ಕಾಡ ಗೀತೆ...
ಪ್ರವಾಸಿಗರು ಇವರು ಅಲೆಮಾರಿ ಬದುಕು
ಇದ್ದಾಗ ಎಲ್ಲರಿಗೂ ಹಂಚುವರು ಸರಕು
ಭೋರ್ಗರೆವ ಜಲಪಾತಗಳು ಎಣಿಸಿಲಿಕೆ ನೂರಾರು
ಛಳಿಗಾಲಕ್ಕೆ ಇವಕ್ಕೆ ದೊರಕುವ ಶಿಕ್ಷೆ ಗಡಿ ಪಾರು
ಇದ್ದಾಗ ಎಲ್ಲರಿಗೂ ಹಂಚುವರು ಸರಕು
ಭೋರ್ಗರೆವ ಜಲಪಾತಗಳು ಎಣಿಸಿಲಿಕೆ ನೂರಾರು
ಛಳಿಗಾಲಕ್ಕೆ ಇವಕ್ಕೆ ದೊರಕುವ ಶಿಕ್ಷೆ ಗಡಿ ಪಾರು
ಗುರುತ್ವಪ್ರೇಮಿಗೆ ಆಳದ ಅಳುಕಿಲ್ಲ ಎತ್ತರದ ಭಯವಿಲ್ಲ
ತಳ ಸೇರುವ ಮುನ್ನವೇ ತೇಲುವನು ಹಗುರಾಗಿ ಮೇಲ್ಮುಖಿ
ತಳ ದಡಗಳ ಮೋಹಕೆ ಸಿಲುಕದ ಹಟಮಾರಿ ಮಾಯಾವಿ
ಶಟ್ಟಿ ಬಿಟ್ಟಲ್ಲೇ ಪಟ್ಟಣ. ಭಯಂಕರ ತತ್ವಜ್ಞಾನಿ ನೀರಿನಂತೆ
ತಳ ಸೇರುವ ಮುನ್ನವೇ ತೇಲುವನು ಹಗುರಾಗಿ ಮೇಲ್ಮುಖಿ
ತಳ ದಡಗಳ ಮೋಹಕೆ ಸಿಲುಕದ ಹಟಮಾರಿ ಮಾಯಾವಿ
ಶಟ್ಟಿ ಬಿಟ್ಟಲ್ಲೇ ಪಟ್ಟಣ. ಭಯಂಕರ ತತ್ವಜ್ಞಾನಿ ನೀರಿನಂತೆ
ಆಕಾಶಕ್ಕೆ ಭಿತ್ತಿಯಾಗುವ ಪೋಷಕರ ವಿಸ್ತಾರ ಪರದೆ
ಅಂಬರದ ತುಂಬ ಒಟ್ಟಿರುವ ಬಿಳಿಹತ್ತಿಯ ಅಗಾಧ ಗಂಟು
ಘಾಡ ಬೂದಿ,ಒಮ್ಮೊಮ್ಮೆ ಕಪ್ಪಾದ ಕರಿ ನೆರಳಗೆ ನಂಟು
ಅಳೆಯುತ್ತದೆ ಆಕಾಶ ನೆಲವನ್ನು ಹನಿಗುಂಡುಗಳಿಂದ,
ಅಂಬರದ ತುಂಬ ಒಟ್ಟಿರುವ ಬಿಳಿಹತ್ತಿಯ ಅಗಾಧ ಗಂಟು
ಘಾಡ ಬೂದಿ,ಒಮ್ಮೊಮ್ಮೆ ಕಪ್ಪಾದ ಕರಿ ನೆರಳಗೆ ನಂಟು
ಅಳೆಯುತ್ತದೆ ಆಕಾಶ ನೆಲವನ್ನು ಹನಿಗುಂಡುಗಳಿಂದ,
ಆಕಾಶ ಹೊಳೆದು ಘರ್ಜಿಸುತ್ತದೆ ಒಮ್ಮೊಮ್ಮೆ ವಿದ್ಯುತ ಛಾಪ
ಕಾಡು ಆವಾಸಿಗಳಲ್ಲಿ ನಿರ್ಭಯ ಮೌನ ಸೀಳುವ ಝೇಂಕಾರ
ಕೊಂಬೆರೆಂಬೆಗಳಿಂದ ಹನಿಸಿ ನಿನಾದ, ವನರಾಗಕ್ಕೆ ಜಲಪಾತಗಳ ತಾಳ
ತೊರೆ,ಹಳ್ಳಗಳ ಆಲಾಪನೆಯಲಿ ಮೂಡುವ ವನಸ್ವರಗಳ ಮೇಳ
ಕಾಡು ಆವಾಸಿಗಳಲ್ಲಿ ನಿರ್ಭಯ ಮೌನ ಸೀಳುವ ಝೇಂಕಾರ
ಕೊಂಬೆರೆಂಬೆಗಳಿಂದ ಹನಿಸಿ ನಿನಾದ, ವನರಾಗಕ್ಕೆ ಜಲಪಾತಗಳ ತಾಳ
ತೊರೆ,ಹಳ್ಳಗಳ ಆಲಾಪನೆಯಲಿ ಮೂಡುವ ವನಸ್ವರಗಳ ಮೇಳ
Comments