ನನ್ನಕನ್ನಡಿಗರೊಂದಿಗೆ ....
ಭಾವನೆ,ಬರವಣಿ, ಭಾಷಣದಲ್ಲೇ ಬಂದಿಯಾದ ಕನ್ನಡ. ನಗರದ ಡೊಗರುಗಳಲ್ಲಿ ರಿಂಗಣಿಸುವುದಿಲ್ಲ ಪ್ರತಿಧ್ವನಿ, ಜನಸಾಮಾನ್ಯ ಬಳಕೆ, ವ್ಯವಹಾರದಿಂದ ಬಲುದೂರ.
ಕನ್ನಡ ಪೀಡಕರಿಗೆ ಸತ್ಕಾರ, ಪ್ರೇಮಿಗಳಿಗೆ ತಿರಸ್ಕಾರ. ಯಾವುದೋ ಮಮಕಾರ, ಎಲ್ಲಿಯದೋ ಅಹಂಕಾರ,ವೈಭವ,ವಿಲಾಸಿ ಜೀವನಕೆ ಅಂಟಿಕೊಂಡ ಪೊಳ್ಳು ಅಭಿಮಾನ
ಈಗ ಆಡಲೇ ಬೇಕಿದೆ, ಅನಿವಾರ್ಯ.... ಹಣಕೊಡುವ ಭಾಷೆ, ರಸಿಕತೆಯ ಋಣಕ್ಕೆ ಒಳಪಡಬೇಕಿದೆ, ಸಂಪೂರ್ಣ ಉತ್ಪರಿವರ್ತನೆ.
ಗ್ರಾಮೀಣ ಬದುಕಿನ ಸೊಗಡು ಸವೆದ, ಕನ್ನಡ ವೇ ಈಗ ಬರುಡು, ಮುಂದುವರಿಯಲಿದೆ, ಇವರಿಗೆ ಈ ಮುಗಿಯದ ಪುರುಡು.ನಗರದ ನಾಟಕದಲ್ಲಿ ವಹಿಸಲೇ ಬೇಕು ಇವರೊಂದು ಪಾತ್ರ
ನಿರ್ಧರಿಸುವವರು ನಾವಲ್ಲ ಪರದೇಶಿ ಮಾಲಿಕರು ಮಾತ್ರ. 
ಭಾವುಕರು ಯಾರಿಲ್ಲ ಎಲ್ಲರೂ ವಾಸ್ತವವಾದಿ ಭಂಡರೇ. ದೇಶ, ಭಾಷೆ, ಪ್ರೇಮ ಎಲ್ಲಕ್ಕೂ ಮಿಗಿಲು...ಉದರ ಉದಾರವದಿ ನಿಲುವು.ಸಾಮಾಜಿಕ ಸ್ಥಾನ ಮಾನ, ನಿರ್ಧರಿಸುವುದೇ ಇವರ ಬ್ಯಾಂಕ್ ಖಾತೆ, ತನುಜಾತೆ, ಕನ್ನಡಮಾತೆ ವೇದಿಕೆ ,ವಾರ್ಷಿಕ ಆಚರಣೆಗೆ ನಗ್ನತೆಗೆ ಹೊದಿಕೆ. 
ನವೆಂಬರ್ ನ ಪೈಗಂಬರ್ ಇವರು, ಇವರಿಗೆ ಜಗತ್ತೇ ಸೈಬರ್, ಎಲ್ಲೋ ಯಾರಿಂದಲೋ ಕೇಳಿದ್ದ, ಯಾರೋ ಕರೆಕೊಟ್ಟ ಸಾಲು. "ಜ್ಞಾನ ಬರಲಿ ಎಲ್ಲದಿಕ್ಕಿನಿಂದ,ತುಂಬಲಿ ನಮ್ಮ ಹೃದಯ, ಮಿದುಳುಗಳನ್ನು" ಇದು ಸಹಾ ಆಂಗ್ಲ ಪ್ರಭಾವಿ ಸಾಲು, ನಿಜ..ಆದರೆ... ಜ್ಞಾನ.... ಹಂಗುಮುಕ್ತ
ಸ್ವಾರ್ಥಕ್ಕೆ ತಕ್ಕಂತೆ ನಮ್ಮ ನಿಲುವು,ನಾವು ಆಶಾವಾದಿ ಅವಕಾಶವಾದಿಗಳು. ಒಲವು ಉಪಯೋಗಿಸುವ ಅವಕಾಶಕ್ಕೆ ಸೂಕ್ತವಾಗಿ ಅನುಕೂಲಸಿಂಧುಗಳು.ನ್ಯಾಯ,ನಾಯಕ, ನೀತಿ,ಅಭಿಮಾನ ಎಲ್ಲವೂ ಸಮಯ,ಸಾಂದರ್ಬಿಕ ನಿರೂಪಣೆ...ಜ್ಞಾನ...ಸಮಯಸಾದಕ ಪದ, ಅಜ್ಞಾನಿಗಳ ನಾಲಿಗೆಯಲ್ಲಿ ಹೊರಳುವ ವಾದ, ತೋರಿಕೆ ಮಾನವಪ್ರೇಮಿಗಳ ಕಿವುಡಾಗಿಸುವ ನಾದ.
ಕಾಂಚಾಣ ಜಾತ್ಯಾತೀತ, ಪ್ರಜಾಸತಾತ್ಮಕ ಪದ, ಎಲ್ಲರಿಗೂ ಸುಲಭ ಇಷ್ಟ, ಅದಕ್ಕೆ ಸ್ವಲ್ಪ ಬದಲಾವಣೆ. ಹಣಕ್ಕೆ ಜಾತಿ,ಧರ್ಮ ಯಾವುದೂ ಅಲ್ಲ,ಕಾಲಾತೀತ. ದೇಶಕ್ಕೂ ಮಿಗಿಲು ಹಣಗಳಿಕೆ, ಸುಖ, ವಿಲಾಸಿ ಜೀವನ.
ಜಾತ್ಯಾತೀತ, ವಾಕ್ ಸ್ವಾತಂತ್ರದ ಬುಡುಬುಡಿಕೆಯಲಿ, ಬುದ್ದಿಜೀವಿಗಳ ಭ್ರಮನಿರಸನ, ವ್ಯಕ್ತಿ ಪೂಜೆಯಲಿ ಗುಮ್ಮು,ವಿಕಾಸದ ಮಂತ್ರದಲಿ,ಗುಲಾಮಗಿರಿ ಹಾಕಿದ ಇತಿಹಾಸದ ಹಾದಿಯಲಿ, ತಲೆತಗ್ಗಿಸಿ ನಡೆಯುವುದೇ ಕನ್ನಡಿಗರ ಪಾಲು......
ಆದರೂ ಕೇಳಿ ಕನ್ನಡವಾಸಿಗಳೇ....ನಾಟಕ ಬಿಡಿ...ಮಾಡಬೇಡಿ ನಮ್ಮ ಭಾಷೆಯ ಲೇವಡಿ, ಮಾನವೀಯ ಗುಡಿ ಈ ನಮ್ಮ ಚಾವಡಿ....ಗಡಿಬಿಡಿಯಲ್ಲಿ ನಿರ್ಧರಿಸಬೇಡಿ.....ಸ್ಪೋಠಿಸಬಹುದು ನಮ್ಮ ಸಹನೆಯ ಗಡಿ.....!

Comments

Popular posts from this blog

Reunited...at last..

ಕಾಗೆ....

The Crow.