ಯಥಾಸ್ಥಿತಿ....
ಏನಿಲ್ಲ...ಜಗವೇ...
ನಿನ್ನ ಕೆಲಸ ನೀನು ಮಾಡು, ನೀನು ಕಾವಲುಗಾರ
ಕಾಳಜಿಬೇಡ, ಯಾವುದುನಿಂತಿಲ್ಲ, ಎಲ್ಲಾ ಯಥಾಪ್ರಕಾರ,
ಜನ ಸೃಜನಶೀಲ,ಜಗ ಕ್ರಿಯಾಶೀಲ, ನಿಲ್ಲುವುದಿಲ್ಲ ತಟಸ್ಥನಾಗಿ....
ನಿರಂತರ ಜೀವದ ಚಲನೆ, ಚಟುವಟಿಕೆಯ ಶಾಶ್ವತ ಚಿಲುಮೆ
ತನ್ನದೇ ಗುಂಗಿನಲಿ,ವೇಗದಪರಿವಿಲ್ಲದೆ,ಗಮನಿಸಲಾರದ ಘಟನೆಗಳಲ್ಲಿ
ಸರಿಯುತ್ತಿದೆ ಎಂದಿನಂತೆ ಕಾಲ.
ನಿನ್ನ ಕೆಲಸ ನೀನು ಮಾಡು, ನೀನು ಕಾವಲುಗಾರ
ಕಾಳಜಿಬೇಡ, ಯಾವುದುನಿಂತಿಲ್ಲ, ಎಲ್ಲಾ ಯಥಾಪ್ರಕಾರ,
ಜನ ಸೃಜನಶೀಲ,ಜಗ ಕ್ರಿಯಾಶೀಲ, ನಿಲ್ಲುವುದಿಲ್ಲ ತಟಸ್ಥನಾಗಿ....
ನಿರಂತರ ಜೀವದ ಚಲನೆ, ಚಟುವಟಿಕೆಯ ಶಾಶ್ವತ ಚಿಲುಮೆ
ತನ್ನದೇ ಗುಂಗಿನಲಿ,ವೇಗದಪರಿವಿಲ್ಲದೆ,ಗಮನಿಸಲಾರದ ಘಟನೆಗಳಲ್ಲಿ
ಸರಿಯುತ್ತಿದೆ ಎಂದಿನಂತೆ ಕಾಲ.
ಗಡಿಯಾರದ ಮುಳ್ಳಾಗಲಿ, ಡಿಜಿಟಲ್ ಫಲಕವಾಗಲಿ,
ಎಲ್ಇಡಿ ಪಂಚಾಂಗವಾಗಲಿ
ಮಾಡಲಾರವು ಎಂದಿಗೂ ಕರ್ತವ್ಯಲೋಪ.
ಉದಾರತೆಯ ಅಮಲಲ್ಲಿ, ಸಣ್ಣತನಗಳ ಪರಿವಿಲ್ಲದೆ
ಖುಷಿಯಾಗಿದ್ದೇವೆ ನಿರ್ಲಕ್ಷದ ಮತ್ತಿನಲ್ಲಿ
ಇಲ್ಲಿ ಎಲ್ಲರೂ ಕ್ಷೇಮ..
ಎಲ್ಇಡಿ ಪಂಚಾಂಗವಾಗಲಿ
ಮಾಡಲಾರವು ಎಂದಿಗೂ ಕರ್ತವ್ಯಲೋಪ.
ಉದಾರತೆಯ ಅಮಲಲ್ಲಿ, ಸಣ್ಣತನಗಳ ಪರಿವಿಲ್ಲದೆ
ಖುಷಿಯಾಗಿದ್ದೇವೆ ನಿರ್ಲಕ್ಷದ ಮತ್ತಿನಲ್ಲಿ
ಇಲ್ಲಿ ಎಲ್ಲರೂ ಕ್ಷೇಮ..
ಆಗಾಗ್ಗೆ ಬೇಸರವ ವಿವರಿಸಲು ಎದ್ದು ಗುದ್ದಾಡುತ್ತಾರೆ
ತಮ್ಮೆದುರಿಲ್ಲದ ಅದೃಷ್ಯ ಜನಗಳ ಕೆಣಕುತ್ತಾರೆ
ನೆನಪಾದಾಗ, ಸೂಕ್ತಸನ್ನಿವೇಶದಲ್ಲಿ,ತಮ್ಮ ಗರುಡಿಯಲ್ಲಿ
ಲುಪ್ತಆಸೆಯ ಒಡೆತನಕೆ ಬಡತನದ ಹಸಿವಿನ ಭಾಷಣ,
ಬರೆಯುತ್ತಾರೆ, ಬೇಕಾದರೆ ಒಂದು ಲೇಖನ...
ಪ್ರಪಂಚದ ಅಂಕುಡೊಂಕುಗಳೆಲ್ಲಾ
ಪ್ರಜ್ವಲಿಸುತ್ತವೆ ಪ್ರಖರವಾಗಿ ಪ್ರತಿಫಲಿನ
ಇಲ್ಲಿ ಎಲ್ಲರೂ ಸೌಖ್ಯ.
