ಜಿರಳೆ.
ಕಾಫ್ಕಾನ
ರೂಪಪರಿವರ್ತನೆ
ಕಥೆಯ ನಾಯಕನಾಗಿ, ಅಂಗಾತ ಬಿದ್ದು ಪರದಾಡಿದ ನೀನು
ಈಗ ಮಹಾತಪಸ್ವಿಯಂತೆ
ಸುಖಾಸನದಲ್ಲೇ ಸಾರಿದ್ದೀಯಾ ಮನುಕುಲದ ಮೇಲೆ
ಅಘೋಶಿತ ಸಮರ
ರೂಪಪರಿವರ್ತನೆ
ಕಥೆಯ ನಾಯಕನಾಗಿ, ಅಂಗಾತ ಬಿದ್ದು ಪರದಾಡಿದ ನೀನು
ಈಗ ಮಹಾತಪಸ್ವಿಯಂತೆ
ಸುಖಾಸನದಲ್ಲೇ ಸಾರಿದ್ದೀಯಾ ಮನುಕುಲದ ಮೇಲೆ
ಅಘೋಶಿತ ಸಮರ
ಕೊರಕಲುಗಳಲ್ಲಿ, ಗಟಾರಿನ ಡೊಗರುಗಳಲ್ಲಿ
ಸುಸಜ್ಜಿತ ನವೀನಆಡುಗೆ ಕೋಣೆಯಲ್ಲಿ
ಕತ್ತಲು, ಮೂಲೆಗಳೇ ಇಲ್ಲದ ಆವಾಸ ಜಗತ್ತಿನಲ್ಲೇ ಇಲ್ಲ
ಸರ್ವಂತ್ರಯಾಮಿ, ನೆಲ,ಜಲಆವಾಸದಲ್ಲಿ
ತುಂಬಿ, ತುಳುಕುತ್ತಿದ್ದಾರೆ
ಸುಸಜ್ಜಿತ ನವೀನಆಡುಗೆ ಕೋಣೆಯಲ್ಲಿ
ಕತ್ತಲು, ಮೂಲೆಗಳೇ ಇಲ್ಲದ ಆವಾಸ ಜಗತ್ತಿನಲ್ಲೇ ಇಲ್ಲ
ಸರ್ವಂತ್ರಯಾಮಿ, ನೆಲ,ಜಲಆವಾಸದಲ್ಲಿ
ತುಂಬಿ, ತುಳುಕುತ್ತಿದ್ದಾರೆ
ವಜ್ರಾಸನದಲ್ಲಿ ನಿಶ್ಚಲ ನೀನು
ಕತ್ತಲಲ್ಲೇ ಮೀಸಿ ತಿರುವಿ ಹೊಂಚುಹಾಕುವ ಸನ್ಯಾಸಿ
ಬೆಳಕಿನಿಂದಲೇ ಬಹೀಷ್ಕೃತ ನೀನು
ನೀನಲ್ಲ ತ್ರಿನೇತ್ರ, ಸಹಸ್ರ ನೇತ್ರ...
ಹಸಿವ ವೈಸನಿ ನೀನು ನಿರಹಂಕಾರಿ, ಸರ್ವಭಕ್ಷಕ
ನಿನ್ನ ಹೊಂದಾಣಿಕೆ ಬಲು ಅಪರೂಪ
ಊಸರವಳ್ಳಿ ಸೋತು ಮಡಿಚಿದೆ ಬಾಲ ಶಾಶ್ವತವಾಗಿ
ಅದ್ಯಾರಿಗೆ ಗೊತ್ತು? ಈ ಗುಟ್ಟು, ನನ್ನ ನಿನ್ನ ಬಿಟ್ಟು
ಕತ್ತಲಲ್ಲೇ ಮೀಸಿ ತಿರುವಿ ಹೊಂಚುಹಾಕುವ ಸನ್ಯಾಸಿ
ಬೆಳಕಿನಿಂದಲೇ ಬಹೀಷ್ಕೃತ ನೀನು
ನೀನಲ್ಲ ತ್ರಿನೇತ್ರ, ಸಹಸ್ರ ನೇತ್ರ...
