲೆಯೂರಿ ಬೇಸಾಯ ಪದ್ದತಿಯನ್ನು    ಆರಂಭಿಸಿದ. ಈ  ಕೃಷಿಯ ಅವಿಷ್ಕಾರ ಮಾನವನ  ವಿಕಾಸದಲ್ಲಿ  ಮಹತ್ತರ ಮೈಲಿಗಲ್ಲು ಆಯಿತು. ಇಂದಿನ ಉಹಿಸಲಾಗದ  ಬೆಳವಣಿಗೆ   ಮಾನವನ, ದಿನ  ವ್ಯವಸಾಯ  ಪದ್ದತಿಯೇ  ಕಾರಣ.  ತಾನು  ಉಪಯೋಗಿಸುವ  ಧಾನ್ಯವನ್ನು  ತಾನು ಬದುಕಲು ಆರಿಸಿದ್ದ ಸ್ಥಳದಲ್ಲಿಚೆಲ್ಲಿ, ಅದರ ಸುಗ್ಗಿಗೆಕಾಯುತ್ತಿದ್ದ. ಅಲ್ಲಿಯವರೆಗೂ ತನ್ನ ಆವಾಸದ ಪರಿಸರದಲ್ಲಿ   ದೊರೆಯುವ  ಪದಾರ್ಥಗಳನ್ನೇ  ಬಳಸಿ ಬದುಕುತ್ತಿದ್ದ.ನಂತರ ಕೊಯ್ಲಿಗೆ ಬಂದ ಫಸಲನ್ನು ಕೊಯ್ಳುಮಾಡಿ ಧಾನ್ಯ ಸಂಗ್ರಹಣೆ ಮಾಡಲು ಆರಂಭ ಮಾಡಿದ ಸಮಯದಿಂದ ವಿಜ್ಞಾನದ ವೇಗ ತೀವ್ರವಾಯಿತು.ಪ್ರಾಣಿಗಳನ್ನು ಸಾಕಲು ಶುರುಮಾಡಿ,ಹತ್ತಿಯ ಉಪಯೋಗ ತಿಳಿದುಕೊಂಡು ತನ್ನ ಸುತ್ತ ಮುತ್ತಲಿನ ಸಸ್ಯ ಪ್ರಾಣಿಗಳನ್ನು ತನ್ನ ಉಪಯೋಗಿಸುವ ಕಲೆ ಕರಗತ ಮಾಡಿಕೊಳ್ಳುತ್ತ ಬಂದು, ಇಂದು  ಪರಿಸರದ ಎಲ್ಲಾ ಅಂಶಗಳನ್ನು ತನ್ನ ಸ್ವಾರ್ಥಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕಲೆ  ರೂಡ್ಹಿಸಿಕೊಂದಿದ್ದಾನೆ.  ಆರಂಭದಲ್ಲಿನ   ಕುತೂಹಲ    ಪ್ರಜ್ಞೆ   ಮಾನವನನ್ನು  ಒಳ್ಳೆಯ  ಪ್ರೆಕ್ಷಕನನ್ನಗಿ ಮಾಡಿತು. ಬದಲಾಗುವ    ಋತುಮಾನಗಳನ್ನು ಗಮನಿಸಿದ.  ಆ ಋತುವಿನಲ್ಲಿನ ಆಗುಹೋಗುಗಳಿಗೆ ತನ್ನ ಜೀವನವನ್ನು ಒಗ್ಗಿಸಿಕೊಳ್ಳಲು ಆರಂಭಿಸಿದ. ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಮಹತ್ತರ ಸಾಮರ್ಥ್ಯವನ್ನು ಬೆಳಸಿಕೊಂಡ. ಆ  ಋತುವಿನಲ್ಲಿ  ದೊರೆಯುವ  ಅಂಶಗಳನ್ನು ತನ್ನ ಬದುಕಿಗೆ ಅ ಯಿಸ ತೊಡಗಿದ. ಕುತೂಹಲ,ಪರಿಸರದ ಸನ್ನಿವೆಶಗಳಿಗೆ      ಮಾರ್ಪಾಡು ಮಾಡಿಕೊಳ್ಳುವ  ಹೊಂದಾಣಿಕೆಯ  ಶಕ್ತಿ  ಮಾನವನನ್ನು  ಇತರ  ಪ್ರಾಣಿಗಳಿಗಿಂತ  ಹೆಚ್ಚು  ಭಿನ್ನ   ಹಾಗು  ಸಮರ್ಥನನ್ನಾಗಿ  ಮಾಡಿದವು. ಗ್ರಹಿಕೆ, ಮನನಮಾಡಿಕೊಳ್ಳುವಿಕೆ,ಯೋಚನೆ, ಹೋಲಿಸುವ ಮತ್ತು ಅನುಭವಿಸಿದ ಘಟನೆಗಳನ್ನು ಹೊಂದಿಸುವ ಸಾಮರ್ಥ್ಯ, ಮತ್ತು ಅವುಗಳನ್ನು ತನ್ನ ಜೀವನಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನ, ಇತ್ಯಾದಿ ಎಲ್ಲವೂ ಮಾನವನನ್ನು ಪೂರ್ತಿಬೇರೆಯಾಗಿಸಿತು.
