ಅರವತ್ತೈದಕ್ಕೆ ಕಾಲಿಟ್ಟ ವರ್ಷ.
ಇಂದಿಗೆ ಈ ಭೂಮಿಗೆ ೬೫ ವರ್ಷವಾಯಿತು ನನ್ನ ಪ್ರಕಾರ.
ತುಂಬಾ ಬದಲಾವಣೆ, ಸುಧಾರಣೆ ಕಂಡಿರುವ
ಈ ಬದುಕ ಹೊತ್ತ ಭೂಮಿಗೆ ಆಯಾಸವಾಗಿಲ್ಲ....
ಆದರೆ ಪ್ರವಾಹ, ಬಿರುಗಾಳಿ,
ಚಂಡಮಾರುತ,ಜ್ವಾಲಾಮುಖಿ, ಭೂಕಂಪ ಇತ್ಯಾದಿ
ವಿಕೋಪಗಳನ್ನು ಎದುರಿಸಿದರೂ ಶಿತಲಗೊಂಡು, ಕೃಶವಾಗಿದೆಯೇ ವಿನಾಃ ಸೋಲೊಪ್ಪಿಕೊಂಡಿಲ್ಲ.....
ತಾನೇ ಆಸರೆ ನೀಡಿದ ಆವಾಸಿಗಳ ಹರಿದು ತಿನ್ನುವ ಅಸಹ್ಯ ಪೈಪೋಟಿಯಿಂದ,
ಹೊದ್ದಿರುವ ಹೊದಿಕೆ ಹಳೆಯದಾಗಿ ಚಿಂದಿಯಾಗಿದ್ದರೂ,
ಕಾಮನಬಿಲ್ಲಿನ ಬಣ್ಣದ ತೇಪೆಗಳನ್ನು ಹೊತ್ತುತನ್ನತನ ಉಳಿಸಿಕೊಂಡಿದೆ.
ಆದರೆ ಬಳಲಿದೆ.....
ನಘ್ನವಾಗಿಲ್ಲ...ವಿನಾಶದನಂತರ ವಿಕಾಸ......
ಒಂದು ಆಶಾಕಿರಣ ಹೊತ್ತು ಉಸಿರುತ್ತಿದೆ.....
ಮೌನವಾಗಿ ಬದುಕು,ಅರ್ಥವಾಗದ ಒಪ್ಪಂದಗಳೊಂದಿಗೆ.....
ಮಡುಗಟ್ಟಿದ ಮೌನದ ಹಿಂದೆ ಕೋಪದ ಲಾವ ಜಮಾಯಿಸುತ್ತಿದೆ......
ಸ್ಫೋಠಗೊಳ್ಳುವುದೋ, ಅಥವಾ ಒತ್ತಡಕ್ಕೆ ಭೂಮಿಯೇ ನಡುಗಿ
ಛಿದ್ರವಾಗುವುದೋ ತಿಳಿದಿಲ್ಲ....
ಈ ಅನಪೇಕ್ಷಿತ ಬದಲಾವಣೆಗಳು ಅರ್ಥವಾಗದ ನನಗೆ
ಕಾಲವೇ ಘನೀಕರಿಸಬೇಕಿತ್ತು ಎನ್ನುವ ಬಾಲಿಶ ಆಸೆ.....
ವಿಕಾಸದ ಈ ಮುಖ ಭಯಂಕರ.....
ಆದರೆ....ಭೂಮಿ
ನಿನೇಕೆ ಇನ್ನೂ ಇಷ್ಟು ಸುಂದರ?
.
Comments