ಹಸಿವ ವೈಸನಿ ನೀನು ನಿರಹಂಕಾರಿ, ಸರ್ವಭಕ್ಷಕ
ನಿನ್ನ ಹೊಂದಾಣಿಕೆ ಬಲು ಅಪರೂಪ
ಊಸರವಳ್ಳಿ ಸೋತು ಮಡಿಚಿದೆ ಬಾಲ ಶಾಶ್ವತವಾಗಿ
ಅದ್ಯಾರಿಗೆ ಗೊತ್ತು? ಈ ಗುಟ್ಟು, ನನ್ನ ನಿನ್ನ ಬಿಟ್ಟು
ಮಡಚಿದ ಕೀಲುಕಾಲಲ್ಲೇ ಪದ್ಮಾಸನ
ನಿರಾಸಕ್ತ ಧ್ಯಾನಿ, ಹೊಂಚುಹಾಕುವ ಮೌನಿ
ಸ್ಪರ್ಷ್ಯಜ್ಞಾನಿ ಗ್ರಾಹಕ, ಸಕಲ ಭಕ್ಷವಿನಾಷಕ
ಮೂಳೆರಹಿತ ರೆಕ್ಕೆ ಕೇವಲ ತೋರಿಕೆ
ಹಠಾಟ್ ಹಾರಿ ಎದುರಾಗುವ ನೀನು
ಗೃಹಿಣಿಯರ ಕಂಠದಲಿ ಹಾಡಿಸುತ್ತೀಯಾ
ಸಪ್ತಸ್ವರದ ಆರೋಹಣ ಏಳನೇ ಸ್ವರ
ಮಾಡಿಸುತ್ತೀಯಾ ನರ್ತನ ಪ್ರದರ್ಶನ
ನಿರಾಸಕ್ತ ಧ್ಯಾನಿ, ಹೊಂಚುಹಾಕುವ ಮೌನಿ
ಸ್ಪರ್ಷ್ಯಜ್ಞಾನಿ ಗ್ರಾಹಕ, ಸಕಲ ಭಕ್ಷವಿನಾಷಕ
ಮೂಳೆರಹಿತ ರೆಕ್ಕೆ ಕೇವಲ ತೋರಿಕೆ
ಹಠಾಟ್ ಹಾರಿ ಎದುರಾಗುವ ನೀನು
ಗೃಹಿಣಿಯರ ಕಂಠದಲಿ ಹಾಡಿಸುತ್ತೀಯಾ
ಸಪ್ತಸ್ವರದ ಆರೋಹಣ ಏಳನೇ ಸ್ವರ
ಮಾಡಿಸುತ್ತೀಯಾ ನರ್ತನ ಪ್ರದರ್ಶನ
ನಿನ್ನ ಕಂಡು ಹೆದರದ ಧರ್ಯವಂತ
ಅಸಹಾಯಕ ಭಂಡರಿಗೆ
ಅಸಹ್ಯದಲ್ಲೇ ನಡುಕ ಹುಟ್ಟಿಸುವ ನೀನು
ವರ್ತಮಾನದ ಅವಿಶ್ಕಾರಕ್ಕೆ ಸವಾಲು
ಯುದ್ಧ ನೌಕೆಯಲ್ಲೇ ಬೀಡು ಬಿಡುವ ಧೀಮಂತ
ಕೋವಿಗಳ ಕೊಳವೆಗಳಲ್ಲಿ ನಿನ್ನ ರಾಸಲೇಲೆ
ಅಸಹಾಯಕ ಭಂಡರಿಗೆ
ಅಸಹ್ಯದಲ್ಲೇ ನಡುಕ ಹುಟ್ಟಿಸುವ ನೀನು
ವರ್ತಮಾನದ ಅವಿಶ್ಕಾರಕ್ಕೆ ಸವಾಲು
ಯುದ್ಧ ನೌಕೆಯಲ್ಲೇ ಬೀಡು ಬಿಡುವ ಧೀಮಂತ