ತಮ್ಮೆದುರಿಲ್ಲದ ಅದೃಷ್ಯ ಜನಗಳ ಕೆಣಕುತ್ತಾರೆ
ನೆನಪಾದಾಗ, ಸೂಕ್ತಸನ್ನಿವೇಶದಲ್ಲಿ,ತಮ್ಮ ಗರುಡಿಯಲ್ಲಿ
ಲುಪ್ತಆಸೆಯ ಒಡೆತನಕೆ ಬಡತನದ ಹಸಿವಿನ ಭಾಷಣ,
ಬರೆಯುತ್ತಾರೆ, ಬೇಕಾದರೆ ಒಂದು ಲೇಖನ...
ಪ್ರಪಂಚದ ಅಂಕುಡೊಂಕುಗಳೆಲ್ಲಾ
ಪ್ರಜ್ವಲಿಸುತ್ತವೆ ಪ್ರಖರವಾಗಿ ಪ್ರತಿಫಲಿನ
ಇಲ್ಲಿ ಎಲ್ಲರೂ ಸೌಖ್ಯ.
ಮೆಚ್ಚುತ್ತಾರೆ ಸಹೃದಯಿಗಳು, ಭಾವುಕರು
ಆದರೂ ಎಲ್ಲರೂ ಅಲ್ಲಲ್ಲೇ ತಮ್ಮದೇ ವಾದದಲ್ಲಿ
ಮಗ್ನ, ವಿವಾದಗಳಲ್ಲೇ ವಿಕೃತ ಸುಖಜೀವಿಗಳು
ವ್ಯಕ್ತಿತ್ವ ದುಮ್ಮಾನದ ಭಾರದಡಿ ಸಿಲುಕಿ,ಸಪಾಟಾಗಿದೆ
ನೋವುಗಳು,ಸಾವುಗಳು,
ತರ್ಕ,ಚರ್ಚೆ,ವಿಚಾರ,ಚಿಂತನೆ ತಮ್ಮದೇ ಪರಿಭಾಷೆಯಲಿ
ಸುತ್ತುತ್ತಲೇ ಇರುತ್ತವೆ, ಭೂಗೋಳದಲ್ಲಿ,
ಇಲ್ಲಿ ಎಲ್ಲವೂ ಕುಶಲ,
ಆದರೂ ಎಲ್ಲರೂ ಅಲ್ಲಲ್ಲೇ ತಮ್ಮದೇ ವಾದದಲ್ಲಿ
ಮಗ್ನ, ವಿವಾದಗಳಲ್ಲೇ ವಿಕೃತ ಸುಖಜೀವಿಗಳು
ವ್ಯಕ್ತಿತ್ವ ದುಮ್ಮಾನದ ಭಾರದಡಿ ಸಿಲುಕಿ,ಸಪಾಟಾಗಿದೆ
ನೋವುಗಳು,ಸಾವುಗಳು,
ತರ್ಕ,ಚರ್ಚೆ,ವಿಚಾರ,ಚಿಂತನೆ ತಮ್ಮದೇ ಪರಿಭಾಷೆಯಲಿ
ಸುತ್ತುತ್ತಲೇ ಇರುತ್ತವೆ, ಭೂಗೋಳದಲ್ಲಿ,
ಇಲ್ಲಿ ಎಲ್ಲವೂ ಕುಶಲ,
ಹೊಸತು ಏನಿಲ್ಲ ಚಿಂತಿಸಲು,
ವಿವಿಧತೆ ಪರಿಸರದ ಸಮತೋಲನ ಮಂತ್ರ
ಪಾಪ,ಅಳವಡಿಸಿಕೊಂಡಿದ್ದೇವೆ ಅದೇ ತಂತ್ರ
ಎಲ್ಲವೂ,ಸರಿಯಾಗಿದೆ,ಎಂದಿನಹಾಗೆ,ಹಾಯಾಗಿ
ಮಸ್ತ್ ಆಗಿ,ಮೋಜಿನಮಜಲುಗಳು,
ನಾಳೆ ಬಂದು ನೋಡು,ಬೇಕಾದರೆ
ನಿಲ್ಲದ ಶಕ್ತ,ಅಶಕ್ತರ ಹೋರಾಟ
ಕಣ್ಣುಕುಕ್ಕಬಹುದು.ಇದು ಯಥಾಸ್ಥಿತಿ
ಎಲ್ಲವೂ ಸರಿಯಾಗಿದೆ!
ವಿವಿಧತೆ ಪರಿಸರದ ಸಮತೋಲನ ಮಂತ್ರ
ಪಾಪ,ಅಳವಡಿಸಿಕೊಂಡಿದ್ದೇವೆ ಅದೇ ತಂತ್ರ
ಎಲ್ಲವೂ,ಸರಿಯಾಗಿದೆ,ಎಂದಿನಹಾಗೆ,ಹಾಯಾಗಿ
ಮಸ್ತ್ ಆಗಿ,ಮೋಜಿನಮಜಲುಗಳು,
ನಾಳೆ ಬಂದು ನೋಡು,ಬೇಕಾದರೆ
ನಿಲ್ಲದ ಶಕ್ತ,ಅಶಕ್ತರ ಹೋರಾಟ
ಕಣ್ಣುಕುಕ್ಕಬಹುದು.ಇದು ಯಥಾಸ್ಥಿತಿ
ಎಲ್ಲವೂ ಸರಿಯಾಗಿದೆ!
Comments