ಈ ವಿಶೇಷ ಗ್ರಹಿಕೆ,ಯೋಚನೆ, ಅಭಿವ್ಯಕ್ತಿ ಇವಲ್ಲವೂ ಮನುಷ್ಯನ ಮಿದುಳಿನ ಮಹಾ ಮಸ್ತಿಷ್ಕದ ರಚನೆಯಲ್ಲಿ ಉಂಟಾದ  ವಿಕಾಸ  ಮತ್ತು ಅದರ ಅನ್ವಯದಿಂದ ಬದಲಾದ ಕಾರ್ಯಾತ್ಮಕ ವಿಧಾನದಿಂದ ಸಾಧ್ಯವಾಗಿದೆ.ನಿಸರ್ಗಕ್ಕೆ  ಹತ್ತಿರವಾಗಿ, ನಿಸರ್ಗದ ಒಂದು ಅಂಶದಂತೆ ಎಲ್ಲ ಅಂಶಗಳೊಂದಿಗೆ ತಾನೂ ಬೆಳೆಯುತ್ತಾ ಬಂದ. ಗುಂಪಿನಲ್ಲಿ ವಾಸಿಸುತ್ತಿದ್ದ ಮಾನವನಲ್ಲಿ, ಕುಟುಂಬದ ಪರಿಜ್ಞಾನ ಹೆಗ ಬಂತು? ಹೇಳುವುದು ಸುಲಭವಲ್ಲದಿದ್ದರೂ ಅಸಾಧ್ಯವಲ್ಲ.  ಕಾರಣ.ನಮ್ಮ   ಭೌತಿಕ, ಜೈವಿಕ, ಹಾಗು ಸಾಂಸ್ಕೃತಿಕ ಬೆಳವಣಿಗೆಯನ್ನು ಈಗಿನ ನಮ್ಮ ದಾಯಾದಿ ಪ್ರಾಣಿಗಳಿಗೆ ಹೋಲಿಸಿದರೆ,ಒಟ್ಟಿಗೆ ಬದುಕುವ, ಗುಂಪಿನಲ್ಲಿರುವ   ಸಾಮಾಜಿಕ  ಜೀವನ ಶೈಲಿ ಕೋತಿ, ಚಿಂಪಾಂಜಿ ಗಳನಡುವಳಿಕೆಯನ್ನು ಅಭ್ಯಸಿಸಿದವರಿಗೆ ಗೊತ್ತಾಗುತ್ತದೆ. ಈ ಪೋಷಕ ನಡುವಳಿಕೆ ಮತ್ತು ಸಾಮಾಜಿಕ ಜೀವನ ಸಹಾ ಪ್ರಜನನ  ಕ್ರಿಯೆಯಂತೆ ಸಹಜ ಪ್ರವ್ರುತ್ತಿಯಾಗಿದೆ ಎಂಬುದನ್ನು ಗಮನಿಸಬಹುದು.ಗುಂಪಿನಲ್ಲಿ ಇರುವುದರಿಂದ ಶತ್ರುಗಳಿಂದ ರಕ್ಷಣೆ ಸಿಗುತ್ತದೆ.ಇನ್ನು ಹಿರಿಯ,ಅನುಭವಿ ಪ್ರಾಣಿಗಳು ತಮ್ಮ ಮಂದೆಯ ಎಳೆಯ ಪ್ರಾಣಿಗಳಿಗೆ ಆಹಾರ ಹುಡುಕುವುದು,ಅಥವಾ ಬೇಟೆಯಾಡುವುದು,ಶತ್ರುಗಳಿಂದ ತಪ್ಪಿಸಿಕೊಳ್ಳುವುದು, ಆಹಾರಕ್ಕಾಗಿ ವಲಸೆ ಹೋಗುವ ಮಾರ್ಗವನ್ನು ನಿರ್ದೇಶಿಸುವುದು, ಮರಿಗಳನ್ನು ಶುಚಿಯಾಗಿ ಇಡುವುದು ಇತ್ಯಾದಿಗಳೆಲ್ಲ ಹಿರಿಯ ಪೋಷಕ ಪ್ರಾಣಿಗಳಿಂದ ಕಲಿಯುತ್ತವೆ.ಲಿಂಗ ರೀತಿಯ ಪ್ರಜಣನ ಕ್ರಿಯೆಗೆ ಹೊಂದಿಕೊಂಡಿರುವ ಪ್ರಾಣಿಗಳು ವಿರುದ್ಧ ಲಿಂಗ  ಪ್ರಾಣಿಗಳನ್ನು ಹಿಂಬಾಲಿಸುವುದನ್ನು  ನಾವು ನಮ್ಮ ಈಗಿನ ಪರಿಸರದಲ್ಲೂ ನೋಡುತ್ತೇವೆ.ಉದಾಹರಣೆಗೆ ಲೈಂಗಿಕಾಸಕ್ತಿ ಹೊಂದಿರುವ ಗಂಡು ನಾಯಿ ಹೆಣ್ಣು ನಾಯಿಯ ಹಿಂದೆ ಮೂಸಿಕೊಂಡು ಹೋಗುವುದು ಅಥವಾ ಇದೆ ದೃಶ್ಯ ವನ್ನು ಹಸು,ಕತ್ತೆ ಇತ್ಯಾದಿ ನಾವು ಕಾಣುವ ಪ್ರಾಣಿಗಳಲ್ಲಿ ನೋಡಬಹುದು.ಕಪ್ಪೆಯ ವಟಗುಟ್ಟುವಿಕೆ, ನವಿಲಿನ   ನೃತ್ಯ ವಾಗಲಿ, ಕಸ್ತೂರಿ ಮೃಗ ತನ್ನ ಹಿಂಗಾಲಿನ ಗೊರಸಿನಲ್ಲಿರುವ ಗ್ರಂಥಿಯನ್ನು ಮರದ ಕಾಂಡಕ್ಕೆ ಉಜ್ಜಿ ಉತ್ಪತ್ತಿಯಾಗುವ ಸುವಾಸನೆಯ ಕಸ್ತೂರಿಯಿಂದ ಹೆಣ್ಣಿಗೆ ತನ್ನ ಲೈಂಗಿಕಾಸಕ್ತಿಯ ಸಂದೇಶವನ್ನು ಸಾಗಿಸುತ್ತದೆ  ಎಂದರೆ  ನಮಗೆ  ಆಶ್ಚರ್ಯ  ವಾಗಬಹುದು. ಆದರೆ ಇವೆಲ್ಲವೂ ಕೇವಲ  ತನ್ನ ಪೀಳಿಗೆಯನ್ನು  ಮುಂದುವರೆಸಲು  ಎಲ್ಲಾ ಜೀವಿಗಳು  ನಡೆಸುವ  ಪ್ರಯತ್ನ  ಸಂತಾನೋತ್ಪತ್ತಿ ಪ್ರಕ್ರಿಯೆಯೇ ಆಗಿದೆ.