ಬಯಲಾಟ.....

 

ಆಗುಂತಕರನ್ನು ಆಪ್ತರನ್ನಾಗಿ
ಸಿಕೊಳ್ಳುವ ಸಮಯಪ್ರಜ್ಞೆ
ಸಾಮಾಜಿಕ ಶೋಕೇಸ್ ನಲ್ಲಿ ಮೈತ್ರಿ ಪ್ರದರ್ಶನ
ಏಣಿ ಏರುವಾಗಲೇ ಕೆಳಗೆ ಮಣೆ ಸಿಧ್ದ...
ಛಾವಣಿಯ ಗವಾಕ್ಷಿಯಲಿ ಇಣುಕಿದರೂ ಸರಿ
ಕೆಳಗಿಳಿದು ಕನ್ನಹಾಕಿ ದೋಚಿದರೂ ಸರಿ
ಏರುವುದೊಂದೆ ಗುರಿ
ಅದಕ್ಕೂ ಬೇಕು ಪ್ರತಿಭೆ ಮರಿ

ಛಾವಣಿಯ ಸ್ಥರ ಮುಖ್ಯ
ಪ್ರತಿಷ್ಟೆಯಷ್ಟೇ ಎತ್ತರಕೆ ವಿಶ್ವರೂಪ,
ಅಡಿಕೆಮರ ಹತ್ತುವ ಕನಸು, ಹಾರಿ
ಎಲ್ಲರೂ ಕಣ್ಣು ಹಾಯಿಸುವ ಪರಿ,
ಅನಾಮಧೇಯರು ಆಪ್ತರಾಗಿ
ಆಪ್ತರು ಮಿತ್ರರಾಗುವ ಸೋಜಿಗ
ಸ್ನೇಹಿತರು ಆಗಂತುಕರಾಗುವ ಬಾರಿ
ಸದಾ ಬದಲಾವಣೆಯಲ್ಲೇ ಇರುವ ಸರದಿ
ಸುತ್ತುತ್ತಲೇ ಇರುವ ಸೋಜಿಗದ ಪರಧಿ

ಪರಿಚಿತ, ಅಪರಿಚಿತ ಗೊಂದಲದಲ್ಲಿ
ಆಗುಂತಕನಾಗುವ ಅತ್ಮೀಯ,
ಅದ್ಯಾವುದೋ ಗಾದೆ
ಎರುವ ಸೂರ್ಯನಿಗೆ ಎಲ್ಲರೂ ಹೊಡೆಯುತ್ತಾರೆ ಸಲಾಮು

ಪಾದ ಒತ್ತುವ ಮೆಟ್ಟಿಲು
ಕಲ್ಲಾದರೇನು?, ಕೊರಡಾದರೇನು?, ಬಿದುರಾದರೇನು?
ಒತ್ತಿದ ಪಾದ ವಾಮನ, ಬಲಿ ಅಡಗಿದ ಪಾತಾಳದಲಿ
ಇನ್ನೆರಡು ಹೆಜ್ಜೆ ಬಾಕಿಇದೆ
ಎಲ್ಲಿಡಬೇಕೆಂಬ ಅವಸರ ವಿದೆ
ತಲೆಗಾಗಿ ತಡಕಾಟ, ಕಲೆಗಾಗಿ ಕಾದಾಟ
ಸೆಲೆಗಾಗಿ ಸೆಣಸಾಟ...ಯಾವುದಕ್ಕೋ ಹೋರಾಟ?
ಕೊಲೆಯ ಕಣ್ಣಾ ಮುಚ್ಚಾಲೆ ಆಟ,
ಇದು ಅಧ್ಬುತ ಬಯಲಾಟ.....

Comments

Popular posts from this blog

Reunited...at last..

ಕಾಗೆ....

The Crow.