ಬಂತು...ವರ್ಷ-2016.....

ಈ ದಿನ
ವರುಷದ ಕೊನೆಯದಿನ ಮಾತ್ರ!
ಬದುಕು ಬಹು ಧೀರ್ಘ, ಮುಗಿಯುವ ವರೆಗೂ
ಅನುಭವಿಸಿದ ನಲಿವು, ಕೊನೆ ಉಸಿರೆಳದ ನಿರ್ಧಾರಗಳು
ಬೀಗಿದ ಗೆಲವುಗಳು, ಸಹಿಸಿದ ಸೋಲುಗಳು,
ಬೀಳ್ಕೊಡುಗೆ ಸಮಾರಂಭ ಏರ್ಪಾಡು
ಬರುವ ವರುಷ,ನಾಳೆ
ಸ್ವಾಗತಕೆ ಸಂಭ್ರಮದ ತಯಾರಿ
ನಶೆ ಏರಿದಂತೆ ನಿಷೆ ನಕ್ಕು ತೊದಲುವಳು
ಈಗ, ನೆನಪು, ಸ್ವಪ್ನಗುರಿಗಳ ಸಂಕ್ರಮಣ ಪರ್ವ ಕಾಲ
ಮರೆವಿನ ಮುಸುಕಲ್ಲಿ ಹುದುಗಲಿರುವ ಭೂತ
ಕನಸುಗಳ ಆಶಾಕಿರಣ ಮೆರವಣಿಗೆಯ ಭವಿಷ್ಯ
ಬಸಿರಾಗುವ ಸಂಕಲ್ಪಗಳ ಮೇಳ
ಅದೇ ನಿಯಮಗಳ ಮಾಮೂಲು ಪಂದ್ಯ
ಆರಂಭವಾದ ರಿಲೇ ಓಟದಲಿ
ತುದಿಗಾಲಿನಲಿ ಸಿದ್ದ ವಿರುವ ಸ್ಪರ್ಧಿಗಳು...
ಬ್ಯಾಟನ್ ಹಸ್ತಾಂತರಿಸಲು ಕಾಯುತ್ತಿರುವೆ
ಅದೇ ದೂರ,ಅದೇ ಬದಲಿಸಲಾರದ ಜಾಡು
ತಡೆರಹಿತ, ಕುರುಹಿಲ್ಲದ, ಮುನ್ಸೂಚನೆ ! 
ಮುಕ್ತಾಯ...ಮರುಆರಂಭ
ನಾಳೆ,ಯಥಾ ಪ್ರಕಾರ....
ನೀನು....
ಓಡಲೇ ಬೇಕು, ರೇಸ್ ಇನ್ನು ಮುಗಿದಿಲ್ಲ
ದಾಟಿ ಹೋಗುವ ಮೈಲಿಗಲ್ಲುಗಳ ಹಿಂದೆ ಹಾಕಿ,
ನಿಲ್ಲುವಹಾಗಿಲ್ಲ, ಕಾಲ ಬಿಂದುವಿನ ನಡುವೆ
ಹಿಂತಿರುಗಿ ನೋಡಲು ಅವಕಾಶ ಇಲ್ಲಿಲ್ಲ,
ಸ್ಥಿರವೇಗದಲ್ಲಿ ನಿನ್ನ ಓಟವಿರಲಿ.
ನೀ ನೀಡಲಿರುವ ಬ್ಯಾಟನ್ ಗಾಗಿ
ಕಾಯುತ್ತಿರುವ ಆ ಸ್ಪರ್ಧಿ ಗೂ ತಿಳಿದಿಲ್ಲ
ರೇಸ್ ನ ಮುಕ್ತಾಯ,ಗುರಿಯ ಪರಿ....
ಬರುವವರೆಗೂ ಮತ್ತೊಂದು ವರುಷ
ನಿನಗೆ ಚಲನೆಯಷ್ಟೇ ಸಾಧ್ಯ.....
ಓಡು....
ಹಿಂದಾಯಿತು ವರುಷ.....
ಪ್ರದರ್ಶಿಸು ನಿನ್ನ ನಿಜ ಪೌರುಷ.....

Comments

Popular posts from this blog

Reunited...at last..

ಕಾಗೆ....

The Crow.