ತನ್ನ  ಇರುವನ್ನು  ತಿಳಿಸಲು  ಕೇವಲ ತನ್ನ  ಸಂಗಾತಿಯನ್ನು  ಆಕರ್ಶಿಸಿ,  ತನ್ನಡೆಗೆ  ಪಟಾಯಿಸುವ ವಿಧಾನ.ಮಾಂಸಹಾರಿ ಪ್ರಾಣಿಗಳು ವಿಶೇಷ ವಾಗಿ ಕಾಡಿನಲ್ಲಿ ತಮ್ಮ ಪ್ರದೇಶವನ್ನು ಮೂತ್ರದಿಂದಲೇ  ಮರಗಿಡಗಳ  ಮೇಲೆ ಹೊಯ್ದು,  ತಮ್ಮ  ಸಾಮ್ರಾಜ್ಯದ  ಗಡಿಯನ್ನು  ನಿರ್ಮಿಸಿಕೊಳ್ಳುತ್ತವೆ. ಈ ಸಾಮ್ರಾಜ್ಯದ ಕೋಟೆ ನಮಗೆ ಕಾಣಿಸುವುದಿಲ್ಲ. ಆದರೆ ಆ ಪರಿಸರದ ಜೀವಿಗಳಿಗೆಲ್ಲಾ ತಿಳಿದಿರುತ್ತದೆ.ಗುರುತು ಮಾಡಿದ ಆ ತನ್ನ ಪ್ರದೇಶದಲ್ಲಿ, ತನ್ನ ಪರ್ಭೆದದ ಕೇವಲ ಹೆಣ್ಣು ಪ್ರಾಣಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಇತರ ಗಂಡು ಪ್ರಾಣಿಗಳಿಗೆ ಅಲ್ಲಿ ಪ್ರವೇಶ ಇರುವುದಿಲ್ಲ.   ಹಾಗೇನಾದರೂ   ಗಡಿಯ ಉಲ್ಲಂಘನೆಯಾದರೆ ಭಯಂಕರ ಕಾಳಗ ನಡೆಯತ್ತದೆ.ಈ ಕಾದಾಟದಲ್ಲಿ ಸಾಮಾನ್ಯವಾಗಿ, ಗಡಿ ಮೊದಲೇ ಗುರುತಿಸಿಕೊಂಡ  ಯಜಮಾನಗೆಲ್ಲುತ್ತಾನೆ. ಪರಿಸರದ  ಯಾವುದೇ ವಿದದ ಇರುವಿಕೆಯ   ಹೋರಾಟದಲ್ಲಿ  ಅಂದರೆ, ಪ್ರಜನನ  ಕ್ರಿಯೆ, ಆಹಾರ ಪಡೆಯುವ ವಿಧಾನ   ಪೋಷಣೆ, ಅಥವಾ ತಮ್ಮ ಪ್ರಾದೇಶಿಕತೆಯನ್ನು  ಸ್ಥಾಪಿಸುವ ಲಕ್ಷಣ,  ಪ್ರಭುತ್ವ ವನ್ನು ಸಾರುವ ತಾನಶಾಹಿ ಪ್ರವೃತ್ತಿ  ಅಲ್ಲಿಂದಲೇ ಆರಂಭವಾಗುತ್ತದೆ. 

ಇಂದಿನ  ನಮ್ಮ ಸಾಮಾಜಿಕ  ವ್ಯವಸ್ತೆಯಲ್ಲಿ ಕಂಡುಬರುವ  ಮೇಲು ಕೀಳು. ಶ್ರೀಮಂತ ವರ್ಗ, ಮಧ್ಯಮ  ವರ್ಗ, ಬಡ ವರ್ಗ   ಹಾಗೂ ಕಾರ್ಮಿಕ  ವರ್ಗ,ಜಾತಿ, ಇತ್ಯಾದಿ ಸಾಮಾಜಿಕಸ್ತರಗಳಿಗೆ ಈ ಮೂಲ ಲೈಂಗಿಕಾಸಕ್ತಿ ಪ್ರವೃತ್ತಿಯೇ  ಕಾರಣವಾಗಿರುತ್ತದೆ. ಇಂದಿನ ಸಮಾಜದ  ಎಲ್ಲಾ ರಚನಾತ್ಮಕ ಘಟನೆಗಳಿಗೆ ಕಾರಣ,  ಈ  ಜೀವಿಗಳ   ಉಳಿವಿಕೆಗಾಗಿ ನಡೆಯುವ  ಹೋರಾಟದ   ವಿಕಾಸದಿಂದಲೇ   ಭಾಷೆಯ  ಮೂಲಕ   ವಿವಿದ  ಆಯಾಮವನ್ನು  ಪಡೆದಿವೆ. ಸಂಗೀತ,  ಸಾಹಿತ್ಯ,   ಕಲೆ, ನಾಟಕ,  ಇತ್ಯಾದಿಗಳ ವಿವಿದಅಭಿವ್ಯಕ್ತಿಯಾಗಿವೆ.ಹೋರಾಟದಲ್ಲಿ ಬಲಿಷ್ಠರುಮೇಲುಗೈ ಸಾಧಿಸುತ್ತಾರೆ. ಅಸಮರ್ಥರು ಕ್ರಮೇಣ ನಶಿಸಿಹೊಗುತ್ತಾರೆ ಎಂಬುದು ಡಾರ್ವಿನ್ ನ ವಾದ. ಆತನ ಈ ವಿಕಾಸದ ನಿಯಮ ಕೇವಲ ದೈಹಿಕ ಬದಲಾವಣೆಗೆ ಮಾತ್ರ ಅನ್ವಯಿಸಿತ್ತು ಅಂತ ಕಾಣುತ್ತೆ.ಕಾರಣ ಡಾರ್ವಿನ್ ಗಾಗಲಿ,ಮಾರ್ಕ್ಷ ಗಾಗಲಿ ಈ ಮಟ್ಟದಲ್ಲಿ ಬದಲಾವಣೆಗಳನ್ನು ಉಹಿಸಿರಲಿಲ್ಲವೆಂದು ಕಾಣುತ್ತದೆ. ಆದರೆ ಕೋತಿಯಿಂದ( ಪೀತಿಕಸ್) ಮನುಷ್ಯ (ಹೋಮೋ) ನಾಗಿ ವಿಕಾಸಹೊಂದಿದ ಈ ಪ್ರಾಮುಖಿಗೆ (ಪ್ರೈಮೇಟ)ಯಲ್ಲಿ ಪ್ರಕೃತಿಯಲ್ಲಿ ಸ್ವಾಭಿವಿಕವಾಗಿಯೇ ಉಂಟಾದ ಮಹತ್ತರ ವಿಕಾಸೀಯ ಬದಲಾವಣೆಗಳು ವರ ವಾಯಿತು.ಮಿಲಿಯಾಂತರ ವರ್ಷಗಳಹಿಂದೆ ತಾನೇ ತಾನಾಗಿ ಉಂಟಾದ ಬದಲಾವಣೆಗಳು- Mutation ( ಉತ್ಪರಿವರ್ತನೆ)
