ಸೀರಿಯಸ್ ಆಗಿ ತಗೋಬೇಡಿ.... ತಮಾಷೆಗೆ...
ಅಹಂ ಅನ್ನು ಜೋಪಾನದಿ ಪೋಷಿಸಿ,
ಕಾವುಕೊಟ್ಟು ಬೆಚ್ಚಗಿಡುವ ಹೊಚ್ಚಹೊಸ ಮಂತ್ರ,
ಅತ್ಯಾಧುನಿಕ ಈ ಅದ್ಭುತ ತಂತ್ರ
ಎಲ್ಲರ ಆಕರ್ಷಿಸಿ, ಗಮನಸೆಳೆದು ಜೀವಂತಿಕೆಯ ಪ್ರದರ್ಶನ
ಹವಣಿಸುವ ಈ ಕುತಂತ್ರಕ್ಕೆ ಸಿಲುಕಿದವರು ಮಾತ್ರ ಅತಂತ್ರ
ಪ್ರಸಂಶೆಯ ಬೇಟೆ,ಯವ್ವನದ ಕನಸುಗಳ ಕಾಡಿನಲ್ಲಿ
ಈ ಫೇಸ್ ಬುಕ್ ನ ಮೆಚ್ಚುಗೆಯ ಸಂಗೀತದಲ್ಲಿ ರಣಿಸುತ್ತದೆ
ಸುಪ್ರಭಾತ ಯುವಕರ ಬೆಳಗಿನಲ್ಲಿ...
ನಾಲ್ಕಕ್ಷರದ ಈ ಸರಳ ಪದ ಆತ್ಮವಿಶ್ವಾಸವರ್ಧಕ ಸಾಧನ
ಕೆಳೆದ ವೇಳಾಪಟ್ಟಿಯ ಅನುಭವದ ಆಭಿವ್ಯಕ್ತಿ ಹಂಚಿಕೆ
ಸ್ವೀಕೃತಿಗೆ ರಸೀದಿ ಪಡೆಯಲು
ಹವಣಿಸುವ ನೂರಾರು ಕಾತುರದ ಕಣ್ಣುಗಳ ರೆಪ್ಪೆ ಮುಚ್ಚುವುದು ವಿರಳ
ಮುಖಪುಸ್ತಕದ ಪರದೆಗೆ ಅಂಟಿಕೊಂಡೇ ಇರುತ್ತದೆ ಅಸ್ವಸ್ಠಮನ
ಯಾರಾದರೇನು, ಏನಾದರೇನು, ಎಲ್ಲಿಂದಲಾದರೂ ಓ.ಕೆ
ಮೆಚ್ಚುಗೆಯ ಪೆಟ್ಟಿಗೆಗೆ ನೆಟ್ಟಿರುವಕಣ್ಣು
ಕಾಯುತ್ತವೆ ಮೆಚ್ಚುಗೆಮಾಪಕ ನಿರೀಕ್ಷೆಯಲ್ಲಿ
ಏರುಪೇರಾದ ಹೃದಯ ಬಡಿತಕ್ಕೆ ಅವ್ಯಕ್ತ ಆನಂದ ಪಡೆಯುವ ಸ್ವೀಕೃತಿದಾರ
ಕಾಯುತ್ತಾನೆ ಎಣಿಕೆಗಾಗಿ, ಅಭಿಪ್ರಾಯಕ್ಕಾಗಿ
ತನ್ನೆಲ್ಲಾ ಚಂದಾದಾರ ಬಳಗದಿಂದ
ಬಾಜಿಕಟ್ಟಿದ ಜೂಜುಗಾರನಂತೆ ಕನಸಲ್ಲೇ ವಿಹ್ವಲ ವ್ಯಸನಿ
ಫಲಿತಾಂಶದ ನಿರೀಕ್ಷಣೆಯಲ್ಲಿ,
ಯಾವುದೋ ಹೊಸ ಕಂಪನಿಗೆ ಹಣಹೂಡಿದ ಶೇರುದಾರ
ಪುಸ್ತಕ ಪ್ರಕಟಿಸಿ ವಿಮರ್ಷೆಗೆ ಹವಣಿಸುವ ಯುವ ಲೇಖಕನ ಹಾಗೆ
ವೃತ್ತಿಬಳಗದ ಗ್ರಾಹಕರ ವಿಳಾಸ ಹುಡುಕುವ ಈ ಪ್ರಕಾಶಕ
ತಕ್ಷಣ ನೋಡಬೇಕಿದೆ ತನ್ನ ಪ್ರಕಟಣೆಗೆ ಹರಿಯುವ ಪ್ರತಿಕ್ರಿಯ
ಸಂವಾದ, ಎಲ್ಲಿಂದ, ಓದಿಸಿಕೊಳ್ಳಬಹುದೇ?
ಲೇಖಕನು ನೀನೇ,,, ಪ್ರಕಾಶಕ, ವಿಮರ್ಶಕನೂ ನೀನೇ
ಓದುಗನು ನೀನೇ....ಇನ್ಯಾಕೆ ನಿನಗೆ ಮಾರಾಟದ ಗೊಡವೆ?
ಚಿಂತಿಸಬೇಡ....ಸಹೃದಯ ಕೂಟದಲಿ ನೂರಾರು ಉದಾರಿಗಳು,
ಓದದೆ ಒತ್ತುವ ಹವ್ಯಾಸಿ ಓದುಗರು...ಅವರೇ ನಮ್ಮ ಅಭಿಮಾನಿಗಳು
ನಾನೂ ಈ ಬಳಗದ ಆಜೀವ ಸದಸ್ಯ, ಅತಿ ಹಿರಿಯ.....

Comments