ಮಳೆಯಿಂದ ಬೇಸಿಗೆಯವರೆಗೂ....
ಸಾರಿಸಿ,ಗುಡಿಸಿ, ರಂಗೋಲಿ ಬಿಟ್ಟ ಮಳೆ.ವರ್ಣಮಯ ದರೆಗೆ ಇನ್ನಿಲ್ಲದ ಖಳೆ, ಮನಸೋತ ಶಕುಂತಲೆಗೆ ಭಾಷೆಕೊಟ್ಟಮೇಘರಾಜ
ಮತ್ತೆ ಮರಳುವ ವಚನವಿತ್ತು.ಶಾಪಗ್ರಸ್ತ ಮಹಿಳೆ ವಸುಂಧರೆ. ಸಮಯಸಾದಕ ಇಂದ್ರನಂತೆ ಕದ್ದು ಬರುವ ಚಂದಿರ,ಹೊಳೆವ ಬಯಲು ಮಂದಿರ ನಿರಂಬಳ ಆಕಾಶ, ಸಿದ್ಧವಾಗಿದೆ ಸಿಂಗರಿಸಿಕೊಂಡು ಶೀತಾಲಿಂಗನ ಮಿಲನಕೆ, ಬೆಚ್ಚನೆಯ ಮುದ ಸ್ಪರ್ಷಕೆ ತಾರೆಗಳ ತೂಗುಉಯ್ಯಾಲೆಯಲ್ಲಿ.
ತಾಪತಗ್ಗಿಸಿ, ಹೆಪ್ಪು ಗಟ್ಟಿಸುವ ಪ್ರಿಯತಮನ ಆಗಮನಕೆ, ಈ ಛಳಿ... ಕೊಬ್ಬಿರುವ ಗೂಳಿ. ಚುಚ್ಚಿತನ್ನ ಕೊರೆಯುವ ಕೊಂಬುಗಳಿಂದ,ಇಳಿಯುತ್ತದೆ ಕೋಶ,ಕೋಶದ ಅಣುಕಣಗಳಲ್ಲಿ, ಇಳಿದು ಆಳಕೆ ಅಲಂಕಿರುಸುವ ಅಧಿಕಾರ ಪ್ರದರ್ಶನ, ಮರಗಿಡಗಳೆಲ್ಲಾ ಮಾಡಬೇಕಿದೆ ನಮನ.
ತಲೆತಗ್ಗಿಸಿ ಭಯದಲ್ಲಿ ನಿಂತ, ಜೋತುಬಿದ್ದ ಎಲೆ,ರೆಂಬೆಗಳಿಂದ, ಬಲವಂತ ಸಲಾಮ ಗಿಟ್ಟಿಸುವ ಸರ್ವಾಧಿಕಾರಿ. ತೂಗಿ ಮಲಗಿಸುತ್ತಾನೆ ಹಂಸಗೀತೆಯ ಜೋಗುಳದಲ್ಲಿ.ನಡುಕದಲಿ ನಗ್ನವಾದ ಹಸಿರು, ಮುನುಗುತ್ತಿದೆ ಬಡಕಲು ಅಸ್ತಿಪಂಜರ,ತನ್ನ ರೂಪ ಕಳೆದುಕೊಂಡ ಶಾಪಗ್ರಸ್ತ ನೀರು ಕಲ್ಲಾಗಿ ಕಾಯುವ ಅಹಲ್ಯೆ,
ನೀರಿಗೂ ಕ್ಷಮೆಇಲ್ಲ, ಕಾಯಲೇಬೇಕಿದೆ ವಿಮೋಚನೆಗೆ, ನೆಲತಳಕ್ಕೆ ಅಂಟಿಕೊಂಡ ಬಿಲವಾಸಿಗಳ ಪ್ರಾರ್ಥನೆ ದೇವರ ತಲುಪುವ ವರೆಗೂ
ಶರಣಾದ ಜೀವಿದಂಡು, ತಾಪರಹಿತ ಧಾಳಿಗೆ ಬೆದರಿ, ನಡೆಸಿದೆ ಪಥಸಂಚಲನ ಬಿಳಿಯ ಬಾವುಟ ಹಿಡಿದು,ಹರಿವ ನೀರು ಘನಿಸಿ, ಬಿಚ್ಚಿಕೊಳ್ಳುವ ಬಿಳಿಯ ಡಾಂಬರು ರಸ್ತೆ. ಹಿಮರಸ್ತೆ ಚಲಿಸುತ್ತದೆ ಯಾರಿಗೂ ಅನುಮಾನ ಬರದಂತೆ ಸಾವಕಾಶವಾಗಿ. ಕಾಡು,ನಾಡೆಲ್ಲಾ ಭಣ,ಭಣ,ಶುರುವಾಗಿದೆ ಗೂಡು ಸೇರುವ ಪಯಣ, ಎಲ್ಲೆಲ್ಲೂ ತಲ್ಲಣ.
ನಿಶ್ಯಭ್ದ ಸಂದೇಶ ಹರಿದಾಡಿ ದಮನಿಗಳಲ್ಲಿ, ಒಡೆವ ಕೋಶ, ಹರಿಸಿ ಜೀವರಸ ತಲುಪಿಸಿದ ಸಂದೇಶ.ಕಾಣದ ಸಂಚೊಂದು ಜೀವಪಡೆವ ಚಿದಂಬರ ರಹಸ್ಯ. ಕೊಡವಿಕೊಂಡು ತಲೆ ಎತ್ತುವ ಮೊಳಕೆ, ಹಿಗ್ಗಿ ಮೊಗ್ಗಾಗಿ, ಚಿಮ್ಮಿ ಚೀರುತ್ತವೆ ಉದ್ವೇಗದಲಿ. ನಶೆ ಏರಿದೆ ಕಾಡಿಗೆಲ್ಲಾ, ಚಿಗುರಿ ಕವಲಾಗುವ ಕುಡಿ ಮೀಸೆ, ಬಲೆಯಾಗಿದೆ ಬಾಗಿ ತೂರಾಡುತ್ತಿದೆ ಕುಡುಕನಂತೆ. ಕಲ್ಲಾದ ನಾರಿ, ನಾಚಿ,ನೀರಾಗುವ ಕಾಲ, ವಿದಾಯಹೇಳಿದ ಶಾಪ ವಿಮೋಚಕ ಸಿಧ್ದನಾದ ಸದ್ಯ, ಬರೆದಾಗಿದೆ ಆಗಲೇ ಸ್ವಾಗತ ಗೀತೆ ಒಂದು ನವ್ಯ ಪದ್ಯ ಬರಲಿರುವ ಬಣ್ಣತರುವ ವಸಂತನಿಗೆ. ಸ್ವಾಗತ ಗೀತೆ ಹಾಡಲು, ನಿಮ್ಮನ್ನೂ ಸೇರಿಸಲಾಗಿದೆ...

Comments