ಪರಿಸರಕ್ಕೆ ತಕ್ಕಂತೆ  ಅನುಕೂಲಕರವಾದುದರಿಂದ ಇತರ ಪ್ರಭೇದಗಳಿಗಿಂತ ಪ್ರಾಬಲ್ಯಹೊಂದಿದವು. ಸಾವಯವ ವಿಕಾಸದಲ್ಲಿ ಇಂತಹ ಜೀವಿ ಇಂತಹ ಪ್ರಬೇಧದಿಂದಲೇ ವಿಕಾಸ ಹೊಂದಿತು ಎಂದು ನಿಖರ ವಾಗಿ ಹೇಳಬಹುದಾದರೂ,  ಸ್ಪಷ್ಟ ಸಾಕ್ಷಿ ಗಳಿಂದ ಸಾದಿಸಾಲು ಸಾಧ್ಯವಿಲ್ಲ.ಇದನ್ನು ಕೇವಲ ನಮಗೆ ದೊರೆತಿರುವ ಕೆಲವು ಪಳೆಯುಳಿಕೆಗಳ ಆಧಾರದ ಮೇಲೆ, ವೈಜ್ಞಾನಿಕ ಕಲ್ಪನೆಯಿಂದ ಅರಿಯಲು ಸಾಧ್ಯವಾಗುತ್ತದೆ. ನಾವು ಸಾಮಾನ್ಯವಾಗಿ ವಿಕಾಸವನ್ನು ಸರಳ ಗೊಳಿಸಿ ಮೀನು, ಉಭಯವಾಸಿ, ಸರೀಸೃಪ, ಪಕ್ಷಿಗಳು, ಸ್ತನಿಗಳು ಎಂದು ಸ್ತೂಲವಾಗಿ ಹೇಳಿಬಿಡುತ್ತೇವೆ. ಆದರೆ ಅಸಂಖ್ಯಾತ ಪ್ರಶ್ನೆಗಳು ಉದ್ಹ್ಭಾವಿಸಿ ನಮ್ಮನ್ನು ತುಂಬಾ ಗೊಂದಲಕ್ಕೀಡು ಮಾಡುತ್ತವೆ.ಕಾರಣ ಕಾಲದ ಇತಿ ಮಿತಿಯನ್ನು ಗ್ರಹಿಸುವುದು ಬಹಳ ಕಷ್ಟ. ಏಕೆಂದರೆ, ನಮಗೆ ಕೆಲವೇ ದಶಕಗಳ ಹಿಂದೆ ಬದುಕಿ ಬಾಳಿದ  ನಮ್ಮ ಮುತ್ತಾತನ ಹೆಸರೇ ಗೊತ್ತಿಲ್ಲದಿರುವಾಗ ಇನ್ನು  ಮಿಲಿಯಾಂತರ ಅಥವಾ ಬಿಲಿಯಾಂತರ ವರ್ಷಗಳ ಭೂ ಪುರಾಣವನ್ನು, ಆಗ ಬಾಳಿ ಬದುಕಿದ  ನಮ್ಮ  ಕಲ್ಪನೆಗೂ  ಬಾರದ, ಆದರೆ ಖಂಡಿತ ಜೀವಿಸಿದ  ಜೀವಿಗಳ ಬಗ್ಗೆ ತಿಳಿದುಕೊಳ್ಳುವುದು ಅನವಶ್ಯಕ ಹಾಗೂ ಉದ್ಧಟತನವೆನಿಸುತ್ತದೆ ಎಂದು ಕಾಣುತ್ತದೆ.ನಾವು ಬದುಕುವುದೋ ಅಥವಾ ನಮ್ಮ ಆಯುಶ್ಯವೋ ಕೇವಲ ನೂರು ವರ್ಷ. ವಿಕಾಸದ ಈ ಅನಂತ ಕಾಲದಲ್ಲಿ  ನೂರು ವರ್ಷ  ಲೆಕ್ಕಕ್ಕೆ ಸಹಾ ಬರುವುದಿಲ್ಲ.ಇಂತಹ ನಮ್ಮ ತಾತ್ಕಾಲಿಕ ಇರುವಿಕೆಯ ಬದುಕಿನಲ್ಲಿ ಹಾಗೂ ಸೀಮಿತ ಗ್ರಹಿಕೆಯಲ್ಲಿ ಈ ಅನಂತ ಕಾಲಕ್ಕೆ ತಕ್ಕಂತೆ ನಮ್ಮ ಕಲ್ಪನೆಯನ್ನು  ಹಿಗ್ಗಿಸಿ  ಜೈವಿಕ  ಇತಿಹಾಸವನ್ನು  ಸ್ಪಷ್ಟವಾಗಿ  ತಿಳಿದುಕೊಳ್ಳುವುದು   ಅಸಾಧ್ಯವೆಂದು ಕಾಣುತ್ತದೆ. ಆದರೆ, ಸೂಕ್ತ ವೈಜ್ಞಾನಿಕ ಮನೋಭಾವನೆಯಿಂದ, ಪೂರ್ವಗ್ರಹಪೀಡಿತ ಮನಸ್ಸನ್ನು ಮುಕ್ತ ಮಾಡುವುದರಿಂದ,ವಿಜ್ಞಾನದ ಅನೇಕ ತತ್ವಗಳನ್ನು,ಅವುಗಳ ಸರಿಯಾದ ಹಿನ್ನೆಲೆಯಲ್ಲಿ ಪರಿಸರದ ವೀಕ್ಷಣೆ, ಪರಿಗ್ರಹಣೆ ಮತ್ತು ಸಮಯೋಚಿತ ಧಾರಣ ಶಕ್ತಿಯ ಮೂಲಕ ನಮ್ಮ ಕಣ್ಣಿಗೆ ಕಾಣುವ ವಿವಿದ  ಅಂಶಗಳ ಹೋಲಿಕೆ, ಸಮನ್ವಯ ಗಳ ಮೂಲಕ ಸ್ವಲ್ಪ ಮಟ್ಟಿಗೆ ಪ್ರಯತ್ನ ನಡೆಸಬಹುದು.ಬಹು ಮುಖ್ಯವಾಗಿ ಬೇಕಾಗಿರುವ ಸಲಕರಣೆ ಗಳೆಂದರೆ ನಿಷ್ಪಕ್ಷಪಾತವಾಗಿ ಪ್ರಶ್ನಿಸುವ ಪ್ರವೃತ್ತಿ, ಮೂಢ ನಂಬಕೆರಹಿತ ನಿಲುವು,  ಹಾಗು ಅನ್ವಯ.  