ಕೋವಿಗಳ ಕೊಳವೆಗಳಲ್ಲಿ ನಿನ್ನ ರಾಸಲೇಲೆ
ಜೀವಕುಲ ವಿನಾಶ ಕಂಡ ಪ್ರೇಕ್ಷಕ,
ಪ್ರತ್ಯಕ್ಷದರ್ಶಿಯ ಅನುಭವ ಅಪಾರ, ನಿರ್ಭಾವುಕ
ಸಕಲ ಅಸ್ತ್ರನಿರೋಧಕ ವಜ್ರಕಾಯ, ನಿರ್ವಂಶ ಅಸಾಧ್ಯ
ಕಾಲಾತೀತ ಪ್ರಳಯಗಳಕಂಡ ಜೀವಸಂಕುಲ ಪೂರ್ವಜ
ಅಳಿವುಗಳ ದಾಟಿ, ಇಂದಿಗೂ ಉಳಿದ ಅಪ್ರತಿಮ
ಅಜೇಯ ಅದರೂ ಅತಿ ಪ್ರಾಚೀನ
ಪ್ರತ್ಯಕ್ಷದರ್ಶಿಯ ಅನುಭವ ಅಪಾರ, ನಿರ್ಭಾವುಕ
ಸಕಲ ಅಸ್ತ್ರನಿರೋಧಕ ವಜ್ರಕಾಯ, ನಿರ್ವಂಶ ಅಸಾಧ್ಯ
ಕಾಲಾತೀತ ಪ್ರಳಯಗಳಕಂಡ ಜೀವಸಂಕುಲ ಪೂರ್ವಜ
ಅಳಿವುಗಳ ದಾಟಿ, ಇಂದಿಗೂ ಉಳಿದ ಅಪ್ರತಿಮ
ಅಜೇಯ ಅದರೂ ಅತಿ ಪ್ರಾಚೀನ
ಅನೂಹ್ಯ ದೈತ್ಯ ಹಲ್ಲಿಗಳ ಸಮಕಾಲೀನ
ಇಂದಿಗೂ ನಮ್ಮ ಜೀವಂತ ಸಹಆವಾಸಿ
ಅಜರಾಮರ ಜೀವಕಣ ಹರಿಯುತ್ತಿದೆ
ವಿಕಾಸ ಕಾಲುವೆಯಲ್ಲಿ ಕಾಲನೊಂದಿಗೆ ಝರಿಯಾಗಿ
ಪ್ರವಾಹವಾಗಿ
ನಮ್ಮೆಲ್ಲರಿಗೂ ಪರಿಹರಿಸಲಾರದ ಸಮಸ್ಯೆಯಾಗಿ
ಎಲ್ಲೆಲ್ಲೂ ನೆಲೆಯಾದ ಸರ್ವಂತರ್ಯಾಮಿ
ಪ್ರಕೃತಿಮಾತೆಯ ವರಸಂತಾನವಾಗಿ.....
ಇಂದಿಗೂ ನಮ್ಮ ಜೀವಂತ ಸಹಆವಾಸಿ
ಅಜರಾಮರ ಜೀವಕಣ ಹರಿಯುತ್ತಿದೆ
ವಿಕಾಸ ಕಾಲುವೆಯಲ್ಲಿ ಕಾಲನೊಂದಿಗೆ ಝರಿಯಾಗಿ
ಪ್ರವಾಹವಾಗಿ
ನಮ್ಮೆಲ್ಲರಿಗೂ ಪರಿಹರಿಸಲಾರದ ಸಮಸ್ಯೆಯಾಗಿ
ಎಲ್ಲೆಲ್ಲೂ ನೆಲೆಯಾದ ಸರ್ವಂತರ್ಯಾಮಿ
ಪ್ರಕೃತಿಮಾತೆಯ ವರಸಂತಾನವಾಗಿ.....
Comments