ಅನಿವಾರ್ಯ.
ಮುದಿತನ ಬರೆಯುತಿದೆ ಮುನ್ನುಡಿ
ಯವ್ವನದ ಬೃಹತ್ ಕಾದಂಬರಿಗೆ
ನೆನಪಲ್ಲೇ ಕಲ್ಲಾದ ಪಳೆಯುಳಿಕೆಯ ಬಿಡುಗಡೆ
ಪ್ರಾಯದ ಸ್ಥರಗಳಲ್ಲಿ ಹೂತ ಅಸ್ಪಷ್ಟ, ಅಪೂರ‍್ಣ
ಅಸ್ಥಿಪಂಜರದ ಅಸ್ತವ್ಯಸ್ತ ಮೂಳೆ ಚಿಲ್ಲಾಪಿಲ್ಲಿ
ಆವರಿಸದ ಕಲ್ಲು ಚೂರುಗಳು ದಾರಿಯಲ್ಲೆಲ್ಲ..
ದುರ್ಗಮ ರಸ್ತೆಯಲ್ಲಿ ಪ್ರತಿಧ್ವನಿಸುವ ಶಭ್ದ
ಮಾಯವಾಗಿದೆ ಮಾಧುರ್ಯ, ದಿಕ್ಕಿಲ್ಲದ ಬಯಲಲ್ಲಿ
ವೀಕ್ಷಣೆಯ ಕಂಪನದಲ್ಲಿ, ನಡುಕ
ನಿರ್ಲಿಪ್ತ ಬೆನ್ನುಡಿಗೆ ಸ್ವಸ್ತುತಿಯ ಸ್ವಗತವೇ?
ನಿಷ್ಟುರ ಪರಾಮರ್ಶೆ, ವಿಮರ್ಶಾತ್ಮಕ ನಿರೂಪಣೆ...
ನಿಷ್ಪಕ್ಷಪಾತ, ನಿರ್ಲಿಪ್ತ ಆತ್ಮಾವಲೋಕನ
ಇತಿಹಾಸದ ದಾಖಲೆ!!!!

Comments

Popular posts from this blog

Reunited...at last..

ಕಾಗೆ....

The Crow.