ನಮ್ಮ ಸುತ್ತಲಿನ ಎಲ್ಲ ಜೈವಿಕ ಅಂಶಗಳು ಮತ್ತು  ನಮ್ಮಲ್ಲಿ ಕಂಡು ಬರುವ ಸಾಮಾನ್ಯ ಹೋಲಿಕೆಯ ಲಕ್ಷಣಗಳು ಮಾನವನ ಗಮನಕ್ಕೆ ಏಕೆ ಬರಲಿಲ್ಲ ಎಂಬುದು ಅರ್ಥವಾಗದ  ಸಂಗತಿಯಾಗಿದೆ. ಏಕೆಂದರೆ, ಸಸ್ಯಗಳು ಸಹಾ ನಮ್ಮಂತಹ  ಜೀವಿಗಳೆಂದು    ಅರಿವು   ಇನ್ನೂ  ಸಹಾ  ಮೂಡಿಲ್ಲ. ನಮ್ಮ  ಅಜ್ಞಾನದ  ಪರಮಾವಧಿಯೆಂದರೆ  ಮಾಂಸಹಾರಿ  ಪ್ರಾಣಿಗಳೆಲ್ಲಾ  ಖಳನಾಯಕರಾಗಿವೆ.  ಪಾಪ.  ಕ್ರೂರ,  ವ್ಯಾಘ್ರ,  ನರಭಕ್ಷಕ  ಇತ್ಯಾದಿಯಾಗಿ  ಗುಣವಾಚಕಗಳಿಂದ                ಅವುಗಳನ್ನ   ಸನ್ಮಾನಿಸಿದ್ದೇವೆ.   

ಇನ್ನು ರಾಜ, ಅಧಿಕಾರ, ಸೇವಕ ಇತ್ಯಾದಿ ಸ್ಥರಗಳು ಹೇಗೆ ಬಂದವು ಈ ಪುರಾತನ ಸಮಾಜದಲ್ಲಿ? ಯಾವ ಜೀವಿಗಳು ಪರಿಸರದ  ಬದಲಾಗುವ ಅಂಶಗಳಿಗೆ ಯಶಸ್ವಿಯಾಗಿ ಹೊಂದಿಕೊಳ್ಳುತ್ತಿದ್ದರೋ  ಅವರೇ ಸಮರ್ಥರಾದರು. ಒಂದಾನೊಂದು ಕಾಲದಲ್ಲಿ ಇದು ಕೇವಲ ದೈಹಿಕಶಕ್ತಿಗೆ ಸೀಮಿತವಾಗಿತ್ತು.ಆದರೆ ವಿಕಾಸದ ನಂತರ ಭುದ್ಧಿಶಕ್ತಿಯೂ ಸಮರ್ಥರ ಉಳಿವಿಗೆ ಕಾರಣ ವಾಯ್ತು. ಯಾರ ಬಳಿ ಹೆಚ್ಚು ಆಹಾರ ಸಂಗ್ರಹ ಇತ್ತೋ ಅವರೆಲ್ಲ ಬಲಿಷ್ಠರಾಗಿ ನಾಯಕರಾದರು, ಒಡೆಯರಾದರು, ಕಡೆಗೆ ರಾಜರಾದರು.ಇನ್ನು ಉಳಿದ ವಿವಿದ ಹೊಂದಾಣಿಕೆ ಸಾಮರ್ಥ್ಯ ಹಾಗೂ ಪರಿಸರದ ಅಂಶಗಳ ಪರಿಣಾಮಕಾರಿ ಬಳಕೆಗೆ ಅನುಗುಣವಾಗಿ, ಪೈರನ್ನು ಬೆಳೆಯುವವ ರೈತನಾದ, ಪ್ರಾಣಿಗಳನ್ನು ಬೇಟೆಯಾಡಬಲ್ಲವ ಶಿಕಾರಿಯಾದ. ಹೀಗೆ ಅವರವರ ದೈಹಿಕ ಹಾಗು ಭೌದ್ದಿಕ ಸಾಮರ್ಥ್ಯಕ್ಕೆ ಅನುಗುಣವಾಗಿ,ಪರಿಸರದ ಅಂಶಗಳ ಅವಲಂಬನೆಗೆ ಅನುಗುಣವಾಗಿ  ಸಮಾಜದ ವಿವಿಧ ಸ್ಥರಗಳು ರೂಪುಗೊಂಡವು.ಈ ಮಧ್ಯೆ ದೇವರು,ಧರ್ಮ ಯಾವಾಗ ಹುಟ್ಟಿಕೊಂಡಿತೋ ಎಂಬುದನ್ನು ವಿಶ್ಲೇಷಿಸುವುದು ಸುಲಭವಲ್ಲ. ಹಾಗೂ ಎಲ್ಲವನ್ನು ಸರಳೀಕರಣ ಗೊಳಿಸುವುದು ಮತ್ತಷ್ಟು ಗೊಂದಲಕ್ಕೆ ಎಡೆಮಾಡಿಕೊಡಬಹುದು. ಪ್ರಾಯಶಃ ಅರ್ಥ ಮಾಡಿಕೊಳ್ಳಲಾರದ ಸಂಗತಿಗಳು ಮಾನವನ ಕುತೂಹಲ ಹೆಚ್ಚಿಸಿ,ಆ ಯೋಚನಾಕ್ರಿಯೆಯಿಂದಲೇ  ತನ್ನ ಇತಿಮಿತಿಯನ್ನು  ಅರ್ಥ ಮಾಡಿಕೊಂಡು ಅರ್ಥ ವಾಗದ ನೈಸರ್ಗಿಕ  ಲಕ್ಷಣಗಳಿಗೆ  ಹೆದರಿ,  ಅಸಾಹಾಯಕನಾದುದರಿಂದ ಹುಟ್ಟಿರಬಹುದು  ದೇವರು. 

