ಓತಿಕ್ಯಾತ.
ಎಲ್ಲಾ ಕೋನಗಳಲ್ಲೂ
ತಿರುಗಬಲ್ಲ ವಿಸ್ತಾರ ದೃಷ್ಟಿ, ಚಕ್ರಾಕಾರ
ಪರಿಪೂರ್ಣ ದುಂಡಾದ ಕಪ್ಪು ಕಣ್ಣು
ಛೇಧಿಸಿ ಚಲಿಸುತ್ತದೆ ಬೆಳಕಿನಂತೆ
ಸಕಲದಿಕ್ಕುಗಳ ಸಮನಾಂತರಗಳಲ್ಲಿ
ದೃಷ್ಟಿ ಮಾತ್ರ ಅತಿ ತೀಕ್ಷ್ಣ..
ಪರಪೋಷಕ ಕೀಟಾವಲಂಬಿ ಉರಗ
ಮೋಸಗಾರ ಸಲಗ, ರೋಗ ಮುಕ್ತ ಅಭಾದಿತ ಭಾಗ
ತನ್ನನೆಲೆಯಲ್ಲೇ ಕರಗಿ ಇಲ್ಲದಾಗುವ ಕಲೆ
ಅಪರೂಪದ ಛದ್ಮರೂಪಿ,ವಂಚಕ
ನಿಶ್ಚಲ ಬೇಟೆಗಾರ,ಮಹಾಸಮಯಸಾಧಕ
ಮೌನದಲ್ಲೂ ಬೇಟೆಯಾಡಬಲ್ಲ ಅಸಮಾನ್ಯ
ಅಂಟು,ಅಂಟಾದ ಸಿಂಬೆ ಸುತ್ತ ಉದ್ದ ನಾಲಿಗೆ
ದವಡೆಗಳ ಮಧ್ಯೆ ಗುಪ್ತ ವಿಷಗ್ರಂಥಿ, ನಿಶ್ಯಭ್ದ
ಹೇಗೆ ಬೇಕಾದರೂ ತಿರುಗಿಸಿ ಬಲೆ ಬೀಸಬಲ್ಲ
ನೆಲಪಟಾಕಿ ವಿಷ್ಣುಚಕ್ರದಂತೆ ಸುತ್ತಿಕೊಂಡ ಬಾಲ
ಅನುಮಾನ! ಬೆನ್ನೆಲುಬುರಹಿತ ಜೀವಿಯೇ!
ಇದು....ಪೆಡಸು ನಕ್ಶತ್ರ! ಹಸಿರಲ್ಲೇಕೇ ಪ್ರತ್ಯಕ್ಷ
ಅಲ್ಲ, ಮುದುರಿಕೊಂಡೇ ಹೊಂಚುಹಾಕುವ
ಶಿಕಾರಿ, ಹಾಕಲಿದ್ದಾನೆ ಸುಕ್ಕಾದ ಜಾಲ
ಚಿಪ್ಪಿನ ಒರಟಾದ ಮುಳ್ಳು ಚರ್ಮ
ಉಳುವಿಕೆಯ ಮರ್ಮ,ಶಿಲಾರೂಪಿ
ತ್ರಿಕೋನ ತಲೆಯಲ್ಲಿ ನುರಾರು ಮಡವೆಗಳು
ಬದಲಾಗುವ ವರ್ಣಕ,ಎಲೆಯ ಹಸಿರು,
ಕಂದು ಕಾಂಡ,ಕಪ್ಪುಟೊಂಗೆ ,ಬೊಡ್ಡೆ ಬಂಡೆ ಬಣ್ಣ!
ಏನು ಹೇಳಲಿ ಅಣ್ಣ... ಹೂವು...ಮಳೆಬಿಲ್ಲು ಬಣ್ಣ
ಕಾಮನಬಿಲ್ಲಿನ ಕಾಮಣ್ಣ
ಯಾವುದು ನಿನ್ನ ನಿಜಬಣ್ಣ?
ನಿಜ ನಿನ್ನ ಅಸ್ತಿತ್ವ, ಕೇವಲ ಸರಿಯುವ ಛಾಯೆ,
ಬೆಳೆದು ಕರಗುವ ನೆರಳು ಜೀವ ಸರಳು
ಬೆದರಿ ಬೆವರುವ ಬೇಟೆ, ನಿಶ್ಚಲ ಬೊಂಬೆ
ಭ್ರಮೆ,ಉಳಿಯುವಿಕೆಯ ಸಂಭವನೀಯ ಪ್ರಮಾಣ
ಪ್ರದಕ್ಷಣೆ ಹಾಕುತ್ತಿದೆ ಮರಣ,ಕಣ್ಮುಂದೆ
ಅರಿವಿಲ್ಲದೆ ದಿಟ್ಟಿಸಿ ಆಹುತಿಯಾಗುವ ಬೇಟೆ
ಸಮರ್ಥ ನೀನು ಮಿಸುಕಾಡುವುದಿಲ್ಲ
ಬದುಕುತ್ತೀಯಾ ಖಂಡಿತಾ,
ಸತತ ಬದಲಾಗುವ, ಗೋಜಲು ನೋಟ
ಈ ವರ್ಣಮಯ ದೃಷ್ಯಕಾಲದಲ್ಲಿ.....
Like
Comment

Comments

Popular posts from this blog

Reunited...at last..

ಕಾಗೆ....

The Crow.