31-12-2013...
ಈ ದಿನ
ವರುಷದ ಕೊನೆಯದಿನ ಮಾತ್ರ
ಬೀಳ್ಕೊಡುಗೆ ಸಮಾರಂಭದಲಿ ಬಿಸಿ.
ಬರುವ ವರುಷ,ನಾಳೆಯ ಸ್ವಾಗತಕೆ ಸಂಭ್ರಮದ ತಯಾರಿ
ನಶೆ ಏರುವಂತೆ ನಿಷೆ ನಕ್ಕು ತೊದಲುವಳು ಈಗ
ಹೋಗುವ ಅವನು
ಬರುವ ಇವನು
ಈ ಇಬ್ಬರ ನಡುವೆ ನಾನು
ಬಾಳಿನ ರಿಲೇ ಓಟದಲಿ
ತುದಿಗಾಲಿನಲಿ ಸಿದ್ಧ ವಿರುವ ಸ್ಪರ್ಧಿಗಳಿಗೆ
ಬ್ಯಾಟನ ಹಸ್ತಾಂತರಿಸಲು ಕಾಯುತ್ತಿರುವೆ
ನಾಳೆ,
ನೀನು....
ಓಡಲೇ ಬೇಕು, ರೇಸ್ ಇನ್ನು ಮುಗಿದಿಲ್ಲ
ನಿನ್ನ ದಾಟಿ ಹೋಗುವ ಮೈಲಿಗಲ್ಲುಗಳ ಹಿಂದೆ ಹಾಕಿ,
ನಿಲ್ಲುವಹಾಗಿಲ್ಲ
ಹಿಂತಿರುಗಿ ನೋಡಲು ಅವಕಾಶ ಇಲ್ಲಿಲ್ಲ,
ಸ್ಥಿರವೇಗದಲ್ಲಿ ನಿನ್ನ ಓಟವಿರಲಿ.
ನೀ ನೀಡಲಿರುವ ಬ್ಯಾಟನ್ ಗಾಗಿ
ಕಾಯುತ್ತಿರುವ ಆ ಸ್ಪರ್ಧಿ ಗೂ ತಿಳಿದಿಲ್ಲ
ರೇಸ್ ನ ಮುಕ್ತಾಯ,ಗುರಿ....
ಬರುವವರೆಗೂ ಮತ್ತೊಂದು ವರುಷ
ನಿನಗೆ ಚಲನೆಯಷ್ಟೇ ಸಾಧ್ಯ.....
ಈ ದಿನ
ವರುಷದ ಕೊನೆಯದಿನ ಮಾತ್ರ
ಬೀಳ್ಕೊಡುಗೆ ಸಮಾರಂಭದಲಿ ಬಿಸಿ.
ಬರುವ ವರುಷ,ನಾಳೆಯ ಸ್ವಾಗತಕೆ ಸಂಭ್ರಮದ ತಯಾರಿ
ನಶೆ ಏರುವಂತೆ ನಿಷೆ ನಕ್ಕು ತೊದಲುವಳು ಈಗ
ಹೋಗುವ ಅವನು
ಬರುವ ಇವನು
ಈ ಇಬ್ಬರ ನಡುವೆ ನಾನು
ಬಾಳಿನ ರಿಲೇ ಓಟದಲಿ
ತುದಿಗಾಲಿನಲಿ ಸಿದ್ಧ ವಿರುವ ಸ್ಪರ್ಧಿಗಳಿಗೆ
ಬ್ಯಾಟನ ಹಸ್ತಾಂತರಿಸಲು ಕಾಯುತ್ತಿರುವೆ
ನಾಳೆ,
ನೀನು....
ಓಡಲೇ ಬೇಕು, ರೇಸ್ ಇನ್ನು ಮುಗಿದಿಲ್ಲ
ನಿನ್ನ ದಾಟಿ ಹೋಗುವ ಮೈಲಿಗಲ್ಲುಗಳ ಹಿಂದೆ ಹಾಕಿ,
ನಿಲ್ಲುವಹಾಗಿಲ್ಲ
ಹಿಂತಿರುಗಿ ನೋಡಲು ಅವಕಾಶ ಇಲ್ಲಿಲ್ಲ,
ಸ್ಥಿರವೇಗದಲ್ಲಿ ನಿನ್ನ ಓಟವಿರಲಿ.
ನೀ ನೀಡಲಿರುವ ಬ್ಯಾಟನ್ ಗಾಗಿ
ಕಾಯುತ್ತಿರುವ ಆ ಸ್ಪರ್ಧಿ ಗೂ ತಿಳಿದಿಲ್ಲ
ರೇಸ್ ನ ಮುಕ್ತಾಯ,ಗುರಿ....
ಬರುವವರೆಗೂ ಮತ್ತೊಂದು ವರುಷ
ನಿನಗೆ ಚಲನೆಯಷ್ಟೇ ಸಾಧ್ಯ.....
Comments