ಪಳೆಯುಳಿಕೆ ಶಾಸ್ತ್ರದಲ್ಲಿ   ಮತ್ತು  ಮಾನವನ  ವಿಕಾಸದಲ್ಲಿ  ಕ್ರೋಮ್ಯಾಗ್ನಾನ ಮಾನವ   ಅಂದರೆ  ಸುಮಾರು  25000   ವರ್ಷಗಳಹಿಂದೆ  ಗುಹೆಗಳಲ್ಲಿ  ವಾಸಿಸುತ್ತಿದ್ದ ಆ ನಮ್ಮ ಪೂರ್ವಜ,  ಆಧುನಿಕ ಮಾನವನಂತೆ,  ಜೈವಿಕವಾಗಿ   ನಮ್ಮಷ್ಟೇ ಭುದ್ದಿಶಾಲಿಯಾಗಿದ್ದ.    ಅಂದರೆ  ಮಿದುಳಿನ ಗಾತ್ರ, ದೇಹದ ರಚನೆ, ನಿಲುವು ಇತ್ಯಾದಿ ಎಲ್ಲವೂ ಈಗಿನ ನಮ್ಮಂತೆ ಇದ್ದವು. ಆತ ಮಾತಾಡುತ್ತಿದ್ದ. ಯಾವ ಭಾಷೆ? ಗೊತ್ತಿಲ್ಲ.ತಾನು ನೋಡಿದ್ದನ್ನು ಕಾಪಿ ಮಾಡುವ ಅಥವಾ ತನ್ನದೇ ವಿಶಿಷ್ಟ ರೀತಿಯಲ್ಲಿ ರೂಪಿಸುವ ಕಲೆ ಅಂದರೆ ಚಿತ್ರಕಲೆ ಆತನಿಗೆ ಗೊತ್ತಿತ್ತು. ಆತನ  ಚಿತ್ರಕಲೆ  ಪ್ರತಿಭೆಗೆ  ಇಂದಿಗೂ  ಪುರಾವೆಗಳಿವೆ  ಫ್ರಾನ್ಸ್ ನ ಕ್ರೋಮ್ಯಾಗ್ನಾನ್ ಗುಹೆಗಳಲ್ಲಿ. ಅಂದು ಆತ ಬಿಡಿಸಿದ ತಾನು  ಬೇಟೆಯಾಡುತ್ತಿದ್ದ  ಪ್ರಾಣಿಗಳ  ಚಿತ್ರಗಳ  ವರ್ಣಚಿತ್ರ ಇಂದಿಗೂ ಇವೆ.ಮಾತನಾಡಲು ಬರುತ್ತಿತ್ತು ಎಂದು ನಂಬಲಾಗಿದೆ. ಅವನ ವಾಕ್ ಶಕ್ತಿ ಯನ್ನು ಅವನ  ಬುರುಡೆಯಲ್ಲಿನ  ಮೂಳೆಗಳ ಜೋಡಣೆಯಿಂದ ತಿಳಿದುಕೊಳ್ಳ ಬಹುದು.   ಆದರೆ ಇಂದು ಬಳಕೆಯಲ್ಲಿರುವ ಯಾವ ಭಾಷೆ ಎಂಬುದು  ನಮ್ಮ ಕಲ್ಪನೆಗೆ  ಮೀರಿದ  ವಿಷಯ.  ಕಾರಣ  ಮನುಷ್ಯ ತುಳಿದು  ಬಂದ ಹಾದಿಯಲ್ಲಿ  ಸಾವಿರಾರು ಭಾಷೆ  ಗಳನ್ನೂ  ಬಳಸುತ್ತಿದ್ದೇವೆ . ನಿಜ ಇಂದಿನ ಅತ್ಯಂತ   ಪ್ರಚಲಿತ ಭಾಷೆ ಇಂಗ್ಲಿಶ್ ಇರಬಹುದು. ಆದರೆ ನಮಗೆ ತಿಳಿದಂತೆ ಗ್ರೀಕ್, ಲ್ಯಾಟಿನ್, ಅರೇಬಿಕ್,  ಸಂಸ್ಕೃತ  ಇತ್ಯಾದಿ ಪ್ರಾಚೀನ ಭಾಷೆಗಳು ಈಗಿನ ಇಂಗ್ಲಿಶ್ ಗಿಂತ ತುಂಬಾ ಹಳೆಯವು ಹಾಗೂ ಈಗಿನ ಬಳಕೆಯಾಗುತ್ತಿರುವ  ಇಂಗ್ಲಿಶ್ ನಲ್ಲಿ ಎಲ್ಲಾ ಭಾಷೆಗಳು ಸೇರಿ ಹೋಗಿದೇ. ವಿವಿದ ಉರೋಪಿಯನ್ ದೇಶಗಳ  ಭಾಷೆ ಬೇರೆ, ಬೇರೆಯಾದರೂ ಮೂಲ ಐತಿಹಾಸಿಕ ಪ್ರಾಚೀನ ಭಾಷೆಯಿಂದಲೇ ಉಗಮಗೊಂಡಿರುವುದನ್ನು ಗಮನಿಸಬಹುದು. ಈ ವಾಸ್ತವಿಕ ಸಂಗತಿ ಅರಿತಮೇಲೆಯೂ, ನಮ್ಮ ಸಮಾಜದ ನಾವು   ಭಾಷಾಂಧತೆಯನ್ನು  ಕಂಡಾಗ  ಆಶ್ಚರ್ಯವಾಗುವುದು.  ಸಹಜ. ವಿದ್ಯಾವಂತರೂ ಸಹಾ ಭಾಷಾ ದುರಭಿಮಾನಕ್ಕೆ ಬಲಿಯಾಗಿರುವುದು ದುರದೃಷ್ಟಕರ. 

