ಅತೃಪ್ತರು...
ಮಳೆ
ಅನಿರೀಕ್ಷಿತವಾದರೂ
ಅನಪೇಕ್ಷಿತವಲ್ಲ ಯಾರಿಗೂ..
ಎಂದಾದಾರೂ..
ಅಂತ ಹೇಳುವುದು,ನಗೆಪಾಟಲು,
ಕೇವಲ ಶ್ರೀಮಂತಿಕೆಯ ಮೋಜುಬಾಕ
ಪ್ರಚೋದಕ, ಹಗಲುಗನಸಿಗನಿಗೆ ಹದವಾದ ಪಾಕ
ಕಲ್ಪನೆಯ,ಕನಸುಗಳ ಉದ್ವೇಗಿ ಕನಸುಗಾರ ಕವಿ
ನಗರದ ಝಗಮಗದಲ್ಲಿ ಕೊರಗುತ್ತಾನೆ ಅನ್ನದಾತ
ತಗ್ಗು ಪ್ರದೇಶದ ಕುಗ್ಗಿದ ಜನಗಳ ಆವಾಸಕ್ಕೆ
ಮಳೆಯ ಅಮವಾಸ್ಯೆ, ಅರಿವಿಲ್ಲ ದೊರೆಗಳಿಗೆ ಈ ಸಮಸ್ಯೆ
ಎಗ್ಗಿಲ್ಲದೆ ಲಗ್ಗೆ ಹಾಕಿ ಒಕ್ಕಲೆಬ್ಬಿಸುವ ವರ್ಷ....
ತರಬಲ್ಲದೇ ನಮ್ಮ, ನಿಮ್ಮಂತೆವರಿಗೆ ಹರುಷ
ಜಡ್ಡುಹಿಡಿದ ಪಟ್ಟಭದ್ರತೆಗೆ ತಾಗದ ನಿಸ್ಪರ್ಷ
ಅಸಹಾಯಕತೆಯ ತಾಳ್ಮೆಯಲ್ಲಿ ಸ್ಪಂಧನ
ರಾಡಿಯಾಗುವ ಬದುಕಿನ ಆಕ್ರಂದನ
ನಿಶ್ಯಭ್ದ ಕಲ್ಲು, ಗಾಜುಗಳ ಸೌದದಲ್ಲಿ
ಹಂಸ ಧ್ವನಿಗೆ ಆಲಾಪನೆ
ಆದರೂ ಮಳೆ ಸುರಿಯುತ್ತದೆ ತನ್ನಿಷ್ಟ ಬಂದಂತೆ
ಸ್ವೇಚ್ಛೆಯಿಂದ, ಯಾರ ಹಂಗಿಲ್ಲದ ನಿಜಮುಕ್ತ
ಪ್ರಜಾತಂತ್ರದಲಿ ಅತಂತ್ರವಾದ ಅಗಣಿತ
ನಿಶ್ಚಲ ಅಸಹಾಯನಿಗೆ ಅನೀರೀಕ್ಷಿತ ಶಾಪ
ಪ್ರಕೃತಿಯ ಧೋರಣೆ,
ಪ್ರಶ್ನಾತೀತ ನಿಯಮಪಾಲಕ ನಿಷ್ಕರುಣಿ
ಬಯಲಲ್ಲಿ ಸುರಿಯಲಿ ಮಳೆ,
ಹರಿಯಲಿ ಹೊಳೆ ಹಳ್ಳಿಗಳಲ್ಲಿ, ಹದವಾಗಿ,
ಹಾರೈಕೆ, ಪೂರಯ್ಕೆ ಸಮವಾಗಲೆಂಬ
ಪ್ರತಿಫಲದ ಪ್ರಾರ್ಥನೆ...ಯಾರಿಗೆ? ಕೇವಲ ಬಯಕೆ
ಆದರೂ.... ಬಂಧುಗಳೇ ಸುಳ್ಳು ಹೇಳುವುದಿಲ್ಲ
ಮಳೆ ನಿಜಕ್ಕೂ ನನಗೆ ತುಂಬಾ ಇಷ್ಟ
ಕ್ಷಮಿಸಿ ಅರಿವಿದೆ ನಿಮಗಾಗುವ ಕಷ್ಟ
ನಿಮ್ಮ ಕ್ಷಮಾಪ್ಪಣೆಗೆ ಪಡೆದು ಮಾತ್ರ
ಕುರುಡು ಸಾಲು ಆಗದು ನಿಮ್ಮ ಬದುಕಿನ ಸೂತ್ರ
ಅವ್ಯಕ್ತ ಆನಂದದ ಹನಿಗಳು ಕೆಲವೊಮ್ಮೆ ಘನೀಕರಿಸಿದರೂ
ರಕ್ತ ತಿಳಿಯಾಗಿ ಮುಕ್ತ ಹರಿಯಬಿಡುವ ನಾಳಗಳ ಧಣಿ
ಅತೃಪ್ತ ಆಸೆಗಳ ಸಾಂದ್ರೀಕರಣ ತಡೆದು, ರಕ್ಷಿಸಿ ಹೃದಯ
ನೀರಾಗಿ,ಮಾಯವಾಗುವ ಹನಿಗಳು.
ಆವಿಯಾಗಿ ಆಕಾಶದಲ್ಲಿ
ನೆನಪಾಗದ ಕನಸುಗಳಂತೆ ಅಸ್ಪಷ್ಟ....
ಅತೃಪ್ತರಿಗೆ....ಬದುಕು...
ಕಾಣುವುದೇ ಇಲ್ಲ....ಆಕಾಶಬಳ್ಳಿ
ಆದುದರಿಂದಲೇ ಹೇಳಿದೆ
ಮಳೆ ಅನಿರೀಕ್ಷಿತವಾದರೂ
ಅನಪೇಕ್ಷಿತವಲ್ಲ ಯಾರಿಗೂ....ಎಂದಿಗೂ...

Comments

Popular posts from this blog

Reunited...at last..

ಕಾಗೆ....

The Crow.