ಕಾಗೆಯ ಕ್ಷಮೆಯಾಚಸಿ 


ತುಂಬಾ ಸಮಯದಿಂದ ಕರ್ಣಕಠೋರ
ಕಾವ್,ಕಾವ್,ಕಾವ್….
ಕಾಗೆಯ ಕೂಗು ಕೇಳಿಬರುತ್ತಿದೆ
ಹುಲುಸಾಗಿ, ದಟ್ಟವಾಗಿ ತುಂಬಿಕೊಂಡಿದ್ದ
ಆ ಮರದಿಂದ, ಈಗ ಹಂದರವಾಗಿ ಬೋಳಾಗಿದ್ದರೂ…
ಒಣಕಡ್ಡಿ ರೆಂಬೆಕವಲುಗಳ ಅಸ್ಥಿಪಂಜರದಲ್ಲಿ
ಏನೂ ಕಾಣುತ್ತಿಲ್ಲ ಹಿಮಕಾವಳದಲ್ಲಿ ಹುದುಗಿಹೋದ
ಬಿಳಿ ಪರದೆಯ ಮೇಲೆ ಕುಳಿತಿರುವ ಆಕೃತಿಗಳು ಅಸ್ಪಷ್ಟ
ಕಾಗೆಗಳ ಅಶ್ರವ್ಯ ಗದ್ದಲ ಮಾತ್ರ
ಕಿವಿಗೆ ಹೊಡೆಯುತ್ತಿದೆ ನಿರಂತರ ಗೊಂದಲ.
crow2ಕೆಲವರ ಪ್ರಕಾರ ಇದು ಭಯಂಕರ ಅಪಶಕುನ
ಯಾವುದೋ ವಿನಾಷದ ಸೂಚಕ
ಕಂಗಾಲಾಗಿದ್ದಾರೆ ಅತಿ ಸೂಕ್ಷ್ಮಜೀವಿಗಳು
ಹುಡುಕಿ, ಹಿಡಿದು ನಿಶಬ್ದಗೊಳಿಸಬೇಕು
ಇವು ಪಿಂಡವನ್ನು ತಿನ್ನಲು ಬಂದ ಪಿತೃ ಆತ್ಮಗಳಲ್ಲ
ಓಡಿಸಬೇಕು ಅಲ್ಲಿಂದ,
ಎಂಬ ವಾದ, ಇವರದು. ಶನಿಕಾಟ!
ಕೂಗನ್ನು ವಿಶ್ಲೇಷಿಸಿ ಅರಿಯಿರಿ,
ಧ್ವನಿಯ ದಯನೀಯತೆಯನ್ನು ಗಮನಿಸಿ
ಆಹಾರ,ಶತ್ರುಗಳ ಸುಳಿವೀಯುವ ಸೂಚನೆ ತಿಳಿಯಿರಿ
ಆಕರ್ಷಣೆಗಾಗಿ ಸ್ವಾಗತಿಸುವ ಸಂಕೇತ ಇರಬಹುದು
ಸಹಪ್ರಭೇದಗಳ ಸಹಾಯ ಯಾಚನೆ? ಯೋಚಿಸಿ,
ಅರ್ಥಮಾಡಿಕೊಳ್ಳಿ, ಆ ಕೂಗಿನ ಧ್ವನಿಯನ್ನು.
ಪ್ರಾಣಿಪ್ರಿಯರ ವಾದ.
ಕೆಲವರು ಅದು ಕಾಗೆಯೇ ಅಲ್ಲ…
ನಮಗೇ ತಿಳಿಯದ, ಬೇರೆ ಯಾವುದೋ
ವಲಸಿಗ ಹಕ್ಕಿ ಅಥವಾ
ಹೊಸತಳಿಯ ಆರ್ತನಾದವಿರಬಹುದು
ಹಾಗಾಗಿ ಅನವಶ್ಯಕ ಕಾಳಜಿ ಅನಗತ್ಯ
ಎಂಬದು ಇನ್ನೂಕೆಲವರ ತರ್ಕ
ಪರಿಸರಾತ್ಮಕವಾಗಿ ,
ನಮಗೂ ಅದಕ್ಕೂ ಯಾವ ಜೈವಿಕ ಸಂಬಂಧವಿಲ್ಲ
ನಾವು ಜೀವಿಪ್ರೇಮಿಗಳು,ಪರಿಸರಪ್ರಿಯರು
ಇದು ಎಲ್ಲರಿಗೂ ಸೇರಿದ್ದು, ಅವಿಭಾಜ್ಯ ಎಲ್ಲವೂ
ಎಲ್ಲರೂ ಅನಿವಾರ್ಯ
ಅಪಾಯಕಾರಿ…ಅಪರೂಪ ವ್ಯೆವಿದ್ಯ ಜೀವಜಾಲ
ಸಮತೋಲನವೇ ತಪ್ಪಬಹುದು
ಹೆದರಿಕೆಯ ಅಭಿವ್ಯಕ್ತಿ
ತಮ್ಮ,ತಮ್ಮ ನಿಲುವಿನ, ತಮ್ಮದೇ
ಹೋರಾಟಕ್ಕಾಗಿ ನಡೆಯುತ್ತಲೇ ಇರುವ
ಈ ತಡೆರಹಿತ ವಾಕ್ಸಮರ.  ಕಾಣಿಸಿಯೂ,
ಕಾಣಿಸದಂತಿರುವ ಆ ಕಾಗೆಯಧ್ವನಿಗಾಗಿ
ಆದರೆ
 ಅದೇ ಮರದಿಂದ, ಆ ಅಗೋಚರ ರೂಪಗಳಿಂದ
ಅದೇ, ಶಭ್ದ ನಿಲ್ಲದೇ ಮುಂದುವರಿದಿದೆ
ಕಾವ್,ಕಾವ್, ಕಾವ್, ಅಸನೀಯ ಏಕನಾದ
ಕಾಗೆಯ ಹಾಡು….ಈ ಕ್ಷಣದಲ್ಲಿ……


ಶೇಷಗಿರಿ ಜೋಡಿದಾರ್ 

Comments

Popular posts from this blog

Reunited...at last..

ಕಾಗೆ....

The Crow.