ಕಳೆ...
ಲಾಲ್ ಬಾಗ್ ನಲ್ಲಿನ ಅಪರೂಪದ
ಆಕರ್ಷಕ ಜೀವವೈವಿದ್ಯ,ಲೋಕಪ್ರಸಿದ್ಧಿ
ವಿವರಣೆ ತಿಳಿದಿಲ್ಲ, ಜೀವವಿಜ್ಞಾನಿನಾನಲ್ಲ
ಸಸ್ಯತಜ್ಞನೂ ಅಲ್ಲ, ವರ್ಗೀಕರಣ ಬೇಕಿಲ್ಲ
ಇದೆಯಂತೆ ಹೇಳುತ್ತಾರೆ, ಇಲ್ಲಿಪುರಾತನ ಜರೀಸಸ್ಯಗಳು,
ಕೀಟಗಳು, ಹುಳುಗಳು,ಪಕ್ಷಿಗಳು ಮತ್ತೆ ಸ್ತನಿಗಳೂ....ಸಹಾ
ಪಳೆಯುಳಿಕೆಗಳಜೊತೆಯಲ್ಲಿ ಕ್ಲಿಷ್ಟ ಸಂಯೋಜನೆಯಲ್ಲಿ
ನೀವು ನೋಡಿರಬಹುದು ನೂರಾರು ಹೂದೋಟಗಳು
ಸಸ್ಯಕಾಶಿಗಳು, ಅಭಯಾರಣ್ಯಗಳು ನಿಮ್ಮ ಪ್ರವಾಸದಲ್ಲಿ

ಇತ್ತೀಚಿನ ಸಂಕರತಳಿ ಕ್ಯಾಕ್ಟಸ್ ಗಳು ಅತಿ ಆಕರ್ಶಕ
ಅಸಂಖ್ಯಾತ ಹೊಸಪ್ರಭೇದಗಳು ಅತ್ಯಾಕರ್ಶಕ ಬಣ್ಣ,
ಸಾದಾರಣ ದಾಸವಾಳವೇ ಇರಬಹುದು,
ಅನೂಹ್ಯ ಹೊಸ ಬಣ್ಣಗಳು, ರಚನೆವಿನ್ಯಾಸಗಳು
ಖಂಡಿತಾ ಇರಲಿಲ್ಲ ಈ ಮೊದಲು ಕಂಡಿರಲಿಲ್ಲ
ಎಲ್ಲವನ್ನು ನೋಡಲು ಸಮಯಯಾರಿಗೂ ಇಲ್ಲ
ಬಂದು ಸೇರುತ್ತಲೇ ಇವೆ ಹೊಸತಳಿ,ಸಂಕರಗಳು
ಕಲ್ಪನೆಗೂ ಸಿಗದ ಜೈವಿಕತಂತ್ರಜ್ಞಾನದ ಕೊಡುಗೆಗಳು
ನಿರ್ಲಿಂಗ ತದ್ರೂಪಿಗಳು!

ಹುಲುಸಾಗಿ ಬೆಳೆದಿವೆ, ಮಿಶ್ರತಳಿಗಳು, ಕುಲಾಂತರಿಗಳು
ಜಾಗರೂಕ ಜತನಮಾಡಿದ ಜಾಡಮಾಲಿ
ತಿಳುವಳಿಕಸ್ತ, ಜೀವಿಗಳಬಗ್ಗೆ ಎಲ್ಲಿಲ್ಲದ ಕಾಳಜಿ
ಆದರೂ ಸರ್ಕಾರಿನಿಯಮ, ಅವಧಿಯಮುನ್ನವೇ ಬಲವಂತ ನಿವೃತ್ತಿ,
ಹೊಸ ನಿಯುಕ್ತಿ, ಅನಿವಾರ್ಯ....
ಈಗ ಹೊಸಪೀಳಿಗೆ ಧೋರಣೆ, ನಿರ್ವಹಣೆ
ಮೆಚ್ಚುಗೆಯೂ ಬೇಕಿಲ್ಲ, ವೃತ್ತಿಪ್ರೇಮ ತಿಳಿದಿಲ್ಲ
ಕಾಸಿಗೆ ತಕ್ಕಷ್ಟು ಕೆಲಸ, ಭಯಂಕರ ಸಮಯಪ್ರಜ್ಞೆ!

ಕಣ್ಣು ತಪ್ಪಿಸಿ ಮೇಟಿಯ,ಹರಡಲಾರಂಬಿಸಿದೆ
ಹಾನಿಕರ ಜೀವಕಳೆ ತೋಟದಮೂಲೆ,ಮೂಲೆಯಲಿ
ಹೊಸ ಪ್ರಭೇದಕಳೆಯೊಂದು ಎಲ್ಲಿಂದಲೋ ಬಂದು.
ಅನುಭವಕೆ ಬಂದಾಗ ಅರಿವು,
ವಿಸ್ತಾರ ಹರಡಿದೆ ನಿರ್ಮೂಲನೆಯ ಮೀರಿ
ಗಿಡ,ಮರ,ಮೂಲಿಕೆ,ಗರಿಕೆ ಎಲ್ಲವನ್ನು ಕಿತ್ತೆಸುದು
ಬೆಳೆಯುವ ಭಂಡಪಿಂಡ, ಪ್ರಶ್ನಿಸಿದೆ ಜೀವಜಾಲವನ್ನೇ
ಉದ್ಯಾನನಗರದ,ಸಸ್ಯಪ್ರಿಯರ ಕೊರಗು ಹರಸಾಹಸ,
ಅತಿದೊಡ್ಡಸವಾಲು ಎದುರಿಗೆ, ಸಾಂಸ್ಕೃತಿಕ ಪರಂಪರೆಯ ಉಳಿವು
ನಿಯಂತಿಸಬಲ್ಲವೇ ಈ ಭಯಾನಕ ಕಳೆಯನ್ನು?
ಉಳಿಸಬಲ್ಲವೇ ಪೃಕೃತಿಯ ವೈವಿದ್ಯ ಸೃಷ್ಟಿಯನ್ನು?

Comments