ಕೇವಲ ನೀರು,ಆಹಾರ
  
ಇದು ಒಂದು ಪದ. ಕನ್ನಡದ್ದೇ. ಭಾಷೆಯೇ ಅಷ್ಟು...ಮೂಲಪದ ಸಮಯಕ್ಕೆ ತಕ್ಕ ಹಾಗೆ ತನ್ನ ಮೂಲದ ಅಸ್ತಿತ್ವವನ್ನೇ ಕಳೆದು ಕೊಳ್ಳುತ್ತದೆ. ಪರಿವರ್ತನೆ. ಕ್ರಮೇಣ? ನಿಧಾನ? ಇದ್ದಕ್ಕಿದ್ದಹಾಗೆಒಟ್ಟಿನಲ್ಲಿ ಮೊದಲ ರೂಪ ಪೂರ್ಣ ಕಳೆದು ಕೊಳ್ಳದೆ ಇದ್ದರೂ
ಆರಂಭಕ್ಕೆ ಮುನ್ನ ಸೇರುಸುವ ಪೂರ್ವ ಪದದಿಂದಲೋ ತನ್ನ ಮುಂದೆ ಅಂತ್ಯಪದದ ಜೋಡಣೆಯಿಂದ ತನ್ನ ಸಾಹಿತ್ಯಾತ್ಮಕ ಹಾಗು ಪ್ರಚಲಿತ ವ್ಯವಹಾರಿಕ ಬಳಕೆಯಲ್ಲಿ ಬದಲಾಗಿ ಹೋಗುತ್ತದೆ.ಹಾಗೆ ಪರಿವರ್ತನೆ ಎಂಬ ಪದ ಬದಲಾಗಿ ವಿಜ್ಞಾನದ ಬಳಕೆಯಲ್ಲಿ ಹೊಸ ಅರ್ಥವನ್ನು ಕಂಡುಕೊಂದಿರುವುದರಿಂದ ಈಗ ಅದು ಕೆಲವರಿಗೆ ವಿಜ್ಞಾನದ ವಿದ್ಯಾರ್ಥಿಗಳಿಗೆ ಉತ್ಪರಿವರ್ತನೆ ಎಂದರೆ ಜೀವಶಾಸ್ತ್ರದಲ್ಲಿ ಬಳಕೆಯಲ್ಲಿರುವ ಅಂಗ್ಲ ಪದ Mutation ಗೆ ಸಮ್ಮಾನ ಅರ್ಥ ಎನಿಸುತ್ತದೆ.ಆ ಪದದ ಇತಿಹಾಸದ ಬಗ್ಗೆ ತಲೆ ಕೆಡಸಿಕೊಳ್ಳುವುದಿಲ್ಲ ಕಾರಣ ಈ ಪದಗಳ ಮೂಲ ಎಲ್ಲಿ?ಯಾವಾಗ? ಹೇಗೆ? ಏತಕ್ಕೆ? ಎಂದು ಶುರು ಮಾಡಿದರೆ ನಾವು ಅಂದುಕೊಂಡಂತೆ ಅದು ಆಂಗ್ಲ ಭಾಷೆಯಿಂದಲೂ ಹುಟ್ಟಿ ಕೊಂಡಿರುವುದಿಲ್ಲ.ಆ ಪದದ ಇತಿಹಾಸ ಗ್ರೀಕ್ ಅಥವಾ ಲ್ಯಾಟಿನ್ ಮೂಲದಿಂದ ಬಂದಿರುವುದು ಗೊತ್ತಾಗುತ್ತದೆ.

ಈ ಉತ್ಪರಿವರ್ತನೆ ಎಂಬ ಪದಕ್ಕೆ ಇಷ್ಟೊಂದು ಪೀಟಿಕೆ ಯಾಕೆ ಸಹಜ ಪ್ರಶ್ನೆ ಏಳುತ್ತದೆ. ಕಾರಣ ಇಷ್ಟೇ.... ಅನೇಕ ವಿಜ್ಞಾನದ
ಪದಗಳು ಅನೇಕ ಬರಹಗಾರ ಕೈಗೆ ಸಿಕ್ಕಿ ಅವರವರ ಮನಸ್ಸಿಗೆ ಬಂದಂತೆ ಅನುವಾದ ಮಾಡಿರುವುದರಿಂದ ಗೊಂದಲಕ್ಕೆ ಕಾರಣ ವಾಗುತ್ತದೆ. ಕೆಲವರು ಇಂಗ್ಲಿಶ್ ಪದಗಳನ್ನೇ ಕನ್ನಡೀಕರಿಸುವ ಪದ್ದತಿ ಇಟ್ಟು ಕೊಂಡಿದ್ದಾರೆ. ಉದಾಹರಣೆಗೆ ಕನ್ನಡದಲ್ಲಿ
ಫೋನ್ ಮಾಡುವುದು,( ಈಚೆಗೆ "ಒಂದ್ ಫೋನ್ ಹಾಕಮ್ಮ"ಎಂದು ಹೇಳುವುದನ್ನು ಕೇಳುತ್ತಿದ್ದೇವೆ ) ಎಂದು ಹೇಳುವುದನ್ನು ಕೆಲವರು ಫೋನಾಯಿಸು.ನಾಮಪದ ಇಲ್ಲಿ ಕ್ರಿಯಾಪದ ವಾಗಿದೆ. ಈ ರೀತಿಯ ಬಳಕೆಗೆ ಯಾರ ಅನುಮತಿ ಬೇಕು, ಹಾಗೆ ಭಾಷಾಂತರ ಮಾಡಲು ಕೆಲವು ನಿರ್ಧಿಷ್ಟ ಭಾಷನಿಯಮಗಳು ಇಲ್ಲವೇ? ಕೆಲವರು ಸಂಸ್ಕೃತ ದಿಂದ ಎರವಲು ಪಡೆದರೆ ಮತ್ತೆ ಕೆಲವರು ತಮ್ಮ ಸ್ಥಳೀಯ ಭಾಷೆಯನ್ನೂ ಆಧಾರವಾಗಿಟ್ಟುಕೊಂಡಿರುತ್ತಾರೆ.ಅವರ ಪ್ರಕಾರ ಗ್ರಾಮಾಂತರ ಪದಗಳ ಸೊಗಡನ್ನು ಎಲ್ಲರಿಗೂ ತಿಳಿಸುವ ಹುಂಬ ಉದ್ದೇಶ ವಾಗಿರುತ್ತದೆ. ಆದರೆ ಸಮಸ್ಯೆ ಎಂದರೆ  ನಮ್ಮ  ಕರ್ನಾಟಕದಲ್ಲಿ  ವಿವಿದ
ಭಾಗಗಳಲ್ಲಿ ಕನ್ನಡ ವಿಪರೀತ ಬದಲಾಗುತ್ತದೆ. ಹೀಗಾಗಿ ಆಯಾ ಪ್ರದೇಶಗಳ ಪದ ಬಳಕೆ ಬದಲಾಗುವುದರಿಂದ ಗೊಂದಲ
