ಖಾಲಿ
ಗೊತ್ತಿಲ್ಲ....ಯಾಕೋ....
ತಲೆ ಪೂರಾ.... ಖಾಲಿ.........
ಮನಸ್ಸು, ಟೋಟಲ್ ವ್ಯಾಕ್ಯೂಮ್....
ಅಂತರಿಕ್ಷನೌಕೆಯ ಒಳಒತ್ತಡದಂತೆ...
ಅನಿಲರಹಿತ ಸರಳ ಖಾಲಿ ಅವಕಾಶ....
ಆದರೂ ಪರಮಾಣುಮೊತ್ತ ಸರಳ
ಆದರೆ ಸಂಕೀರ್ಣ.....
ಅಲ್ಲೂ ಬಿಡಲಿಲ್ಲ ಈ ಮಾನವ ರೂಪ
ಘನದಲ್ಲಿಯೂ ಅಸ್ತಿತ್ವ ಕಳೆದುಕೊಂಡ
ಹಗುರ, ತೇಲುವ ಪರಿಸರ....
ಆದರೆ ಓಜೋನ್ ರಹಿತ ಪದರದಲ್ಲೂ.....
ಕೃತಕ ಉಸಿರಾಟ....
ದೇವಕಣ,ಕಣ,ಕಣದಲ್ಲಿ.....
Comments