ಹೆಚ್ಚಾಗುವುದೇ ವಿನಃ ಕಡಿಮೆಯಾಗುವುದಿಲ್ಲ. ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವ ಹಾಗೂ ಬಳಕೆಯಲ್ಲಿರುವ ಚಾಲ್ತಿ ಪದ ಸಂಸ್ಕ್ರುತವಾಗಲಿ, ಇಂಗ್ಲಿಶ್ ಆಗಿರಲಿ, ಅಥವಾ ಯಾವುದೋ ಒಂದು ಪ್ರಾದೇಶಿಕ ಭಾಷೆಯಾಗಿರಲಿ ಬಂದರೆ ಅದಕ್ಕೆ ನಮ್ಮ ಮಡಿ ಅನವಶ್ಯಕ. ನಮ್ಮಲ್ಲಿ ಕನ್ನಡ ಪ್ರೆಮಿಗಳಿಗಿಂತ ಸಂಸ್ಕೃತ ದ್ವೇಷಿಗಳು ಅಥವಾ ಇಂಗ್ಲಿಶ್ ದ್ವೆಷಿಗಳೇ ಹೆಚ್ಚು. ಅವರ ಹುಚ್ಚು ಕನ್ನಡ ಪ್ರೇಮಕ್ಕೆ ಇಂಗ್ಲಿಶ್ ಕಲಿಕೆಯ ತಮ್ಮ ವೈಫಲ್ಯವೇ ಕಾರಣ ಎಂದು ಅವರ ಊಹೆಗೂ ಬರುವುದಿಲ್ಲ.ಅವರಿಗೆ ತಿಳಿಯದಂತೆ  ನಡೆಯುವ ವಿಚಿತ್ರ ಮಾನಸಿಕ ರೋಗ. ಬೆಂಗಳೂರಿನ ಅನೇಕರು ಕನ್ನಡದಷ್ಟೇ ಸ್ಪಷ್ಟ ವಾಗಿ, ತಮಿಳು, ತೆಲುಗು ಮಾತನಾಡುತ್ತಾರೆ.  ತಮಿಳು ಅಥವಾ ತೆಲುಗು ಪದಗಳಿಗೆ ಅವರ ಆಪೆಕ್ಷವಿಲ್ಲ. ಉದಾಹರಣೆಗೆ ನೋಡಿ. ಕೇದಿಗೆ ಎಂಬ ಸುಂದರ ಪದ, ಕವಿಗಳ ಕವನಗಳಲ್ಲಿ ಬರುವ ಕೇದಿಗೆಯ ಕಂಪು. ನನ್ನ ಪ್ರಕಾರ ಕೇದಿಗೆ ಎಂದರೆ ಎಲ್ಲರಿಗು ಅರ್ಥವಾಗುವ ಪದ ಎಂದುಕೊಂಡಿದ್ದೆ. ಆದರೆ ನಮ್ಮ ಬೆಂಗಳೂರು ಕನ್ನಡಿಗರಿಗೆ ಕೇದಿಗೆ ಅಂದರೆ ಅರ್ಥ ವಾಗುವುದಿಲ್ಲ. ಅವರಿಗೆ ತಾಳೆ ಹೂ ಎಂದರೆ ಹೌದ? ಅದಾ? ಅಂತ ರಾಗ ಎಳಿತಾರೆ. ಈ ತಾಳೆ, ತಾಟಿನುಂಗು ಇವೆಲ್ಲ ಪಕ್ಕ ತಮಿಳು ಪದಗಳು. ಅದಕ್ಕೆ ಮಡಿ ಇಲ್ಲ. ಬಳಸ ಬಹುದು. ಬೆಂಗಳೂರಿನ ಚೇಪೆ ಕಾಯಿ ಹೇಗೆ ಬಂತು? ಸೀಬೆ, ಬಿಕ್ಕೆ ಇತ್ಯಾದಿ ಇದರ ಇತರ ಬಳಕೆಯಾಗುವ ಪದಗಳು. ಇನ್ನು ಬೋರೆ ಹಣ್ಣು ಇಲ್ಲಿ ಎಲಚಿ ಹಣ್ಣು ಆಗಿದೆ.ಬೋರೆ ಮುಂಬೈ ಕರ್ನಾಟಕದ ಬೈರ್ ಪದದಿಂದ ಬಂದಿದೆ ಎಂದು ಕೊಳ್ಳಬಹುದು. ಇನ್ನೊಂದು ಉದಾಹರಣೆ ಎಂದರೆ ಚವಳೆಕಾಯಿ ಬೆಂಗಳೂರಿನಲ್ಲಿ ಗೋರಿಕಾಯಿ ಆಗಿದೆ.ಮಂಡಕ್ಕಿ ಕಳ್ಳೆ ಪುರಿ ಹೇಗಾಯ್ತು? ಹೀಗೆ ನೂರಾರು ಪದಗಳ ಉದಾಹರಣೆಗಳನ್ನು ನಾವು ಕೊಡಬಹುದು.ಇನ್ನು ದಕ್ಷಿಣ ಕನ್ನಡದ ಕನ್ನಡದ ಬಗ್ಗೆ ಹೇಳುವದಾದರೆ ಕೂಗು ಅಂದರೆ ಅವರ ಪ್ರಕಾರ ಅಳುವುದು, ನಮ್ಮ ಪ್ರಕಾರ ಜೋರಾಗಿ ಮಾತನಾಡುವುದು. ಬಾಯಿಗೆ ಬಂದಂತೆ ಕೂಗಾಡಬೇಡ,ಎಂದು ಹೇಳುತ್ತೇವೆ.ಅವರಿಗೆ ಈ ಅರ್ಥ ತಿಳಿಸಬೇಕೆಂದರೆ ನಾವು ಬೊಬ್ಬೆ ಹೊಡೆಯಬೇಡ ಎಂದಾಗ ಮಾತ್ರ.
ನನ್ನ ಹೇಳುವ ಉದ್ದೇಶ ಇಷ್ಟೇ...ಯಾವುದೇ ಭಾಷೆಯಲ್ಲಿ ಪದಗಳು ಎಲ್ಲಿಂದ,ಹೇಗೆ,ಯಾವಾಗ ಬಂದವು ಎಂಬುದಕ್ಕೆ ಇತಿಹಾಸ ವಿದೆ. ಅದರ ಆಳ ಅಧ್ಯಯನ ನಮಗೆ ಅನವಶ್ಯಕ.ಅದನ್ನು ಭಾಶಕಾರರು ನೋಡಿಕೊಳ್ಳುತ್ತಾರೆ. ನಮಗೆ ಪದದ ಇತಿಹಾಸಕ್ಕಿಂತ ಭಾಷೆ ಬೆಳೆಯುವುದು,ಜನಗಳಬಾಯಲ್ಲಿ ಅವುಗಳ ಸತತ ಉಪಯೋಗದಿಂದ ಮತ್ತು ಬಳಕೆಯಿಂದ ಉಂಟಾಗುವ ಜ್ಞಾನವರ್ಧನೆ ಬಹು ಮುಖ್ಯ.







Comments

Popular posts from this blog

Reunited...at last..

ಕಾಗೆ....

The Crow.